ಇಂದು ನೆಡುವ ಗಿಡವೇ ಮುಂದೆ ಮರವಾಗಿ ನಾವು ಪ್ರಕೃತಿಗೆ ಕೊಟ್ಟ ಉಡುಗೊರೆಯಾಗುತ್ತದೆ:-ವಿ.ಕೆ. ಬಂಡಿ ವಡ್ಡರ

ಇಂದು ನೆಡುವ ಗಿಡವೇ ಮುಂದೆ ಮರವಾಗಿ ನಾವು ಪ್ರಕೃತಿಗೆ ಕೊಟ್ಟ ಉಡುಗೊರೆಯಾಗುತ್ತದೆ:-ವಿ.ಕೆ. ಬಂಡಿ ವಡ್ಡರ
ಕೊಪ್ಪಳ: ಸತ್ಯಮಿಥ್ಯ ( ಜುಲೈ -27)
ಜಿಲ್ಲೆಯ ಕುಕನೂರು ತಾಲೂಕಿನ ಶ್ರೀ ಗವಿಸಿದ್ದೇಶ್ವರ ಪ್ರೌಢಶಾಲೆಯಲ್ಲಿ ಇಂದು ಸರ್.ಸಿ.ವಿ.ರಾಮನ್ ಇಕೋ ಕ್ಲಬ್ ವತಿಯಿಂದ ಪರಿಸರ ರಕ್ಷಣಾ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು .
ಗವಿಸಿದ್ದೇಶ್ವರ ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ ವಿ.ಕೆ ಬಂಡಿವಡ್ಡರ ಜಾಥಾಕ್ಕೆ ಚಾಲನೆ ನೀಡಿದರು , ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ವಿದ್ಯಾರ್ಥಿಗಳು ಪರಿಸರ ಜಾಗೃತಿ ಮೂಡಿಸಿದರು
ನಂತರ ಕಾರ್ಯಕ್ರಮ ಉದ್ದೇಶಿಸಿ ವಿ.ಕೆ ಬಂಡಿವಡ್ಡರ ಮಾತನಾಡುತ್ತ ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎನ್ನುವ ಮಾತನ್ನು ನಾವು ಚಿಕ್ಕಂದಿನಿಂದಲೇ ಕೇಳುತ್ತೇವೆ. ಆದರೆ ಆಚರಣೆಗೆ ತರುವುದನ್ನು ಮರೆತಿದ್ದೇವೆ.ಪ್ರತಿಯೊಬ್ಬರು ಪ್ರತಿದಿನ ಸಾಧ್ಯವಾಗದಿದ್ದರೆ ವಾರಕ್ಕೊಮ್ಮೆಯಾದರೂ ಸಸ್ಯದ ಪೋಷಣೆ ಮಾಡಿದರೆ ಗಿಡವೇ ಮುಂದಿನ ಮರವಾಗಿ ನಾವು ಪ್ರಕೃತಿಗೆ ಕೊಟ್ಟ ಉಡುಗೊರೆಯಾಗುತ್ತದೆ ಎಂದು ಮಾತನಾಡಿದರು.
ಬಿ.ವಿ.ಕಟ್ಟಿ ಮತ್ತು ಎಸ್.ಎಚ್.ಗುಡ್ಲಾನೂರು ಶಿಕ್ಷಕರು ಮಾತನಾಡಿ ಪರಿಸರದಲ್ಲಿನ ಗಾಳಿ ,ನೀರು, ಮಣ್ಣು ,ಮರಗಳು, ಕಾಡುಗಳು, ಸೇರಿದಂತೆ ಪಂಚಭೂತಗಳನ್ನು ಉಳಿಸುವದು ಬಹಳ ಮುಖ್ಯವಾಗಿದೆ. ನಾವು ಅವಲಂಬಿತರಾಗಿರುವ ಈ ಪರಿಸರ ಯುಗ ಯುಗಗಳವರೆಗೂ ಹೀಗೆಯೂ ಉಳಿಯಬೇಕಿದೆ. ಬೇಸರವೆಂದರೆ ನಾವು ಮಾಡುತ್ತಿರುವ ಅರಣ್ಯ ನಾಶ, ಗಣಿಗಾರಿಕೆ, ಕೈಗಾರಿಕರಣ, ಸೇರಿದಂತೆ ಹಲವಾರು ಮಾನವನ ಚಟುವಟಿಕೆಗಳಿಂದ ಪರಿಸರ ಇಂದು ಬಹಳ ಹಾನಿಗೊಳದಾಗುತ್ತಿವೆ. ಆದ್ದರಿಂದ ಪರಿಸರ ರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಮಾತನಾಡಿದರು.
ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕರಾದ ಗವಿಸಿದ್ದಪ್ಪ ಕರಮುಡಿ, ಎಸ್.ಜಿ.ಪಾಟೀಲ್, ಬಿ.ವಿ.ಕಟ್ಟಿ, ಬಿ.ವಿ.ಲಕ್ಷಾಣಿ, ಎನ್.ಟಿ.ಸಜ್ಜನ, ಡಿ.ಡಿ.ಜೋಗಣ್ಣವರ, ವಿ.ಆರ್.ಹಿರೇಮಠ, ಅರ್.ಡಿ. ರಾಠೋಡ, ಮಂಜುಳಾ ನೆಟಗಲ್, ಕೆ. ಬಿ .ದೊಡ್ಮನಿ, ಎ.ಬಿ .ಮೂಲಿಮನಿ, ಹಾಗೂ ಶಾಲಾ ಸಿಬ್ಬಂದಿ ವರ್ಗದವರು ಶಾಲಾ ವಿದ್ಯಾರ್ಥಿಗಳು ಇತರರು ಇದ್ದರು.
ವರದಿ : ಚೆನ್ನಯ್ಯ ಹಿರೇಮಠ.