
ಮುಸ್ಲಿಂ ಯುವತಿ ಹಿಂದೂ ಯುವಕ ಮದುವೆ – ಮತಾಂತರ – ಜಾತಿನಿಂದನೆ : ಕೇಸ್ ದಾಖಲು.

ನಗರದಲ್ಲಿ ಮದುವೆ ನೆಪದಲ್ಲಿ ಬಲವಂತದ ಮತಾಂತರ ಮಾಡಿ ಜಾತಿ ನಿಂದನೆ ಮಾಡಿ ಮಾನಸಿಕ ಹಿಂಸೆ ನೀಡಿದ ಘಟನೆ.
ಗದಗ : ಸತ್ಯಮಿಥ್ಯ (ಜು-15).
ನಗರದ ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಮದುವೆ ನೆಪದಲ್ಲಿ ಬಲವಂತದ ಮತಾಂತರ ಮಾಡಿ ಜಾತಿ ನಿಂದನೆ ಮಾಡಿ ಮಾನಸಿಂಕ ಹಿಂಸೆ ನೀಡಿದ ಘಟನೆ ನಡೆದಿದ್ದು ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ಕುರಿತಂತೆ ವಿಶಾಲಕುಮಾರ ತಂದೆ ಪರಶುರಾಮ ಗೋಕಾವಿ ಜಾತಿ ಹಿಂದೂ ಕೊರಮ ಗದಗ ನಗರದ ಬೆಟಗೇರಿ ಗಾಂಧಿನಗರ ಸೆಟ್ಲೈಂಟ್ ಏರಿಯಾದಲ್ಲಿ ವಾಸವಿರುವ ಅವನು
ಕಳೆದ 03 ಮೂರು ವರ್ಷದಿಂದ ಕುರಹಟ್ಟಿ ಪೇಟೆಯ ತಹಸೀನ ಹೊಸಮನಿ ಎಂಬಾಕೆಯ ಜೊತೆಗೆ ಪ್ರೀತಿಸುತ್ತಿದ್ದರು ಅನ್ಯ ಧರ್ಮದ ತಹಸೀನ್ ಳನ್ನು ಒಪ್ಪುತ್ತಾರೋ ಇಲ್ಲವೋ ಅನ್ನೋ ಕಾರಣಕ್ಕೆ ವಿಷಯವನ್ನು ನಮ್ಮ ತಂದೆ ತಾಯಿಯರಿಗೆ ತಿಳಿಸಿರುವದಿಲ್ಲ ಆದ್ರೆ ತಹಸೀನ್ ತಮ್ಮ ತಾಯಿ ಬೇಗಂ ಬಾನು ಅವರಿಗೆ ನನ್ನ ಜೊತೆಗಿನ ಪ್ರೀತಿ ಪ್ರೇಮದ ವಿಷಯವನ್ನು ತಿಳಿಸಿದ್ದಳು ಈ ಮಧ್ಯ 2024 ರ ನವೆಂಬರ್ 26 ನೇ ತಾರೀಖು ನಾವಿಬ್ಬರೂ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿರುತ್ತೇವೆ. ವಿಷಯ ಗೊತ್ತಾಗಿ ಮುಸ್ಲಿಂ ಸಂಪ್ರದಾಯದಂತೆ ಮದುವೆ ಮಾಡಿಕೊಳ್ಳಲು ತಹಸೀನ್ ಹಾಗೂ ಬೇಗಂ ಬಾನು ಅವರು ನನಗೆ ಒತ್ತಾಯ ಮಾಡಿದರು ಒಟ್ಟಿಗೆ ಚೆನ್ನಾಗಿರುವ ಉದ್ದೇಶದಿಂದ ನಾನು ಮದುವೆಗೆ ಒಪ್ಪಿದೆ ಇದನ್ನೆ ಬಂಡವಾಳ ಮಾಡಿಕೊಂಡು ಮುಸ್ಲಿಂ ಧರ್ಮದ ಪ್ರಕಾರ ಮದುವೆ ಮಾಡಿಕೊಳ್ಳಬೇಕೆಂದು ತಹಸೀನ್ ತಾಯಿ ಬಾನು ಬೇಗಂ ಗಂಟು ಬಿದ್ದಿದ್ದಳು ಬೇಗಂ ಬಾನು ಸಹೋದರ ಇಬ್ರಾಹಿಂಮ್ ಸಾಬ್ ದಾವಲ್ ಖಾನ್ ಮದುವೆ ಮಾಡಿಸಿದ್ದರು 2025 ರ ಎಪ್ರಿಲ್ 25 ನೇ ತಾರೀಖು ಮುಳಗುಂದ ನಾಕಾ ಬಳಿ ಇರುವ ಉಮರಜೀನ್ ಕತ್ತಾಬ ಮಸೀದಿಯಲ್ಲಿ ಮುಸ್ಲಿಂ ಸಂಪ್ರದಾಯದಂತೆ ಮದುವೆ ಮಾಡಲಾಯ್ತು.
ಮದುವೆಯಲ್ಲಿ ನನಗರಿವಿಲ್ಲದೆ ನನ್ನ ಹೆಸರನ್ನು ಚೇಂಜ್ ಮಾಡಿದ್ದಾರೆ ಅಲ್ಲದೇ ಮದುವೆಗೂ ಮೊದಲಿನಿಂದಲೂ ತಹಸೀನ್ ಹಾಗೂ ಅವರ ತಾಯಿ ಬೇಗಂ ಬಾನು ಜಮಾತಗೆ ಹೋಗುವಂತೆ ಬಲವಂತ ಮಾಡುತ್ತಿದ್ದರು ನೀನು ಕೊರಮ ಸಮಾಜದವನ್ನು ಮುಸ್ಲಿಂ ಧರ್ಮ ಸ್ವೀಕರಿಸು ಅಂತಾ ಒತ್ತಾಯ ಮಾಡಿದ್ದರು ಆದರು ನಾನು ಧರ್ಮನಿಷ್ಠನಾಗಿದ್ದು ಧರ್ಮ ಬಿಟ್ಟಿಲ್ಲ ಈ ಮಧ್ಯ ಮುಸ್ಲಿಂ ಸಂಪ್ರದಾಯದಂತೆ ಮದುವೆಯಾಗಿದ್ದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ವಿಷಯ ನಮ್ಮ ಮನೆಯವರಿಗೂ ತಿಳಿಯಿತು. ನನ್ನ ತಾಯಿ ಮಂಜುಳಾ ಗೋಕಾವಿ ಅವರು ಹಿಂದೂ ಸಂಪ್ರದಾಯದಂತೆಯೂ ಮದುವೆ ಮಾಡುವ ವಿಷಯ ಪ್ರಸ್ಥಾಪಿಸಿದ್ದಾಗ ಅದರಂತೆ ತಹಸೀನ್ ಕುಟುಂಬವನ್ನು ಸಂಪರ್ಕಿಸಿ ಮದುವೆ ಪ್ರಸ್ತಾಪಿಸಲಾಗಿತ್ತು ಕುಟುಂಬದ ಒಪ್ಪಿಗೆ ಯ ಮೇರೆಗೆ 2025 ರ ಜೂನ್ 05 ನೇ ತಾರೀಕನಂದು ಗಾಂಧಿ ನಗರ ಸೇಟ್ಲಾ ಮೆಂಟ್ ಏರಿಯಾದ ನನ್ನ ಮನೆಯ ಎದುರು ಹಿಂದೂ ಸಂಪ್ರದಾಯದಂತೆ ಮದುವೆ ನಿಗದಿ ಮಾಡಲಾಗಿತ್ತು.ಆರಂಭದಲ್ಲಿ ಮುದುವೆಗೆ ಒಪ್ಪಿಗೆ ನೀಡಿದ್ದ ತಹಸೀನ್ ನಂತರದಲ್ಲಿ ಕುಟುಂಬ ಮುಸ್ಲಿಂ ಮುಖಂಡರ ಒತ್ತಾಯಕ್ಕೆ ಮಣಿದು ನಿರಾಕರಿಸಿದ್ದಾಳೆ ಅಲ್ಲೇ ತಹಸೀನ್ ಕಳೆದ ಒಂದು ತಿಂಗಳಿನಿಂದ ಸಂಪರ್ಕಕ್ಕೆ ಸಿಗುತ್ತಿಲ್ಲ ಪ್ರೀತಿಗೆ ಮಣೆದು ನಾನು ಮುಸ್ಲಿಂ ಧರ್ಮದ ಸಂಪ್ರದಾಯದಂತೆ ಒಪ್ಪಿಗೆ ಮದುವೆಯಾಗಿದ್ದೆ ಆದರೆ ಹಿಂದೂ ಸಂಪ್ರದಾಯದಂತೆ ಮದುವೆಯಾಗುವ ನಮ್ಮ ಕುಟುಂಬದ ಪ್ರಸ್ತಾವನೆಯನ್ನು ಅವರು ನಿರಾಕರಿಸಿದ್ದಾರೆ ನನ್ನನ್ನೆ ಮುಸ್ಲಿಂ ದರ್ಮಕ್ಕೆ ಪರಿವರ್ತನೆ ಮಾಡುವ ಉದ್ದೇಶ ತಹಸೀನ ಕುಟುಂಬಕ್ಕೆ ಇದೆ ಅನ್ನೋದು ಸಷ್ಟವಾಗಿದೆ ತಹಸೀನ್ ಸಹೋದರಿ ತಯಿಬಾ ವಿನಾಯಕ ಶಹಪೂರ ಅನ್ನೋ ಹಿಂದೂ ಯುವಕನನ್ನೆ ಮದುವೆಯಾಗಿದ್ದಾಳೆ ವಿನಾಯಕ ಅವನ ಹೆಸರು ಬದಲಾವಣೆಯಾಗಿದೆ ಹಾಗೂ ಹಿಂದೂ ಯುವಕನಿಗೆ ಹುಟ್ಟಿದ ಇಬ್ಬರು ಮಕ್ಕಳಿಗೊ ಮುಸ್ಲಿಂ ಹೆಸರು ಇಡಲಾಗಿದೆ ಈ ಎಲ್ಲ ಬೆಳವಣೆಗೆ ನೋಡಿದಾಗ ತಹಸೀನ್ ಕುಟುಂಬ ಮತಾಂತರ ಮಾಡಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ ಹೀಗಾಗಿ ಮದುವೆ ನೆಪದಲ್ಲಿ ಮತಾಂತರ ಮಾಡಿ ನನಗೆ ಮಾನಸಿಕ ಹಿಂಸೆಯನ್ನು ನೀಡಿದ್ದು ನಾನು ತೀವ್ರವಾಗಿ ನೊಂದ್ದಿದ್ದೇನೆ ಈ ಬಗ್ಗೆ ತನಿಖೆ ನಡೆಸಿ ನನಗೆ ನ್ಯಾಯ ಕೊಡಬೇಕಾಗಿ ಪ್ರಕರಣವನ್ನು ದಾಖಲಿಸಿದ್ದಾರೆ.
ವರದಿ :ಮುತ್ತು ಗೋಸಲ.