ಗದಗ : ನಗರದಲ್ಲಿ ಅಕ್ರಮ ಮಳಿಗೆಗಳನ್ನು ಹಾಕಿಕೊಂಡುವರ ವಿರುದ್ಧ ಪೌರಾಯುಕ್ತರಾದ ಪ್ರಂಶಾತ ವರಗಪ್ಪನವರ ಖಡಕ್ ಎಚ್ಚರಿಕೆ.

ಗದಗ : ನಗರದಲ್ಲಿ ಅಕ್ರಮ ಮಳಿಗೆಗಳನ್ನು ಹಾಕಿಕೊಂಡುವರ ವಿರುದ್ಧ ಪೌರಾಯುಕ್ತರಾದ ಪ್ರಂಶಾತ ವರಗಪ್ಪನವರ ಖಡಕ್ ಎಚ್ಚರಿಕೆ.
ಗದಗ:ಸತ್ಯಮಿಥ್ಯ (ಆಗಸ್ಟ್ -01)
ಗದಗ – ಬೆಟಗೇರಿ ಅವಳಿ ನಗರದಲ್ಲಿ ನಗರದ ಪ್ರಮುಖ ಕಡೆಗಳಲ್ಲಿ ಅಕ್ರಮ ಮಳಿಗೆಗಳನ್ನು ಹಾಕಿಕೊಂಡವರು ಹಾಗೂ ಅಕ್ರಮ ಮಳಿಗೆಗಳನ್ನು ನಿರ್ಮಿಸಿ ಬಾಡಿಗೆಯನ್ನು ಕೊಡುತ್ತಿರುವವರ ಕುರಿತಂತೆ ಪೌರಾಯುಕ್ತರಾದ ಪ್ರಶಾಂತ್ ವರಗಪ್ಪನವರವರು ವಿರುದ್ಧ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.
ಗದಗ – ಬೆಟಗೇರಿ ಅವಳಿ ನಗರದಲ್ಲಿ ನಗರ ಸಭೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಕ್ರಮ ಮಳಿಗೆಗಳನ್ನು ಹತ್ತು ದಿನದ ಒಳಗಾಗಿ ತೆರವು ಗಳಿಸಬೇಕು ಇಲ್ಲದೇ ಇದ್ದರೆ ನಗರ ಸಭೆಯವರು ಮುಟ್ಟುಗೊಲು ಹಾಕಿಕೊಂಡು ಅಂಗಡಿಗಳನ್ನು ವಶಕ್ಕೆ ಪಡೆದುಕೊಳ್ಳುತ್ತೇವೆ ಎಂದು ಹೇಳಿದರು.
ಗದಗ j ಬೆಟಗೇರಿ ಅವಳಿ ನಗರದಲ್ಲಿ ದಿನದಿಂದ ದಿನಕ್ಕೆ ಸಂಚಾರ ದಟ್ಟನೇ ಹೆಚ್ಚಾಗುತ್ತಿದೆ. ಸಾರ್ವಜನಿಕರಿಗೆ ಸಂಚರಿಸಲು ರಸ್ತೆ ಬದಿಯ ವ್ಯಾಪಾರಿಗಳು ಅಕ್ರಮವಾಗಿ ಮಳಿಗೆಗಳನ್ನು ಹಾಕಿಕೊಂಡಿರುವದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಅಲ್ಲದೆ ಅನೇಕ ಅನಾಹುತಗಳು ಅಪಘಾತಗಳು ಸಂಭವಿಸುತ್ತಿದ್ದು ಆದ್ದರಿಂದ ಅಕ್ರಮ ಮಳಿಗೆಗಳನ್ನು ಹಾಕಿಕೊಂಡುವರು ತಾವಾಗಿಯೇ ಅಂಗಡಿಗಳನ್ನು ತೆರವುಗೊಳಿಸಿಕೊಂಡರೆ ಒಳ್ಳೆಯದು ಇಲ್ಲದೇ ಇದ್ದರೆ ನಗರಸಭೆಯಿಂದ ಮಳಿಗೆಗಳನ್ನು ವಶಕ್ಕೆ ಪಡೆದುಕೊಂಡು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು
ನಗರದ ಪ್ರಮುಖ ರಸ್ತೆಗಳಾದ ಗದಗನಲ್ಲಿ ಹಳೆ ಬಸ್ ಸ್ಟಾಂಡ್ ಹಾಗೂ ಹೊಸ ಬಸ್ ಸ್ಟಾಂಡ್ ಬಾಗಗಳಲ್ಲಿ ಮಾರುಕಟ್ಟೆಗಳಲ್ಲಿ ತಿಲಕ್ ಪಾರ್ಕ್ ಹತ್ತಿರ ಮಳಗುಂದನಾಕಾ ಬೆಟಗೇರಿ ಭಾಗದಲ್ಲಿ ಬಸ್ಟ್ಯಾಂಡ್ ಹತ್ತಿರ ಪಾಲಾ ಬದಾಮಿ ರಸ್ತೆಯ ಹತ್ತಿರ ನರಸಾಪುರ್ ಹೋಗುವ ರಸ್ತೆಯಲ್ಲಿ ಅನೇಕ ಕಡೆಗಳಲ್ಲಿ ಅಕ್ರಮ ಮಳಿಗೆಗಳು ಕಂಡುಬಂದಿದ್ದು ಅವುಗಳನ್ನು ಆವಾಗಿಯೇ ತೆರವುಗೊಳಿಸಬೇಕೆಂದು ಪತ್ರಿಕಾ ಪ್ರಕಟಣೆಯ ಮೂಲಕ ಹೇಳುತ್ತಿದ್ದೇವೆ ಎಂದರು.
ಇಂದು ನಗರದ ಹೊಸ ಬಸ್ ಸ್ಟ್ಯಾಂಡ್ ಹತ್ತಿರ 10 ಅಕ್ರಮ ಮಳಿಗೆಗಳನ್ನು ಹಾಕಿಕೊಂಡುವರು ವಿರುದ್ಧ ಕ್ರಮವನ್ನು ಕೈಗೊಂಡಿದ್ದು ಅವುಗಳ ತೆರವಿಗೆ ಹೇಳಲಾಗಿದೆ ಎಂದರು.
ವರದಿ : ಮುತ್ತು.