ಸೆ.19 ರಂದು.ಕಪ್ಪತಗುಡ್ಡವನ್ನು ಪ್ರವಾಸಿ ತಾಣವನ್ನಾಗಿ ರೂಪಿಸಲು 48 ಕಿ.ಬೃಹತ್ ಪಾದಯಾತ್ರೆ:ಪ್ರವೀಣ ಶೆಟ್ಟಿ
ಸೆ.19 ರಂದು.ಕಪ್ಪತಗುಡ್ಡವನ್ನು ಪ್ರವಾಸಿ ತಾಣವನ್ನಾಗಿ ರೂಪಿಸಲು 48 ಕಿ.ಬೃಹತ್ ಪಾದಯಾತ್ರೆ: ಪ್ರವೀಣ್ ಶೆಟ್ಟಿ ಬಣ.
ಗದಗ:ಸತ್ಯಮಿಥ್ಯ(ಸ-17).
ಕಳಸಾಬಂಡೂರಿ, ಮಹದಾಯಿ ನದಿ ಜೋಡಣೆ ಹಾಗೂ ಕಪ್ಪತಗುಡ್ಡವನ್ನು ಪ್ರವಾಸಿ ತಾಣವನ್ನಾಗಿ ರೂಪಿಸಲು ಆಗ್ರಹಿಸಿ ಕರವೇ ಪ್ರವೀಣ ಶೆಟ್ಟಿ ಬಣದಿಂದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಪ್ರವೀಣಶೆಟ್ಟಿ ಬಣ ಗದಗ ಜಿಲ್ಲಾಧ್ಯಕ್ಷ ವೆಂಕಟೇಶ ಬೇಲೂರ ಹಲವು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಕಳಸಾಬಂಡೂರಿ ಮಹದಾಯಿ ನದಿ ಜೋಡಣೆ ಯೋಜನೆಯನ್ನು ತುರ್ತಾಗಿ ಆರಂಭಿಸುವಂತೆ ಹಾಗೂ ಕಪ್ಪತ್ತಗುಡ್ಡವನ್ನು ಪ್ರವಾಸಿ ತಾಣವನ್ನಾಗಿ ರೂಪಿಸಲು ಆಗ್ರಹಿಸಿ ಗದಗ ಜಿಲ್ಲೆಯ ನರಗುಂದ ಪಟ್ಟಣದಿಂದ ಗದಗ ಜಿಲ್ಲಾಧಿಕಾರಿ ಕಚೇರಿವರೆಗೆ ಸುಮಾರು 48 ಕಿ.ಮೀ. ಬೃಹತ್ ಪಾದಯಾತ್ರೆ ನಡೆಸಲಾಗುವುದು ಎಂದರು
ಸೆ.19 ರಂದು ನರಗುಂದ ಪಟ್ಟಣದಿಂದ ಹೊರಟು ಶಲವಡಿ ಮಾರ್ಗವಾಗಿ ಸೆ. 20 ರಂದು ಗದಗ ನಗರವನ್ನು ಪ್ರವೇಶಿಸಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಈ ಪಾದಯಾತ್ರೆಗೆ ಡಾ. ತೋಂಟದ ಸಿಧ್ಧರಾಮ ಶ್ರೀಗಳು ಬೆಂಬಲಿಸಿ ಸಾಂಕೇತಿಕವಾಗಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸದಸ್ಯರಾದ ದಾವಲಸಾಬ ಮುಳಗುಂದ, ಶ್ರೀನಿವಾಸ ಭಂಡಾರಿ, ತಿಮ್ಮಣ್ಣ ಡೋಣಿ, ಸಹದೇವ ಕೋಟಿ, ಪರಶುರಾಮ ಬಂಕದಮನಿ, ಹನಮಂತ ಶಿದ್ದಿಂಗ್, ಮೈಲಾರಪ್ಪ ಕೊಟೆಪ್ಪನವರ, ಮಂಜುನಾಥ ಬಾಗಿ, ವೆಂಕಟೇಶ ಗುಜಮಾಗಡಿ, ಮಂಜುನಾಥ ಶಾಂತಗೇರಿ, ಮಣಿಕಂಠ ಭಂಡಾರಿ ಸೇರಿದಂತರ ಇತರರು ಹಾಜರಿದ್ದರು.
ವರದಿ:ಮುತ್ತು ಗೋಸಲ್.