ಗ್ರಾಮಾಡಳಿತ ಅಧಿಕಾರಿಗಳ ಮುಷ್ಕರಕ್ಕೆ ಸಚಿವ ಹೆಚ್.ಕೆ.ಪಾಟೀಲ ಭರವಸೆ:ಜಿಲ್ಲಾಧ್ಯಕ್ಷ ಅರುಣಗೌಡ ಬ ಮಂಟೂರ.
ಗ್ರಾಮಾಡಳಿತ ಅಧಿಕಾರಿಗಳ ಮುಷ್ಕರಕ್ಕೆ ಸಚಿವ ಹೆಚ್.ಕೆ.ಪಾಟೀಲ ಭರವಸೆ:ಜಿಲ್ಲಾಧ್ಯಕ್ಷ ಅರುಣಗೌಡ ಬ ಮಂಟೂರ
ಗದಗ:ಸತ್ಯಮಿಥ್ಯ (ಸ -28)
ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಗ್ರಾಮ ಆಡಳಿತ ಅಧಿಕಾರಿಗಳಿಂದ ಮೌನ ಪ್ರತಿಭಟನೆಯನ್ನು ಮಾಡುವದರ ಮೂಲಕ ಗ್ರಾಮ ಆಡಳಿತ ಅಧಿಕಾರಿಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸೇವಾ ಸೌಲಭ್ಯವನ್ನು ಒದಗಿಸಲು ಮತ್ತು ಮೊಬೈಲ್ ಆಪ್ ಗಳಲ್ಲಿ ನಿರಂತರವಾಗಿ ಕೆಲಸ ಮಾಡುವಂತೆ ಹೇರಲಾಗುತ್ತಿರುವ ಒತ್ತಡವನ್ನು ನಿಲ್ಲಿಸುವಂತೆ ಜಿಲ್ಲಾದ್ಯಂತ ಮುಷ್ಕರವನ್ನು ಹಮ್ಮಿಕೊಳ್ಳಲಾಯಿತು.
ಮುಷ್ಕರಕ್ಕೆ ರಾಜ್ಯ ಕಾನೂನು ಸಚಿವರು ಹಾಗೂ ಗದಗ ಜಿಲ್ಲೆಯ ಉಸ್ತುವಾರಿ ಸಚಿವರಾದ ಎಚ್.ಕೆ. ಪಾಟೀಲ ಸಾಹೇಬರು ನಮ್ಮೆಲ್ಲರನ್ನು ಭೇಟಿ ಮಾಡಿ ನಮ್ಮ ಸಮಸ್ಯೆಗಳನ್ನು ಆಲಿಸಿದರು. ನಿಕಟಪೂರ್ವ ರಾಜ್ಯಾಧ್ಯಕ್ಷ ಬೆಟಗೇರಿ ದೊಡ್ಡಬಸಪ್ಪ ರೆಡ್ಡಿಯವರು ಉಪಸ್ಥಿತರಿದ್ದು ಮಾನ್ಯ ಸಚಿವರಿಗೆ ರಾಜ್ಯದ ಸಮಸ್ತ ಗ್ರಾಮ ಆಡಳಿತಅಧಿಕಾರಿಗಳು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಸವಿವರವಾಗಿ ಪ್ರಸ್ತುತಪಡಿಸಿದರು. ವಿಶೇಷವಾಗಿ ವರ್ಗಾವಣೆ, ಪತಿ-ಪತ್ನಿ ಪ್ರಕರಣ, ಮೂಲಭೂತ ಸೌಕರ್ಯಗಳಿಲ್ಲದಿರುವ ವಿವರಿಸಿದರು.ಈ ಕುರಿತು ಮಾನ್ಯ ಸಚಿವರು ನಮ್ಮ ಸಮಸ್ಯೆಗಳ ಪರಿಹಾರ ಕುರಿತು ಮಾನ್ಯ ಕಂದಾಯ ಸಚಿವರೊಂದಿಗೆ ಚರ್ಚಿಸಿ ಸೂಕ್ತ ಪರಿಹಾರ ಕೊಡಿಸುವುದಾಗಿ ಭರವಸೆಯನ್ನು ನೀಡಿದರು ಎಂದು ಗದಗ ಜಿಲ್ಲೆಯ ಜಿಲ್ಲಾಧ್ಯಕ್ಷ ಅರುಣಗೌಡ ಬ ಮಂಟೂರ, ಅವರುಹೇಳಿದರು.
ಮುಷ್ಕರದಲ್ಲಿ ಗ್ರಾಮ ಆಡಳಿತಾಧಿಕಾರಿಗಳ ಜಿಲ್ಲಾಧ್ಯಕ್ಷರಾದ ಅರುಣ್ ಗೌಡ ಮಂಟೂರ ಜಿಲ್ಲೆಯ ತಾಲೂಕ ಎಲ್ಲಾ ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ಎಲ್ಲಾ ಗ್ರಾಮ ಆಡಳಿತಾಧಿಕಾರಿಗಳು ಕಂದಾಯ ಇಲಾಖೆಯ ನೌಕರರು ಹಾಗೂ ಸರ್ಕಾರಿ ನೌಕರರ ಸಂಘದವರು ಉಪಸ್ಥಿತರಿದ್ದರು.
ವರದಿ : ಮುತ್ತು ಗೋಸಲ್.