
ಸಮಾಜದಲ್ಲಿ ಬಹಳಷ್ಟು ಶ್ರೀಮಂತರಿದ್ದಾರೆ ಆದರೆ ದಾನಿಗಳು ಕಡಿಮೆಯಾಗಿದ್ದಾರೆ- ಉಮೇಶ ಪಾಟೀಲ.
ನರೇಗಲ್: ಸತ್ಯಮಿಥ್ಯ (ಆ-23)
ಸಮಾಜದಲ್ಲಿ ಬಹಳಷ್ಟು ಜನ ಹಣವಂತರು ಇದ್ದಾರೆ ಆದರೆ ದಾನಧರ್ಮ ಮಾಡುವವರು ಕಡಿಮೆ ಜನರಿದ್ದಾರೆ ಹೀಗಾಗಿ ಸಮಾಜದಲ್ಲಿನ ಶ್ರೀಮಂತ ವರ್ಗ ಶೈಕ್ಷಣಿಕ ಕ್ಷೇತ್ರದ ಏಳಿಗೆಗೆ ಸಹಕಾರ ನೀಡುವದು ಅವಶ್ಯಕತೆ ಇದೆ ಎಂದು ಹಿರೆಅಳಗುಂಡಿ ಚನ್ನು ಪಾಟೀಲ ಫೌಂಡೇಷನ್‌ದ ಸಂಸ್ಥಾಪಕ ಕಾರ್ಯದರ್ಶಿ ಉಮೇಶ ಪಾಟೀಲ ನುಡಿದರು.
ಅವರು ನರೇಗಲ್ ಸರಕಾರಿ ಶಾಲೆಯಲ್ಲಿ ನಡೆದ ಅಮೃತ ಭೋಜನ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತ. ವಿದ್ಯಾರ್ಥಿಗಳೆ ನೀವುಗಳು ನಿಮ್ಮ ಆಟಪಾಠಗಳೊಂದಿಗೆ ದೇಶ ಪ್ರೇಮವನ್ನು ಬೆಳೆಸಿಕೊಳ್ಳಬೇಕು. ಅದಕ್ಕೆಂದೇ ನಮ್ಮ ಫೌಂಡೇಷನ್‌ದಿಂದ ರಾಷ್ಟ್ರ ಭಕ್ತರ ಪುಸ್ತಕಗಳನ್ನು ಹಂಚಲಾಗುತ್ತದೆ. ಇವುಗಳನ್ನು ನೀವುಗಳು ಓದಿ ದೇಶ ಪ್ರೇಮಿಗಳಾಗಿರಿ. ಅಮೃತ ಭೋಜನದಿಂದ ನಿಮ್ಮಲ್ಲಿ ಚೈತನ್ಯ ತುಂಬಿದೆ. ಈ ಅಮೃತ ಭೋಜನ ನಿರಂತರವಾಗಿ ನಡೆಯಲಿ ಎಂದು ಹಾರೈಸಿದರು.
ನಿವೃತ್ತ ಮುಖ್ಯ ಶಿಕ್ಷಕ ಅರುಣ ಕುಲಕರ್ಣಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಸಭೆಯಲ್ಲಿ ಅಮೃತ ಭೋಜನದ ದಾನಿಗಳನ್ನು ಸನ್ಮಾನಿಸಲಾಯಿತು. ಮುಖ್ಯ ಶಿಕ್ಷಕ ಬಿ.ಬಿ. ಕುರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್‌ಡಿಎಂಸಿ ಅಧ್ಯಕ್ಷ ಆನಂದ ಕೊಟಗಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಮೇಲೆ ಸದಸ್ಯ ಗಣಿ ಕುದರಿ, ಬಸವರಾಜ ಚೆನ್ನಿ, ಇಸ್ಮಾಯಿಲ್ ಮುದಗಲ್ಲ, ನಿವೃತ್ತ ಸೈನಿಕ ಎಂ.ಎಸ್. ಮಲ್ಲನಗೌಡ್ರ, ಶಮ್‌ಶಾದ್ ನಶೇಖಾನ, ಕಳಕಪ್ಪ ಮುಗಳಿ, ರಾಘವ ಹುಯಿಲಗೋಳ, ಗಣೇಶ ಬಂಡಿವಡ್ಡರ, ದರ್ಶನ ಗೋಡಿ, ರವಿ ಬಂಡಿವಡ್ಡರ, ಶಾಲಾ ಸಿಬ್ಬಂದಿಯವರು ಉಪಸ್ಥಿತರಿದ್ದರು.
ಶಿಕ್ಷಕ ಜೆ.ಎ. ಪಾಟೀಲ ಸ್ವಾಗತಿಸಿದರು. ಶಿಕ್ಷಕಿ ಎನ್.ಎಲ್. ಚವ್ಹಾಣ್ ನಿರೂಪಿಸಿದರು. ಶಿಕ್ಷಕ ಡಿ. ಎಸ್. ಕಳ್ಳಿ ವಂದಿಸಿದರು.
ವರದಿ : ಸುರೇಶ ಬಂಡಾರಿ.