ವೈದ್ಯರು ಭೂಮಿಯ ಮೇಲಿನ ಧೈವ : ಸೀತಲ ಓಲೇಕಾರ.
ರಾಷ್ಟ್ರೀಯ ವೈದ್ಯರ ದಿನದಂದು, ವೈದ್ಯರ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತದೆ.

ವೈದ್ಯರು ಭೂಮಿಯ ಮೇಲಿನ ಧೈವ : ಸೀತಲ ಓಲೇಕಾರ.
ಗಜೇಂದ್ರಗಡ: ಸತ್ಯಮಿಥ್ಯ ( ಜು -01).
ಅನಾರೋಗ್ಯ ಪೀಡಿತರಾದವರಿಗೆ ಆರೈಕೆ ಮಾಡಿ ಸೂಕ್ತ ಔಷಧಿಗಳನ್ನು ನೀಡಿ ರೋಗ ಪೀಡಿತರನ್ನು ಗುಣಮುಖರಾಗಿ ಮಾಡುವದನ್ನು ವೈದ್ಯರ ಸೇವೆ ಅನನ್ಯ.ಮನುಷ್ಯ ಜೀವನದಲ್ಲಿ ಮಾನಸಿಕ ನೆಮ್ಮದಿ ದೈಹಿಕ ಆರೋಗ್ಯ ಹೀನನಾದಾಗ ಅಂತವರನ್ನು ಆರೈಕೆ ಮಾಡಿ ಜೀವನಕ್ಕೆ ಹೊಸ ಚೈತನ್ಯ ತುಂಬುವ ಮೂಲಕ ರೋಗಿಯನ್ನು ಸಾವಿನ ದವಡೆಯಿಂದ ಪಾರುಮಾಡುತ್ತಾರೆ ಆದ್ದರಿಂದ ವೈದ್ಯರನ್ನು ಭೂಮಿಯ ಮೇಲಿನ ದೇವರು ಎಂದು ಕರೆಯುತ್ತಾರೆ ಎಂದು ಶೀತಲ್ ಓಲೇಕಾರ ನುಡಿದರು.
ನಗರ ಸಮೀಪದ ಬ್ರೈಟ್ ಬಿಗಿನಿಂಗ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಾಷ್ಟ್ರಿಯ ವೈದ್ಯರ ದಿನಾಚರಣೆ ನಿಮಿತ್ತ ಮಕ್ಕಳಿಗೆ ಆರೋಗ್ಯ ತಪಾಸಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.
ಬಳಿಕ ಗಜೇಂದ್ರಗಡ ಸಮುದಾಯ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿಗಳಾದ ಡಾ.ಅನಿಲಕುಮಾರ ತೋಟದ ಅವರು ಶಾಲೆಯ ಮುದ್ದು ಮಕ್ಕಳಿಗೆ ಆರೋಗ್ಯ ತಪಾಸಣೆ ನಡೆಸಿದರು. ಬಳಿಕ ನಗರದ ಖ್ಯಾತ ವೈದ್ಯರಾದ ಎನ್.ಬಿ.ಕರಡಿ ಅವರಿಗೆ ಸಂಸ್ಥೆಯ ವತಿಯಿಂದ ಸನ್ಮಾನ ನಡೆಯಿತು.
ಬಳಿಕ ಡಾ.ಅನಿಲಕುಮಾರ ತೋಟದ ಮಾತನಾಡಿ ಡಾ. ಬಿಧನ್ ಚಂದ್ರ ರಾಯ್ ಅವರ ಜನ್ಮ ಮತ್ತು ಮರಣ ದಿನ ಜುಲೈ ೧, ಆದ್ದರಿಂದ ಈ ದಿನವನ್ನು, ಅವರ ಗೌರವಾರ್ಥ ವೈದ್ಯರ ದಿನವಾಗಿ ಆಚರಿಸಲಾಗುತ್ತಿದೆ. ರಾಷ್ಟ್ರೀಯ ವೈದ್ಯರ ದಿನದಂದು, ವೈದ್ಯರ ಮಹತ್ವದ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತದೆ. ಅಲ್ಲದೇ ನಮ್ಮ ಜೀವನಕ್ಕೆ ವೈದ್ಯರು ನೀಡಿದ ಕೊಡುಗೆಯನ್ನು ಸ್ಮರಿಸಿ ಪ್ರಶಂಸಿಸಲಾಗುತ್ತದೆ. ಈ ವಿಶೇಷ ದಿನವನ್ನು ಜನರ ಸೇವೆಗಾಗಿ ಪ್ರಾಣವನ್ನೇ ಪಣಕ್ಕಿಟ್ಟಿರುವ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಸಮರ್ಪಿಸಲಾಗುತ್ತದೆ.ಇಂತಹ ಸಮಯದಲ್ಲಿ ನಮ್ಮನ್ನು ನೆನಪಿಸಿ ನಮ್ಮಗೆ ಗೌರವ ಸೂಚಿಸಿದ ಬ್ರೈಟ್ ಬಿಗಿನಿಂಗ್ ಸಂಸ್ಥೆಯವರ ಕಾರ್ಯ ನಿಜ್ಜಕ್ಕೂ ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ನಾಜೀಯಾ ಮುದಗಲ್, ರೂಪಾ ಗೊಂದಳೆ,ಆಸ್ಮಾ ನಧಾಫ್,ರವಿ ನಿಡಗುಂದಿ,ಮುಸ್ತಾಕ ಉಟಗೂರ, ಸಂಗಮೇಶ ರೇವಡಿ, ಸಾವಿತ್ರಿ ಹಾವೇರಿ,ಲಕ್ಷ್ಮಿ ಭೋನೇರಿ, ರೇಣುಕಾ ಕೊಪ್ಪದ,ಅಂಜುಮ್,ಸೇರಿದಂತೆ ಅನೇಕರು ಇದ್ದರು.
ವರದಿ : ವಿರೂಪಾಕ್ಷ.