
ಬ್ರೈಟ್ ಬಿಗಿನಿಂಗ್ ಶಾಲೆಯಲ್ಲಿ ಸಂತ ಶ್ರೀ ಸೇವಾಲಾಲ ಮಹಾರಾಜರ 284 ನೇ ದಿನಾಚರಣೆ.
ಗಜೇಂದ್ರಗಡ:ಸತ್ಯಮಿಥ್ಯ (ಫೆ -15).
ಸಮ ಸಮಾಜದ ನಿರ್ಮಾಣ ಹಾಗೂ ಶಿಕ್ಷಣದ ಮಹತ್ವವನ್ನು ಸಾರುವ ಮೂಲಕ ಎಲ್ಲರನ್ನೂ ಸುಶಿಕ್ಷಿತರನ್ನಾಗಿ, ಅಕ್ಷರ ಜ್ಞಾನ ಪಡೆದು ಜಗತ್ತಿಗೆ ಜ್ಞಾನದ ದಾರಿದೀಪರಾದರೇ ಸಂತ ಶ್ರೀ ಸೇವಾಲಾಲರು ಎಂದು ಬ್ರೈಟ್ ಬಿಗಿನಿಂಗ್ ಶಾಲೆಯ ಕಾರ್ಯದರ್ಶಿ ನಾಜೀಯಾ ಮುದಗಲ್ಲ ಹೇಳಿದರು.
ನಗರ ಸಮೀಪದ ಬ್ರೈಟ್ ಬಿಗಿನಿಂಗ್ ಶಾಲೆಯಲ್ಲಿ ಸಂತ ಶ್ರೀ ಸೇವಾಲಾಲ ಮಹಾರಾಜರ ಜಯಂತಿ ಆಚರಣೆಯಲ್ಲಿ ಭಾಗಿಯಾಗಿ ಮಾತನಾಡಿದರು.
ಸೇವಾಲಾಲ ಮಹಾರಾಜರು ತಮ್ಮ ತತ್ವಗಳ ಮೂಲಕ ಜಗತ್ತಿಗೆ ಜ್ಞಾನದ ಮೂಲಕ ಮುಕ್ತಿ ಮಾರ್ಗ ತೋರಿಸಿದರು. ಸರ್ವರನ್ನು ಒಳಗೊಂಡ ಸಮ ಸಮಾಜದ ನಿರ್ಮಾಣ ಹಾಗೂ ಸರ್ವರಲ್ಲೂ ಸೋದರತೆಯ ಭಾವನೆಯನ್ನು ಮೂಡಲು ಪ್ರೇರೇಪಿಸಿದರು. ಇಂತಹ ಮಹಾನ ಚೇತನರನ್ನು ನಮ್ಮ ನಾಡಿನಲ್ಲಿ ಹುಟ್ಟಿದ್ದು ಹೆಮ್ಮೆ. ಇವರನ್ನು ಒಂದು ಸಮುದಾಯಕ್ಕೆ ಸೀಮಿತರಾಗಿಸದೇ, ಸರ್ವ ಧರ್ಮಗಳ ಸಾಂಸ್ಕೃತಿಕ ನಾಯಕರಾಗಿಸಬೇಕಿದೆ ಎಂದರು.
ಇನ್ನೂ ಸಂಸ್ಥೆಯ ಅಧ್ಯಕ್ಷ ಸೀತಲ ಓಲೇಕಾರ, ಶಿಕ್ಷಕಿ ಅನುಷಾ ತಳವಾರ, ನೇತ್ರಾವತಿ ಅಂಬೋರೆ, ಸೇರಿದಂತೆ ಮುದ್ದು ಮಕ್ಕಳು ಇದ್ದರು.
ವರದಿ :ಸುರೇಶ ಬಂಡಾರಿ.