
ಸೌಲಭ್ಯ ವಂಚಿಸುವ ವ್ಯವಸ್ಥೆ ಬಗ್ಗೆ ವಿದ್ಯಾರ್ಥಿಗಳು ಜಾಗೃತಗೊಳ್ಳಬೇಕು – ಗಣೇಶ ರಾಠೋಡ
ಗಜೇಂದ್ರಗಡ:ಸತ್ಯಮಿಥ್ಯ (ಅಗಸ್ಟ್ -30)
ಇಂದು ನಗರದ ಸಿಂಹಾಸನ ಪ್ಲಾಟ್ ಈಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಗಜೇಂದ್ರಗಡ ನಗರಕ್ಕೆ ಬಾಲಕರ ಮೆಟ್ರಿಕ್ ನಂತರದ ಹಾಸ್ಟೆಲ್ ಪ್ರಾರಂಭಿಸಲು ಮತ್ತು ಪಿಜಿ ಕೇಂದ್ರ ಪ್ರಾರಂಭಿಸಲು ಒತ್ತಾಯಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ ಎಫ್ ಐ)ನ 2ನೇ ತಾಲೂಕ ಸಮ್ಮೇಳನ ನಡೆಯಿತು.
ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಸ್ತಾವಿಕವಾಗಿ ಎಸ್ ಎಫ್ ಐ ಜಿಲ್ಲಾ ಮುಖಂಡರಾದ ಚಂದ್ರು ರಾಠೋಡ ಮಾತನಾಡಿ ಕಳೆದ ಒಂದು ವರ್ಷದಲ್ಲಿ ಎಸ್ ಎಫ್ ಐ ಸಂಘಟನೆಯು ಬಾಲಕರ ಹಾಸ್ಟೆಲ್ ಗಾಗಿ, ಪಿಜಿ ಸೆಂಟರ್ ಗಾಗಿ, ಬಸ್ಸಿಗಾಗಿ ಹೀಗೆ ಅನೇಕ ಹೋರಾಟ ಮಾಡುತ್ತಾ ಬಂದಿದ್ದು ಹೋರಾಟದ ಮೂಲಕವೇ ನ್ಯಾಯ ಪಡೆಯುವ ಕೆಲಸ ಮಾಡುತ್ತಾ ಬಂದಿದೆ ಎಂದರು.
ಸಮ್ಮೇಳನವನ್ನು ಎಸ್ ಎಫ್ ಐ ನ ರಾಜ್ಯ ಪದಾಧಿಕಾರಿಗಳಾದ ಗಣೇಶ ರಾಠೋಡ ಅವರು ಉದ್ಘಾಟನೆ ಮಾಡಿ ವಿದ್ಯಾರ್ಥಿಗಳು ಸೌಲಭ್ಯ ವಂಚಿಸುವ ವ್ಯವಸ್ಥೆ ಬಗ್ಗೆ ಜಾಗೃತಿ ಹೊಂದಿರಬೇಕು. ಕಳೆದ 35 ವರ್ಷಗಳಿಂದ ಗಜೇಂದ್ರಗಡದಲ್ಲಿ ಎಸ್ ಎಫ್ ಐ ಸಂಘಟನೆಯು ಅನೇಕ ಚಾರಿತ್ರಿಕ ಹೋರಾಟ ಮಾಡಿ ಸೌಲಭ್ಯ ಪಡೆಯವ ಕಾರ್ಯ ಮಾಡಿದೆ ಅಂತಹ ಚಾರಿತ್ರಿಕ ಚರಿತ್ರೆ ಇರುವ ಸಂಘಟನೆಯ ಎರಡನೇಯ ತಾಲ್ಲೂಕು ಸಮ್ಮೇಳನ ಇಂದು ಉದ್ಘಾಟನೆ ಮಾಡಲು ಸಂತೋಷ ಆಗುತ್ತದೆ. ಈ ಸಮ್ಮೇಳನ ಒಂದು ಮಹತ್ವದ ಹೆಜ್ಜೆಯಾಗಿ ಹೊಸ ಸಮಿತಿಯನ್ನು ನೇಮಕ ಮಾಡಿಕೊಂಡು ತೆಗೆದುಕೊಂಡ ನಿರ್ಣಯವನ್ನು ಜಾರಿ ಮಾಡುವ ಕೆಲಸವನ್ನು ಈ ಸಮ್ಮೇಳನ ಮಾಡಲಿದೆ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಎಸ್ ಎಫ್ ಐ ನ ಮಾಜಿ ಮುಖಂಡರಾದ ಬಾಲು ರಾಠೋಡ ಅವರು ಮಾತನಾಡಿ ವಿದ್ಯಾರ್ಥಿಗಳು ಅಧ್ಯಯನಶೀಲರಾಗಬೇಕು ಆಗ ಪ್ರಶ್ನೆ ಮಾಡುವ ಹವ್ಯಾಸ ಬೆಳೆಯುತ್ತದೆ ಹಾಗಾಗಿ ಪುಸ್ತಕಗಳ ಜೊತೆಗೆ ಸಮಾಜವನ್ನು ಅಧ್ಯಯನ ಮಾಡುವ ಕೆಲಸವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕೆಂದರು.
ಎಸ್ ಎಫ್ ಐ ನ ಜಿಲ್ಲಾ ಕಾರ್ಯದರ್ಶಿಗಳಾದ ಶಿವಾಜಿ ಗಡ್ಡದ ಅವರು ಮಾತನಾಡಿ ಎಸ್ಎಫ್ ಐ ಗೆ ಸ್ವಾತಂತ್ರ್ಯ ಚಳುವಳಿಯ ಪರಂಪರೆ ಇದ್ದು ಅದನ್ನು ಮುಂದುವರೆಸಿಕೊಂಡು ಹೋಗುವ ಕೆಲಸ ಮಾಡಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರದೀಪ್ ಮಾದರ ಅವರು ಮಾತನಾಡಿ ತಾಲ್ಲೂಕು ಸಮಿತಿಯು ಕಳೆದ ಒಂದು ವರ್ಷದಲ್ಲಿ ಹಲವಾರು ಹೋರಾಟ ಮಾಡಿದ್ದು ಮುಂದು ಹೋರಾಟ ಮುಂದುವರಿಕೊಂಡು ಹೋಗಬೇಕೆಂದರು.
ಸಮ್ಮೇಳನದ ಕಲಾಪಗಳು ನಡೆದು ನಂತರ ಸಮ್ಮೇಳನವು 21 ಜನರ ನೂತನ ಸಮಿತಿಯನ್ನು ಆಯ್ಕೆ ಮಾಡಿದೆ.
ನೂತನ ಸಮಿತಿಯ ಅಧ್ಯಕ್ಷರಾಗಿ ಅನಿಲ್ ರಾಠೋಡ, ಕಾರ್ಯದರ್ಶಿಯಾಗಿ ಪ್ರದೀಪ್ ಎಂ, ಉಪಾಧ್ಯಕ್ಷರಾಗಿ ಮಾಹಾಂತೇಶ ಪೂಜಾರ, ಸುದೀಪ್ ಹುಬ್ಬಳ್ಳಿ, ಜ್ಯೋತಿ ಮೇಟಿ.
ಸಹಕಾರ್ಯದರ್ಶಿಗಳಾಗಿ ಬಸವರಾಜ ಎಂ, ಮುಪ್ಪಯ್ಯ ಬೆಳವನಕಿ, ಕವಿತಾ ಹೊಸಮನಿ, ಸದಸ್ಯರಾಗಿ ಗುರುನಾಥ ರಾಠೋಡ, ಕಿರಣ ಪಮ್ಮಾರ್, ಸಲೀಂ, ಅನಿಲ್, ನಾಗರಾಜ, ಕಿರಣ ರಾಠೋಡ, ಉಮಕ್ಕಾ ಮಾಳೋತ್ತರ್, ರೇಣುಕಾ ರಾಠೋಡ, ದ್ರಾಕ್ಷಯಣಿ ಜಾಲಿಹಾಳ, ಸವಿತಾ ಬಾಳನಗೌಡ್ರ, ರೂಪಾ ಹಗೇದಾಳ, ಅಂಜಿನಮ್ಮ, ಬಾಳಮ್ಮ, ಶರಣು ಎಂ, ಸುನೀಲ್ ರಾಠೋಡ. ಕೃಷ್ಣಾ ವರಗಾ ಇವರು ನೂತನ ಸಮಿತಿ ಸದಸ್ಯರಾಗಿ ಆಯ್ಕೆ ಆಗಿದ್ದಾರೆ.
ವಿದ್ಯಾರ್ಥಿನಿಯರ ಉಪಸಮಿತಿಯನ್ನು ಕೂಡಾ ಸಮ್ಮೇಳನ ಆಯ್ಕೆ ಮಾಡಿತು ಉಪ ಸಮಿತಿಯ ಸಂಚಾಲಕಿ ಆಗಿ ಕವಿತಾ ಮೇಟಿ, ಸಹ ಸಂಚಾಲಕಿಯರಾಗಿ ರೂಪಾ ಹಗೇದಾಳ, ಬಾಳಮ್ಮ ಕೊಣೆಸಾರ್, ರಾಧಿಕಾ ಮಾಳೋತ್ತರ್ ಸದಸ್ಯರಾಗಿ ರೇಣುಕಾ ರಾಠೋಡ, ಕವಿತಾ ಹೊಸಮನಿ, ಪೂಜಾ ಭಾಂಡಗೆ, ಸವಿತಾ ಮಾಳೋತ್ತರ್, ವಿಜಯಲಕ್ಷ್ಮಿ ರಾಠೋಡ, ಪ್ರೀತಿ ಚಿಲಝರಿ, ಸೃಷ್ಟಿ ಮಡಿವಾಳ, ಸೌಮ್ಯ ಹಡಪದ, ಜ್ಯೋತಿ ಮೇಟಿ, ಐಶ್ವರ್ಯ ಹಾದಿಮನಿ, ರಾಧಿಕಾ ಮಾಳೋತ್ತರ್, ಉಮಕ್ಕಾ ಮಾಳೋತ್ತರ್ ಆಯ್ಕೆ ಆಗಿದ್ದಾರೆ.
ಕಾರ್ಯಕ್ರಮದ ನಿರೂಪಣೆಯನ್ನು ಅನಿಲ ರಾಠೋಡ, ಸ್ವಾಗತ ಸವಿತಾ ಬಾಳನಗೌಡ್ರ ವಂದನಾರ್ಪಣೆ ರೂಪಾ ನಿರ್ವಹಿಸಿದರು. ತಾಲ್ಲೂಕಿನ ಎಲ್ಲಾ ಕಾಲೇಜಿನಿಂದ ಆಯ್ಕೆ ಆದ ವಿದ್ಯಾರ್ಥಿ ಪ್ರತಿನಿಧಿಗಳು ಹಾಜರಿದ್ದರು.
ವರದಿ : ಸುರೇಶ ಬಂಡಾರಿ.