ಜಿಲ್ಲಾ ಸುದ್ದಿ

ಕಲಾವಿದರ ಕೈಯಲ್ಲಿ ಅರಳುತ್ತಿವೆ ಗಣೇಶನ ಮೂರ್ತಿಗಳು: ಗಣೇಶ ಚತುರ್ಥಿಗೆ ಮಾರುಕಟ್ಟೆ ಲಗ್ಗೆ ಇಟ್ಟ ವಿನಾಯಕ.

Share News

ಕಲಾವಿದರ ಕೈಯಲ್ಲಿ ಅರಳುತ್ತಿವೆ ಗಣೇಶನ ಮೂರ್ತಿಗಳು: ಗಣೇಶ ಚತುರ್ಥಿಗೆ ಮಾರುಕಟ್ಟೆ ಲಗ್ಗೆ ಇಟ್ಟ ವಿನಾಯಕ.

ಗದಗ:ಸತ್ಯಮಿಥ್ಯ (ಅಗಸ್ಟ್ -31).

ಗಣೇಶ ಚತುರ್ಥಿ ಗದಗ್ ಬೆಟಗೇರಿ ಅವಳಿ ನಗರ ಸಿದ್ಧಗೊಳ್ಳುತ್ತಿದ್ದು ಕಲಾವಿದರ ಕೈಯಲ್ಲಿ ವಿವಿಧ ಬಗೆಯ ಗಣೇಶನ ಮೂರ್ತಿಗಳು ತಯಾರಾಗುತ್ತಿದ್ದು ಜನರ ನಡುವೆ ಬಾಂಧವ್ಯ ಬೆಸೆಯುವ ಹಾಗೂ ಸಂಭ್ರಮ ಮೂಡಿಸುವ ಗಣೇಶ ಚುತುರ್ಥಿ ಹಬ್ಬದ ಆಚರಣೆಗೆ ಈಗಾಗಲೇ ಅಂತಿಮ ಸಿದ್ಧತೆ ಮಾಡಿಕೊಳ್ಳುತ್ತಿದ್ದು ಮಣ್ಣಿನ ಮೂರ್ತಿಗಳನ್ನು ತಯಾರಿಸುವವರಿಗೆ ತಂಪನೆಯ ವಾತಾವರಣವೇ ಸವಾಲಾಗಿದೆ.

ಸೆಪ್ಟೆಂಬರ್‌ 7ರಂದು ಜಿಲ್ಲೆಯಾದ್ಯಂತ ಗಣೇಶ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದ್ದು, ಮೂರ್ನಾಲ್ಕು ತಿಂಗಳ ಹಿಂದಿನಿಂದಲೇ ಮೂರ್ತಿ ತಯಾರಿಕೆ ಆರಂಭವಾಗಿದೆ.

ಇದಕ್ಕೆ ಬೇಕಾದ ಮಣ್ಣು ಒಣಗಿದ್ದರೆ ಅದನ್ನು ಕಲಾವಿದರು ತಮಗೆ ಬೇಕಂತೆ ನೀರಿನೊಂದಿಗೆ ಬೆರೆಸಿಕೊಂಡು ಮೂರ್ತಿ ತಯಾರಿಸುತ್ತಾರೆ. ಆದರೆ ಜಿಲ್ಲೆಯಲ್ಲಿ ಮೇಲಿಂದ ಮೇಲೆ ಮಳೆ ಸುರಿಯುತ್ತಿರುವುದು ಒಂದೆಡೆಯಾದರೆ, ಸದಾ ತಂಪನೆಯ ವಾತಾವರಣ ಇರುವುದು ಕೂಡ ಮಣ್ಣಿನ ಮೂರ್ತಿಗಳು ಪೂರ್ಣವಾಗಿ ಒಣಗುತ್ತಿಲ್ಲ.

ಮಣ್ಣಿನ ಕಲಾಕೃತಿಗಳನ್ನು ತಯಾರಿಸುವ ಕಲಾವಿದರಿಗೆ ವರ್ಷಪೂರ್ತಿ ಒಂದಲ್ಲ ಒಂದು ಕೆಲಸ ಇದ್ದೇ ಇರುತ್ತದೆ. ಆದರೆ ಅವರಿಗೆ ಬಹು ಆದಾಯ ತಂದುಕೊಡುವುದು ಗಣೇಶ ಮೂರ್ತಿ ತಯಾರಿಕಾ ಕೆಲಸ. ಈಗಿನ ವಾತಾವರಣವೇ ಕಲಾವಿದರಿಗೆ ಸವಾಲಾಗಿ ಪರಿಣಮಿಸಿದೆ.

ಗದಗ ಸೇರಿದಂತೆ ಅನೇಕ ಕಡೆ ಮೂರ್ತಿ ತಯಾರಕರು ಈಗಾಗಲೇ ಕೆಲವು ಗಣೇಶ ಮೂರ್ತಿಗಳನ್ನು ಸಿದ್ಧಗೊಳಿಸಿದ್ದರೆ ಇನ್ನೂ ಕೆಲವು ಮೂರ್ತಿಗಳಿಗೆ ಅಂತಿಮ ರೂಪ ನೀಡುವಲ್ಲಿ ನಿರತರಾಗಿದ್ದಾರೆ. ಪಿಒಪಿ ಗಣೇಶ ಮೂರ್ತಿಗಳ ಮಾರಾಟ, ತಯಾರಿಕೆಗೆ ನಿಷೇಧ ಹೇರುವಂತೆ ಸರ್ಕಾರ ಸೂಚಿಸಿದೆ. ಆದರೆ ಇದು ಸಂಪೂರ್ಣವಾಗಿ ಕಾರ್ಯರೂಪಕ್ಕೆ ಮಾತ್ರ ಬಂದಿಲ್ಲ. ಅವುಗಳನ್ನು ಪರಿಶೀಲಿಸಿ ಕಡಿವಾಣ ಹಾಕಬೇಕಾದ ತಂಡ ಕೂಡ ಸಕ್ರಿಯವಾಗಿಲ್ಲ.

ಸಾಂಪ್ರದಾಯಿಕವಾಗಿ ಆಚರಣೆಗೆ ಮಣ್ಣಿನ ಮೂರ್ತಿಗಳೇ ಶ್ರೇಷ್ಠ ಎನ್ನುವ ಭಾವನೆ ಜನರಲ್ಲಿರುವ ಕಾರಣ ಬಹುತೇಕರು ಮಣ್ಣಿನ ಮೂರ್ತಿಗಳತ್ತ ಒಲವು ತೋರುತ್ತಿದ್ದಾರೆ. ಹಗುರ ಹಾಗೂ ತರಹೇವಾರಿ ಬಣ್ಣಗಳಿಂದ ಆಕರ್ಷಕವಾಗಿ ಪಿಒಪಿ ಕಾಣುತ್ತವೆ. ಇನ್ನು ಕೆಲವರು ಅವುಗಳ ಖರೀದಿಗೆ ಮುಂದಾಗುತ್ತಾರೆ. ತಿಂಗಳುಗಳ ಮುಂಚೆಯೇ ಗಣೇಶನ ಮೂರ್ತಿಗಳನ್ನು ಕಾಯ್ದಿರಿಸಲಾಗಿದೆ.

ಗದಗನಲ್ಲಿ ತಲೆಮಾರಿನಿಂದ ಗಣೇಶ ಮೂರ್ತಿ ತಯಾರಿಕೆಯಲ್ಲಿ ತೊಡಗಿರುವ ಅಕ್ಕಸಾಲಿಗ, ಕುಂಬಾರ ಹಾಗೂ ಇತರೆ ಕಲಾವಿದ ಕುಟುಂಬದವರು ಡಿಸೆಂಬರ್‌ ಹಾಗೂ ಯುಗಾದಿ ಹಬ್ಬದಿಂದಲೇ ಗಣೇಶನ ಮೂರ್ತಿ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಗಣೇಶನ ಮೂರ್ತಿಗಳ ಮಾರಾಟ ಪ್ರಕ್ರಿಯೆ ಚುರುಕುಗೊಂಡಿದ್ದು ಗ್ರಾಹಕರು ಮುಂಗಡ ಕೊಟ್ಟು ತಮ್ಮಿಷ್ಟದ ಮೂರ್ತಿ ಕಾಯ್ದಿರಿಸಿದ್ದಾರೆ.

ಜಿಗಿ ಜೇಡಿ ಮಣ್ಣಿನಿಂದ ಗಣೇಶನ ಮೂರ್ತಿ ತಯಾರಿಸುತ್ತಾರೆ. ಸಿಂಹಾಸನ ಗಣಪತಿ, ಬಲಮುರಿ ಗಣಪತಿ, ನಾಗರಹಾವು, ಇಲಿ, ತ್ರಿಶೂಲ, ಕಮಲ, ಕೈ ಹಾಗೂ ಡಮರುಗದ ಮೇಲೆ ಕುಳಿತ ಗಣಪತಿ, ನಿಂತ ಗಣಪತಿ, ಶ್ರೀಕೃಷ್ಣ, ಬಸವಣ್ಣನ ತಲೆ ಮೇಲೆ ಗಣೇಶ ಹಾಗೂ ವಿಶೇಷವಾಗಿ ಪುನೀತರಾಜ್‌ ಕುಮಾರ ಜೊತೆಗೆ ಗಣೇಶ ಮೂರ್ತಿ ಹೀಗೆ ವಿಶಿಷ್ಟ ರೀತಿಯ ಗಣಪತಿಗಳು ಸಿದ್ಧವಾಗಿವೆ.

ಯುವ ಗಣೇಶ ಮೂರ್ತಿ ತಯಾರಕರಾದ ಚೇತನ್ ರಾಜೇಶ್ ಬಾಕಳೆ ಅವರು ತಾತ ಮತ್ತಜ್ಜನ ಕಾಲದಿಂದಲು ಪರಿಸರ ಸ್ನೇಹಿ ಗಣೇಶನ ಮಣ್ಣಿನ ಮೂರ್ತಿಗಳನ್ನು ಮಾಡುತ್ತಿದ್ದು ನಗರದಲ್ಲಿ ಇವರು ತಯಾರಿಸುವ ಮಣ್ಣಿನ ಗಣೇಶನಿಗೆ ಭಾರಿ ಬೇಡಿಕೆಯಿದ್ದು ಜಿಲ್ಲೆಯ ವಿವಿಧ ಕಡೆಗಳಿಂದಲೂ ಇವರ ಹತ್ತಿರ ಗಣೇಶ ಮೂರ್ತಿಗಳನ್ನು ತೆಗೆದುಕೊಳ್ಳಲು ಬರುತ್ತಾರೆ ವಿವಿಧ ಸಂಘ-ಸಂಸ್ಥೆಯವರು ಒಂದು ತಿಂಗಳ ಮುಂಚಿತವಾಗಿ ಪರಿಸರ ಸ್ನೇಹಿ ಮಣ್ಣಿನ ಗಣಪನನ್ನು ತಯಾರಿಸಲು ಮುಂಗಡವನ್ನು ಮಾಡಿಸುತ್ತಾರೆ ವಿವಿಧ ಆಕರ್ಷಣೀಯಮಯವಾದಂತಹ ಗಣೇಶನನ್ನು ತಯಾರು ಮಾಡುವಲ್ಲಿ ಚೇತನ್ ರಾಜೇಶ್ ಬಾಕಳೆ ಅವರ ಕೈಚಳಕದಲ್ಲಿ ಪ್ರತಿ ವರ್ಷವೂ ಹೊಸ ಹೊಸ ನಮೂನೆಯ ವಿವಿಧ ಆಕರ್ಷಣೀಯಮಯವಾದಂತಹ ಗಣೇಶನ ಮೂರ್ತಿಗಳನ್ನು ತಯಾರು ಮಾಡುತ್ತಾರೆ

ಸಾರ್ವಜನಿಕರು ಪರಿಸರ ಸ್ನೇಹಿ ಗಣಪನನ್ನು ಖರೀದಿಸುವ ಮೂಲಕ ನಮ್ಮಂತ ಯುವ ಗಣೇಶನ ಮೂರ್ತಿ ತಯಾರಿಗೆ ಪ್ರೋತ್ಸಾಹವನ್ನು ನೀಡಬೇಕು ಪಿಒಪಿ ಗಣೇಶನ ಮೂರ್ತಿಗಳನ್ನು ಸಾರ್ವಜನಿಕರು ಪ್ರತಿಷ್ಠಾಪನೆಯನ್ನು ಮಾಡಬಾರದು ಸರ್ಕಾರವು ಪಿಒಪಿ ಗಣೇಶನ ಮೂರ್ತಿಗಳನ್ನು ನಿಷೇಧಿಸಿ ಹಲವಾರು ಕ್ರಮಗಳನ್ನು ಕೈಗೊಂಡರು ಕೆಲವು ಸಾರ್ವಜನಿಕ ಮಂಡಳಿಯವರು ಪಿಒಪಿ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡುತ್ತಾರೆ ಇದರಿಂದಾಗಿ ಪರಿಸರ ಸ್ನೇಹಿ ಮಣ್ಣಿನ ಗಣೇಶನನ್ನು ತಯಾರು ಮಾಡುವಂತಹ ನಮ್ಮಂತಹ ಯುವ ಗಣೇಶ ಮೂರ್ತಿ ತಯಾರಿಕರಿಗೆ ಪ್ರೋತ್ಸಾಹ ಇಲ್ಲದಂತಾಗುತ್ತಿದೆ ಆದ್ದರಿಂದ ಎಲ್ಲರೂ ಪರಿಸರ ಸ್ನೇಹಿ ಮಣ್ಣಿನ ಗಣೇಶನನ್ನು ಪ್ರತಿಷ್ಠಾಪನೆ ಮಾಡಿ ಪೂಜಿಸಬೇಕೆಂದು ಹಾಗೂ ಸರ್ಕಾರವು ಯುವ ಗಣೇಶ ಮೂರ್ತಿ ತಯಾರಿಕರಿಗೆ ಸರ್ಕಾರದ ಸೌಲಭ್ಯಗಳ ಅಗತ್ಯತೆ ಇದ್ದು ಸರ್ಕಾರವು ಯುವ ಗಣೇಶ ಮೂರ್ತಿ ತಯಾರಿಕರಿಗೆ ಪ್ರೋತ್ಸಾಹದಾಯಕ ವಾದಂತಹ ಸೌಲಭ್ಯಗಳನ್ನು ಒದಗಿಸುವಂತೆ ಹೇಳುತ್ತಿದ್ದಾರೆ.

– ಚೇತನ್ ರಾಜೇಶ್ ಬಾಕಳೆ.ಯುವ ಗಣೇಶ ಮೂರ್ತಿ ತಯಾರಕ

ವರದಿ : ಮುತ್ತು ಗೋಸಲ್ 


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!