ಜಿಲ್ಲಾ ಸುದ್ದಿ

ದ್ವಿತೀಯ ಪಿಯುಸಿಯಲ್ಲಿ ಜಗದ್ಗುರು ತೋಂಟದಾರ್ಯ ಪಿ.ಯು ಕಾಲೇಜಿನ ವಿದ್ಯಾರ್ಥಿಗಳ ಉತ್ತಮ ಫಲಿತಾಂಶ .

Share News

ದ್ವಿತೀಯ ಪಿಯುಸಿಯಲ್ಲಿ ಜಗದ್ಗುರು ತೋಂಟದಾರ್ಯ ಪಿ.ಯು ಕಾಲೇಜಿನ ವಿದ್ಯಾರ್ಥಿಗಳ ಉತ್ತಮ ಫಲಿತಾಂಶ                                                                        ಗಜೇಂದ್ರಗಡ :ಸತ್ಯಮಿಥ್ಯ (ಏ-08)

ನಗರದ ಜಗದ್ಗುರು ತೋಂಟದಾರ್ಯ ವಿಜ್ಞಾನ ಹಾಗೂ ವಾಣಿಜ್ಯ ಪಿ.ಯು ಕಾಲೇಜು ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಗಮನಾರ್ಹ ಸಾಧನೆ ಮಾಡಿದೆ.

ವಿಜ್ಞಾನ ವಿಭಾಗದಲ್ಲಿ ಸಂಗೀತಾ ರಾಘವೇಂದ್ರಸಾ ಪವಾರ 94.50% ಪ್ರಥಮ ಸ್ಥಾನ, ಶ್ರೇಯಾ ಶಿವಪ್ಪ ಸಂಗನಾಳ 90.33% ದ್ವಿತೀಯ ಸ್ಥಾನ ಮತ್ತು ಪ್ರತಿಕ್ಷಾ ಚವಡಿಮನಿ 87.83% ತೃತೀಯ ಸ್ಥಾನ ಗಳಿಸಿದ್ದಾರೆ.

                                                                              ವಾಣಿಜ್ಯ ವಿಭಾಗದಲ್ಲಿ ಲಬ್ದಿ ಬಾಗಮಾರ 93.33% ಪ್ರಥಮ ಸ್ಥಾನ, ಸಂಜೀವ ಪ್ರಕಾಶ ಕೋತಬಾಳ 89.00% ದ್ವಿತೀಯ ಸ್ಥಾನ ಹಾಗೂ ಸಹನಾ ರಾಜೇಶ ಇಟಗಿ 86.16% ತೃತೀಯ ಸ್ಥಾನ ಗಳಿಸಿ ಮಹಾವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ.             ಪರೀಕ್ಷೆಗೆ ಹಾಜರಾದ ಒಟ್ಟು 100 ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಲ್ಲಿ 07 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 61 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಮತ್ತು 13 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ, ಕಾಲೇಜಿನ ಒಟ್ಟು ಫಲಿತಾಂಶ 81% ರಷ್ಟಾಗಿದ್ದು, ಇಂಗ್ಲೀಷ, ಕನ್ನಡ ಹಾಗೂ ಅರ್ಥಶಾಸ್ತ್ರ ವಿಷಯಗಳ ಫಲಿತಾಂಶ 100% ಆಗಿದ್ದು

ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳಿಗೆ ಮತ್ತು ಉಪನ್ಯಾಸಕರಿಗೆ ಸಂಸ್ಥೆಯ ಅಧ್ಯಕ್ಷರಾದ ಪೂಜ್ಯ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು, ಸಂಸ್ಥೆಯ ಕಾರ್ಯದರ್ಶಿಗಳಾದ ಪ್ರೊ. ಶಿವಾನಂದ ಪಟ್ಟಣಶೆಟ್ಟರ, ಮಹಾವಿದ್ಯಾಲಯದ ಪ್ರಾಚಾರ್ಯರಾದ ಸಂಗಮೇಶ ಬಾಗೂರ ಹಾಗೂ ಕಾಲೇಜಿನ ಆಡಳಿತ ಮಂಡಳಿ, ಉಪನ್ಯಾಸಕರಾದ ಹುತ್ತಪ್ಪ ಮಾರನಬಸರಿ, ಶರಣು ಅಂಗಡಿ, ಅಭಿಲಾಶಾ ಗಂಜಿಹಾಳ್‌, ಶೃತಿ ನಡಕಟ್ಟಿನ, ಅಶೋಕ ಅಂಗಡಿ, ಆನಂದ ಜೂಚನಿ, ಮಲ್ಲನಗೌಡ ಗೌಡರ, ಶಿವಕುಮಾರ್, ಪ್ರಶಾಂತ ಹಾರೊಗೇರಿ, ಸಿದ್ರಾಮೇಶ್‌ ಕರಬಾಶೆಟ್ಟರ್‌, ಹನಮಂತ ನಡಕಟ್ಟಿನ, ಸುಶೀಲಾ ಮುಂಡರಗಿ, ಫಾತೀಮಾ ವಣಗೇರಿ, ಕರುಣಾ ಜಕ್ಕಲಿ, ಮಾಧುರಿ ನಾಡಗೇರಿ, ಪ್ರವೀಣ ಚಿತ್ರಗಾರ ಮತ್ತು ಬೋಧಕೇತರ ಸಿಬ್ಬಂಧಿಗಳು ಅಭಿನಂದನೆ ಸಲ್ಲಿಸಿ ಮುಂದಿನ ಶಿಕ್ಷಣಕ್ಕೆ ಶುಭ ಹಾರೈಸಿದ್ದಾರೆ.

ವರದಿ :ಸುರೇಶ ಬಂಡಾರಿ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!