ಭಾವೈಕ್ಯತೆಯ ಮಂದಿರ ಟಕ್ಕೆದ ದರ್ಗಾದಲ್ಲಿ ಮಹಮ್ಮದ ಪೈಗಂಬರ ಜಯಂತೋತ್ಸವ.
ಮಹಮ್ಮದ ಪೈಗಂಬರ ಅವರ ಜಯಂತೋತ್ಸವದ ಅಂಗವಾಗಿ ಭಾವೈಕ್ಯತೆಯ ಟೆಕ್ಕದ ದರ್ಗಾದಲ್ಲಿ ನಾಥ್ ಬಯಾನ್ ಕಾರ್ಯಕ್ರಮ
ಗಜೇಂದ್ರಗಡ:ಸತ್ಯಮಿಥ್ಯ (ಸ -18)
ನಗರದ ಟೆಕ್ಕದ ದರ್ಗಾದಲ್ಲಿ ಈದ್ ಮಿಲಾದನ್ನುಬಿ ಅಂಗವಾಗಿ ಟೆಕ್ಕದ ದರ್ಗಾದಲ್ಲಿ ನಿಜಾಮುದ್ದೀನಷಾ ಅಶ್ರಫಿ ಮಕಾನದಾರ ಅವರ ಮಾರ್ಗದರ್ಶನದಲ್ಲಿ ಅರೇಬಿಕ್ ಅಧ್ಯಯನ ಮಾಡುತ್ತಿರುವ ಮಕ್ಕಳಿಂದ ನಾಥ್ ಬಯಾನ್ ಕಾರ್ಯಕ್ರಮ ನಡೆಯಿತು.
ಈ ವೇಳೆ ಅಂಜುಮಾನ್ ಇಸ್ಲಾಂ ಕಮೀಟಿಯ ಚೇರ್ಮನ್ ನೂರಲ್ ಹಸನಸಾಬ ತಟಗಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ದರ್ಗಾದಲ್ಲಿ ಸುಮಾರು 50 ಕ್ಕೂ ಹೆಚ್ಚು ಮಕ್ಕಳಿಗೆ ಧರ್ಮ ಚೋದನೆ ಮಾಡುತ್ತಿರುವುದು ನಿಜಕ್ಕೂ ಸಂತಸದ ಸಂಗತಿ. ಸಮಾಜದಿಂದ ಬೇಕಾದ ಎಲ್ಲ ಅಗತ್ಯ ನೆರವು ಸಹಕಾರ ನೀಡುವುದಾಗಿ ತಿಳಿಸಿದರು.
ಪುರಸಭೆ ಸದಸ್ಯ ರಾಜು ಸಾಂಗ್ಲೀಕರ ಮಾತನಾಡಿ ಟೆಕ್ಕದ ದರ್ಗಾವು ಭಾವೈಕ್ಯತೆಯ ಪರಂಪರೆಯನ್ನು ಹೊಂದಿದ್ದು ಸಮಾಜದ ಮಕ್ಕಳಿಗೆ ನಿಸ್ವಾರ್ಥ ಸೇವೆ ಮಾಡುತ್ತಿರುವ ಟೆಕ್ಕದ ದರ್ಗಾದ ಕಾರ್ಯವು ನಿಜಕ್ಕೂ ಶ್ಲಾಘನೀಯ ಎಂದರು.
ಈ ವೇಳೆ ಚೇರ್ಮನರಾದ ಹಸನಸಾಬ ತಟಗಾರ, ಪುರಸಭೆ ಸದಸ್ಯರಾದ ರಾಜು ಸಾಂಗ್ಲೀಕಾರ, ರಫೀಕ ತೋರಗಲ್ಲ, ಅಂಜುಮನ್ ಇಸ್ಲಾಂ ಕಮೀಟಿ ನಿರ್ದೇಶಕ ದಾವಲಸಾಬ ತಾಳಿಕೋಟಿ ಅವರಿಗೆ ಸನ್ಮಾನಿಸಲಾಯಿತು.
ಹಜರತ್ ನಿಜಾಮುದ್ದಿನಷಾ ಅಶ್ರಫಿ ಮಕಾನದಾರ ಟೆಕ್ಕದಬಾವನವರು ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ನಾಥ್ ಬಯಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ಮಕ್ಕಳಿಗೂ ರಾಜು ಸಾಂಗ್ಲೀಕಾರ ಹಾಗೂ ರಫೀಕ ತೊರಗಲ್ಲ ಅವರು ಪೆನ್ ಪುಸ್ತಕ ವಿತರಿಸಿದರು.
ಕಾರ್ಯಕ್ರಮದಲ್ಲಿ ಮಾಸುಮಲಿ ಮಕಾನದಾರ, ಮಕ್ತುಸಾಂಬ ಗೋಡೆಕಾರ, ಮಾಸುಮಲಿ ಮದಗಾರ, ರಫೀ ಹವಾಲ್ದಾರ್, ದಾವಲ ಮುಜಾವರ, ಪಾಶು ಹವಾಲ್ದಾರ್, ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
ವರದಿ:ಚನ್ನು. ಎಸ್.