
ನವರಾತ್ರಿ ಹಬ್ಬದ ಪ್ರಯುಕ್ತ ಗ್ರಾಮ ದೇವತೆ ಶ್ರೀ ಭೀಮಾಂಬಿಕಾ ದೇವಿಗೆ ವಿಶೇಷ ಪೂಜೆ.
ರೋಣ:ಸತ್ಯಮಿಥ್ಯ (ಅ -05).
ರೋಣ ತಾಲೂಕು ಇಟಗಿ ಗ್ರಾಮದಲ್ಲಿ ಗ್ರಾಮದ ಆರಾಧ್ಯ ದೇವಿಯಾದ ಶ್ರೀ ಭೀಮಾಂಬಿಕಾ ದೇವಿಗೆ ನವರಾತ್ರಿ ಹಬ್ಬದ ಪ್ರಯುಕ್ತ ಗ್ರಾಮದ ಮಹಿಳೆಯರು ವಿಶೇಷ ಪೂಜೆಯನ್ನು ಸಲ್ಲಿಸುತ್ತಿದ್ದು ಕಳೆದ ಮೂರು ದಿನಗಳಿಂದ ದೇವಿಗೆ ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸುತ್ತಿದ್ದಾರೆ ಅಲ್ಲದೆ ಹಬ್ಬದ ಪ್ರಯುಕ್ತ ಗ್ರಾಮದಲ್ಲಿ ಸಾಯಂಕಾಲ ಪುರಾಣ ಪ್ರವಚನ ಏರ್ಪಡಿಸಲಾಗಿದ್ದು ಪ್ರರಾಣ ಪ್ರವಚನದಲ್ಲಿ ಗ್ರಾಮದ ಮಹಿಳೆಯರು ಆಗಮಿಸಿ ನವರಾತ್ರಿ ಹಬ್ಬದ ಸಂಭ್ರಮದಲ್ಲಿದ್ದಾರೆ.
ಹಬ್ಬದ ಪ್ರಯುಕ್ತ ಶ್ರೀ ಭೀಮಾಂಬಿಕಾ ದೇವಿಗೆ ದಿನನಿತ್ಯ ವಿವಿಧ ಹೂವುಗಳಿಂದ ಅಲಂಕಾರಗೊಳಿಸಿ ಕಂಗೊಳಿಸುವಂತೆ ನವರಾತ್ರಿ ಹಬ್ಬದ ಆಚರಣೆಯನ್ನು ವಿಜೃಂಭಣೆಯಿಂದ ಗ್ರಾಮದ ಎಲ್ಲ ಮಹಿಳೆಯರು ಮಾಡುತ್ತಿದಾರೆ.
ನವರಾತ್ರಿ ಹಬ್ಬದ ಸಂಭ್ರಮಾಚರಣೆಯ ಕುರಿತು ಪ್ರತಿವರ್ಷದಂತೆ ಈ ವರ್ಷವೂ ನವರಾತ್ರಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದು ಕಳೆದ ನಾಲ್ಕು ದಿನಗಳಿಂದ ದೇವಾಲಯಕ್ಕೆ ತೆರಳಿ ನಮ್ಮ ಇಷ್ಟಾರ್ಥಗಳನ್ನು ಪೂರೈಸುವಂತೆ ದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸುತ್ತಿದ್ದೇವೆ ಎಂದು ಗ್ರಾಮದ ಮಹಿಳೆಯಾದ ಭೀಮವ್ವ ಜಡದೇಲಿ ಅವರು ಹೇಳಿದರು.
ನವರಾತ್ರಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಣೆಯನ್ನು ಮಾಡುತ್ತಿದ್ದು ಪ್ರತಿವರ್ಷದಂತೆ ಈ ವರ್ಷವೂ ಗ್ರಾಮದ ಆರಾಧ್ಯ ದೇವಿಯಾಗಿರುವ ಶ್ರೀ ಭೀಮಾಂಬಿಕಾ ದೇವಿಗೆ ಹಬ್ಬದ ಪ್ರಯುಕ್ತ ಶ್ರದ್ಧಾ ಭಕ್ತಿಯಿಂದ ವಿಶೇಷ ಪೂಜೆಯನ್ನು ಸಲ್ಲಿಸುವುದರೊಂದಿಗೆ ನವರಾತ್ರಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಿದ್ದೇವೆ ಎಂದು ಗ್ರಾಮದ ಮಹಿಳೆಯಾದ ಅನ್ನಪೂರ್ಣ ಕಟಗೇರ ಅವರು ಹೇಳಿದರು.
ಗ್ರಾಮದ ಮಹಿಳೆಯರಾದ ಮಾಳವ್ವ ಜಡದೇಲಿ,ಯಮುನಾ ಜಡದೇಲಿ ಶ್ರೇಯಾ ಪಾಟೀಲ,ಅನುಶ್ರೀ ಪಾಟೀಲ,ಗೀತಾ ಕಿಲ್ಲೇದ,ಅವರು ಕಳೆದ ಮೂರು ದಿನಗಳಿಂದ ಶ್ರೀ ಭೀಮಾಂಬಿಕಾ ದೇವಿಗೆ ವಿಶೇಷ ಪೂಜೆಯನ್ನು ಗ್ರಾಮದ ಎಲ್ಲಾ ಮಹಿಳೆಯರು ಸಲ್ಲಿಸುತ್ತಿದ್ದೇವೆ ಎಂದು ಹೇಳಿದರು.
ವರದಿ : ಮುತ್ತು ಗೋಸಲ್