ಸ್ಥಳೀಯ ಸುದ್ದಿಗಳು
ಗ್ರಾಮ ಲೆಕ್ಕಧಿಕಾರಿಯನ್ನು ಕೊಠಡಿ ಒಳಗೆ ಕೂಡಿ ಹಾಕಿದ -ಹುಲ್ಲೂರ ಗ್ರಾಮಸ್ಥರು.
ಪಂಚಾಯತ್ ಪ್ರತಿ ಕೆಲಸಕ್ಕೂ ಲಂಚಕ್ಕೆ ಬೇಡಿಕೆ.

ಗ್ರಾಮ ಲೆಕ್ಕಧಿಕಾರಿಯನ್ನು ಕೊಠಡಿ ಒಳಗೆ ಕೂಡಿ ಹಾಕಿದ -ಹುಲ್ಲೂರ ಗ್ರಾಮಸ್ಥರು.
ಗದಗ: ಸತ್ಯಮಿಥ್ಯ (ಜು – 03).
ಗ್ರಾಮ ಲೆಕ್ಕಾಧಿಕಾರಿ ಬೆಳೆ ಪರಿಹಾರ ವಿತರಣೆಯಲ್ಲಿ ರೈತರಿಗೆ ಅನ್ಯಾಯ ಮಾಡಿದ್ದಾರೆ ಮತ್ತು ರೈತರಲ್ಲಿ ತಾರತಮ್ಯ ಮಾಡುವ ಮೂಲಕ ಅನ್ಯಾಯ ಮಾಡುತ್ತಿದ್ದಾರೆ, ಆದ್ದರಿಂದ ಬೆಳೆಪರಿಹಾರ ಸಮಸ್ಯೆ ಪರಿಹರಿಸಬೇಕು ಎಂದು ಗ್ರಾಮ ಪಂಚಾಯತ್ ಲೆಕ್ಕಾಧಿಕಾರಿಯನ್ನು ಪಂಚಾಯತ್ ಕೊಠಡಿಯಲ್ಲಿ ಕೂಡಿಹಾಕಿ ಪ್ರತಿಭಟಿಸಿದ ಪ್ರಸಂಗ ಜಿಲ್ಲೆಯ ಹುಲ್ಲೂರು ಗ್ರಾಮದಲ್ಲಿ ಜರುಗಿತು .
ಪಂಚಾಯತಿಗೆ ಸರಿಯಾಗಿ ಕೆಲಸಕ್ಕೆ ಬರುತ್ತಿಲ್ಲ ಜೊತೆಗೆ ಸರ್ಕಾರದ ಪ್ರತಿಯೊಂದು ಕೆಲಸಕ್ಕೂ ಹಣ ನೀಡುವಂತೆ ವಿನಾಕಾರಣ ಅಲೆದಾಡಿಸುತ್ತಿದ್ದಾರೆಂದು ಆರೋಪಿಸಿ ಕೊಠಡಿ ಒಳಗೆ ಕೂಡಿ ಹಾಕಿ ಬಾಗಿಲಿಗೆ ಬೀಗ ಹಾಕಿ ಪ್ರತಿಭಟನೆ ಸಂದರ್ಭದಲ್ಲಿ ಸಾರ್ವಜನಿಕರು ಆರೋಪಿಸಿದರು.
ವೆಂಕಟೇಶ್ ಸಿಂಗ್ ರಾಜಪೂತ ಗ್ರಾಮ ಪಂಚಾಯತ್ ಲೆಕ್ಕಾಧಿಕಾರಿಯಾಗಿದ್ದು ಕಚೇರಿಗೆ ಆಗಮಿಸುತ್ತಿದ್ದಂತೆ ಗ್ರಾಮಸ್ಥರು ಕೂಡಿ ಹಾಕಿ ಪ್ರತಿಭಟನೆ ನಡೆಸಿದ್ರು. ನಂತರ ಸ್ಥಳಕ್ಕೆ ಆಗಮಿಸಿದ ರೋಣ ಪೊಲೀಸರು ಗ್ರಾಮಸ್ಥರನ್ನ ಸಮಾಧಾನಪಡಿಸಿ ಬೀಗ ತೆಗೆಸಿದರು.
ವರದಿ : ವಿರೂಪಾಕ್ಷ.