102ನೇ ವರ್ಷದ ಶ್ರೀ ಗುರು ದ್ವಾದಶಿ ಉತ್ಸವ
ಕೊಪ್ಪಳ : ಸತ್ಯಮಿಥ್ಯ (ಅ -17).
ಜಿಲ್ಲೆಯ ಕುಕನೂರು ಪಟ್ಟಣದ ಶ್ರೀ ಮಹಾಮಾಯ ದೇವಸ್ಥಾನದಲ್ಲಿರುವ ಶ್ರೀ ಗುರುದತ್ತ ಮಂದಿರದಲ್ಲಿ 18/ 10/ 2024 ಶುಕ್ರವಾರ ದಿಂದ ಮೊದಲ ಗೊಂಡು ತ್ರಯೋದಶಿ ಬುಧವಾರ 30/ 10/ 2024 ಪರ್ಯಂತ ಶ್ರೀ ಗುರು ದ್ವಾದಶಿ ಉತ್ಸವವು ಮಹಾರುದ್ರಾನುಷ್ಠಾನದೊಂದಿಗೆ ನಡೆಯುತ್ತದೆ. ಕಾರಣ ಭಕ್ತಾದಿಗಳು ಭಾಗವಹಿಸಿ ತನು,ಮನ,ಧನದಿಂದ ಸೇವೆ ಸಲ್ಲಿಸಿ ಶ್ರೀಗುರುದತ್ತನ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿ.
ಪ್ರತಿಪದ ಶುಕ್ರವಾರ ದಿನಾಂಕ 18-10-2024 ರಿಂದ ದ್ವಾದಶಿ ಮಂಗಳವಾರ ದಿನಾಂಕ 29-10-2024 ರ ವರೆಗೆ ಬೆಳಗ್ಗೆ ಕಾಕಡಾರತಿ, ಲಘುರುದ್ರಾಭಿಷೇಕ, ಶ್ರೀಗುರುಚರಿತ್ರೆ ಸಪ್ತಾಹ, ಪುರಾಣ, ಸಾಯಂಕಾಲ ಪ್ರವಚನ,. ಕೀರ್ತನೆ, ಸಂಗೀತ, ಭಜನೆ, ಪಲ್ಲಕ್ಕಿ ಸೇವೆ, ಮಂತ್ರಪುಷ್ಪ, ಅಷ್ಟಾವಧಾನ ಹಾಗೂ ಪ್ರಸಾದ ವಿತರಣೆ ಜರಗುವದು.
ಉತ್ಸವದಲ್ಲಿ ನಡೆಯುವ ವಿಶೇಷ ಕಾರ್ಯಕ್ರಮಗಳು 18-10-2024 ರಿಂದ 20-10-2024ರ ವರೆಗೆ ಸಂಜೆ 6 ರಿಂದ 8 ರವರೆಗೆ ಶ್ರೀ ವಿಶ್ವನಾಥರಾವ ಶ್ರೀನಿವಾಸರಾವ ಕುಲಕರ್ಣಿ ಗುರುವಿನಹಳ್ಳಿ ಇವರಿಂದ ಕುಮಾರವ್ಯಾಸ ಭಾರತದ ಗಮಕವಾಚನ,
21-10-2024 ರಿಂದ 23-10-2024ರ ವರೆಗೆ ಸಂಜೆ 6 ರಿಂದ 8 ರವರೆಗೆ ವೇ.ಮೂ.ಪಂಡಿತ ಶ್ರೀ ವಿಶ್ವನಾಥಭಟ್ ಶಿರಸಿ ಇವರಿಂದ ಪ್ರವಚನ, 24-10-2024 ರಿಂದ 27-10-2024ರ ಹೊರಗೆ ಸಂಜೆ 6 ರಿಂದ 8 ರವರೆಗೆ ಕೀರ್ತನ ಚತುರ ಶ್ರೀ ನಾರಾಯಣದಾಸ ಶಿರಸಿ ಇವರಿಂದ ಹರಿಕೀರ್ತನೆ
ದಿನಾಂಕ: 28-10-2024 ಸೋಮವಾರ ಏಕಾದಶಿ ರುದ್ರಸ್ವಾಹಾಕಾರ 1-00 ಗಂಟೆಗೆ ಪೂರ್ಣಾಹುತಿ ನಂತರ ಫಲಹಾರ ರಾತ್ರಿ 8 ರಿಂದ ಸಂಗೀತ ಕಾರ್ಯಕ್ರಮ
ಶ್ರೀದತ್ತ ಸಂಗೀತ ಸಾಧನಾಕೇಂದ್ರ ಕಲಬುರಗಿ ವೃಂದದಿಂದ “ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ” ಮತ್ತು “ದತ್ತಅಭಂಗ” ಕಾರ್ಯಕ್ರಮ
ದಿನಾಂಕ: 29-10-2024 ಮಂಗಳವಾರ ದ್ವಾದಶಿ ಶ್ರೀ ಗುರುದತ್ತಯಾಗ1-00 ಗಂಟೆಗೆ ಪೂರ್ಣಾಹುತಿ ನಂತರ ತೀರ್ಥಮಹಾಪ್ರಸಾದ ಸಾಯಂಕಾಲ 7ಕ್ಕೆ ಪ್ರತಿಭಾ ಪುರಸ್ಕೃತರಿಗೆ ಹಾಗೂ ಹಿರಿಯ ನಾಗರಿಕರಿಗೆ ಸನ್ಮಾನ ಮತ್ತು ವರದಿ ವಾಚನ,
ದಿನಾಂಕ: 30-10-2024 ಬುಧವಾರ ತ್ರಯೋದಶಿ ಅಭಿಷೇಕ ಬುತ್ತಿಪೂಜೆ, ಗೋಪಾಲಕಾವಲ, ಅವಕೃತ ಸ್ನಾನ, ತೀರ್ಥ ಮಹಾಪ್ರಸಾದದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳಿಸಲಾಗುವುದು ಭಕ್ತಾದಿಗಳು ಭಾಗವಹಿಸಿ ತನು,ಮನ, ಧನದಿಂದ ಸೇವೆ ಸಲ್ಲಿಸಿ ಶ್ರೀ ಗುರುದತ್ತ ಕೃಪೆಗೆ ಪಾತ್ರರಾಗಬೇಕೆಂದು ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಸದಸ್ಯರುಗಳು ಶ್ರೀ ಗುರುದತ್ತ ಸೇವಾ ಟ್ರಸ್ಟ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ : ಚನ್ನಯ್ಯ ಹಿರೇಮಠ.