
ಮುಂಡರಗಿ ಪೊಲೀಸ್ ಠಾಣೆಯ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ.
ಮುಂಡರಗಿ:ಸತ್ಯಮಿಥ್ಯ ( ಜುಲೈ -27)
ಕಳ್ಳತನವಾದ ಒಂದು ರೋಟಾವೇಟರ್, ಒಂದು ಟ್ರ್ಯಾಕ್ಟರ್ 2 ಟ್ರೇಲರ್‌ಗಳು ಮತ್ತು ಒಂದು ವಾಟರ್ ಟ್ಯಾಂಕರ್ ಸೇರಿ ಒಟ್ಟು 8 ಲಕ್ಷ 50 ಸಾವಿರ ರೂ ಮೌಲ್ಯದ ವಸ್ತು ಪತ್ತೆ ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳಾದ ಬಸವರಾಜ್ ಹಟ್ಟಿ. ಸುರೇಶ ಡಂಬಳ ಬಂಧಿಸಲಾಗಿದೆ.
ಮುಂಡರಗಿ ಶಹರದ ಹೇಮರೆಡ್ಡಿ ಮಲ್ಲಮ್ಮ ನಗರದಲ್ಲಿರುವ ಶರಣಪ್ಪ ಚನ್ನಬಸಪ್ಪ ಶಡ್ಲಗೇರಿ ಅವರ ಬಯಲು ಜಾಗೆಯಲ್ಲಿ ಇಟ್ಟಿದ್ದ ರೂಟಾವೇಟರ್ ಕಳ್ಳತನವಾದ ಬಗ್ಗೆ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು , ಕಳ್ಳತನವಾದ ರೋಟಾವೇಟರ್ ಪತ್ತೆ ಕಾರ್ಯಕ್ಕಾಗಿ ಬಿ.ಎಸ್. ನೇಮಗೌಡ ಪೊಲೀಸ್ ಅಧೀಕ್ಷಕರು ಗದಗ ಜಿಲ್ಲೆ ಇವರ ಆದೇಶದಂತೆ
ವಿಶೇಷ ತಂಡ ರಚನೆ ಮಾಡಿದ್ದು ಎಂ.ಬಿ. ಸಂಕದ ಹೆಚ್ಚುವರಿ ಗದಗ ಪೊಲೀಸ್ ಅಧಿಕ್ಷಕರು,ಹಾಗೂ ಪ್ರಭುಗೌಡ ಕಿರೇದಳ್ಳಿ ಡಿ.ಎಸ್.ಪಿ ನರಗುಂದ ಉಪ-ವಿಭಾಗ, ರವರ ಮಾರ್ಗದರ್ಶನದಲ್ಲಿ
ಮಂಜುನಾಥ ಕುಸುಗಲ್ ಪೊಲೀಸ್ ಇನ್ಸಪೆಕ್ಟರ್ ಮುಂಡರಗಿ, ಸುಮಾ ಗೊರಾಬಾಳ ಪಿ.ಎಸ್.ಐ ಮುಂಡರಗಿ ರವರು ನುರಿತ ಸಿಬ್ಬಂದಿಗಳಾದ ಎ.ಎಸ್.ಐ. ರವರಾದ ಎಸ್. ಡಿ ನರ್ತಿ, ವಿ. ವೈ. ತಂಟ್ರಿ, ಡಿ. ಎಮ್. ಹೊನಕೇರಿ ಮತ್ತು ಅಪರಾಧ ವಿಭಾಗದ ಸಿಬ್ಬಂದಿಗಳಾದ ಜೆ.ಐ ಬಚ್ಚೇರಿ. ಅವಿನಾಶ ಬ್ಯಾಳಿ, ಹೆಚ್.ಕೆ. ನದಾಫ, ಬಸವರಾಜ ಬಣಕಾರ, ಹಾಗೂ ಸಿಬ್ಬಂದಿಗಳಾದ ಮಹೇಶ ಗೊಳಗೊಳಕಿ, ಮಹೇಶ ಹೂಗಾರ ಇತರು ಸೇರಿ ತನಿಖೆ ಆರಂಭಿಸಿದ ತಂಡ ಕಳ್ಳ ತನ ಮಾಡಿದ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಭಂದಿತರ ವಿಚಾರಣೆ ನಡೆಸಿದ್ದಾರೆ ಈ ಕಾರ್ಯಕ್ಕೆ ಇಲಾಖೆಯ ಹಾಗೂ ಸಾರ್ವಜನಿಕರು ಸಹ ಹರ್ಷ ವೇಕ್ತ ಪಡಿಸಿದ್ದಾರೆ
ವರದಿ : ಮುತ್ತು.