ಅಂದ ಅನಾಥರ ಆಶಾಕಿರಣ ಲಿಂlಪಂl ಪುಟ್ಟರಾಜ ಕವಿ ಗವಾಯಿಗಳು – ಶರಣಪ್ಪ ಉಮಚಿಗಿ
ಅಂಧ ಮಕ್ಕಳಿಗೆ ಕಣ್ಣು ಕಾಣದಿದ್ದರೂ ಜಗತ್ತೇ ಅವರತ್ತ ನೋಡುವಂತೆ ಮಾಡಿದ ಕೀರ್ತಿ ಲಿಂlಪಂl ಪುಟ್ಟರಾಜ ಕವಿ ಗವಾಯಿಗಳವರಿಗೆ ಸಲ್ಲುತ್ತದೆ:-ಶರಣಪ್ಪ ಉಮಚಿಗಿ
ಅಂದ ಅನಾಥರ ಆಶಾಕಿರಣ ಲಿಂlಪಂl ಪುಟ್ಟರಾಜ ಕವಿ ಗವಾಯಿಗಳು – ಶರಣಪ್ಪ ಉಮಚಿಗಿ
ಅಂಧ ಮಕ್ಕಳಿಗೆ ಕಣ್ಣು ಕಾಣದಿದ್ದರೂ ಜಗತ್ತೇ ಅವರತ್ತ ನೋಡುವಂತೆ ಮಾಡಿದ ಕೀರ್ತಿ ಲಿಂlಪಂl ಪುಟ್ಟರಾಜ ಕವಿ ಗವಾಯಿಗಳವರಿಗೆ ಸಲ್ಲುತ್ತದೆ:-ಶರಣಪ್ಪ ಉಮಚಿಗಿ
ಕೊಪ್ಪಳ:ಸತ್ಯಮಿಥ್ಯ(ಸ -15)
ಜಿಲ್ಲೆಯ ಕುಕನೂರು ತಾಲೂಕಿನ ಮಂಗಳೂರು ಗ್ರಾಮದ, ಮಂಗಳೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ಶ್ರೀ ಗುರು ಪುಟ್ಟರಾಜ ಕವಿ ಗವಾಯಿಗಳವರ 14ನೇ ವರ್ಷದ ಪುಣ್ಯರಾಧನೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.
ಬೆಳಗ್ಗೆ ಎಂಟು ಗಂಟೆಗೆ ಶ್ರೀ ಗುರು ಪುಟ್ಟರಾಜ ಕವಿ ಗವಾಯಿಗಳವರ ಭಾವಚಿತ್ರಕ್ಕೆ ಪೂಜಾ ಕಾರ್ಯಕ್ರಮಗಳು ನೆರವೇರಿಸಿ ನಂತರ ಮಧ್ಯಾಹ್ನ ಒಂದು ಗಂಟೆಗೆ ಗ್ರಾಮದ ಸಕಲ ಸದ್ಭಕ್ತರಿಗೆ ಪ್ರಸಾದ ಸೇವೆಯನ್ನು ನೆರೆವೇರಿಸಲಾಯಿತು. ನಂತರ ಸಾಯಂಕಾಲ 6.30 ಗಂಟೆಗೆ ಶ್ರೀ ಗುರು ಪುಟ್ಟರಾಜ ಕವಿ ಗವಾಯಿಗಳವರ 14ನೇ ವರ್ಷದ ಪುಣ್ಯರಾಧನೆ ಕಾರ್ಯಕ್ರಮವನ್ನು ಮಂಗಳೇಶ್ವರ ಕಲ್ಯಾಣ ಮಂಟಪದಲ್ಲಿ ಮಾಡಲಾಯಿತು.
ಗ್ರಾ. ಪಂ. ಅಧ್ಯಕ್ಷರಾದ ಶಂಕ್ರಪ್ಪ ಎಂ.ಚಿನ್ನೂರು ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು.
ಶರಣಪ್ಪ ಉಮಚಗಿ ಕೆಎಲ್ಇ ಸಂಸ್ಥೆಯ ಉಪನ್ಯಾಸಕರು ಗುರು ಪುಟ್ಟರಾಜ ಕವಿ ಗವಾಯಿಗಳವರ ಪುಣ್ಯರಾಧನೆ ಕುರಿತು ಮಾತನಾಡುತ್ತಾ ಅಂಧತ್ವವನ್ನು ಮೆಟ್ಟಿನಿಂತು, ಅಸಾಧ್ಯವಾದುದನ್ನು ಸಾಧ್ಯವಾಗಿಸಿದವರು ಪುಟ್ಟರಾಜ ಕವಿ ಗವಾಯಿಗಳು. ಅಂಧರು, ಅನಾಥರು, ದೀನ ದಲಿತರಿಗೆ ಸಂಗೀತ ವಿದ್ಯೆ ಕಲಿಸಿ ಅವರಿಗೆ ಸ್ವತಂತ್ರವಾಗಿ ಬದುಕಲು ಕಲಿಸಿಕೊಟ್ಟ ಮಹಾಪುರುಷರು ಅಂಧ ಮಕ್ಕಳಿಗೆ ಕಣ್ಣು ಕಾಣದಿದ್ದರೂ ಜಗತ್ತೇ ಅವರತ್ತ ತಿರುಗಿ ನೋಡುವಂತೆ ಮಾಡಿದ ಕೀರ್ತಿ ಲಿಂ| ಪಂ|ಪುಟ್ಟರಾಜ ಕವಿ ಗವಾಯಿಗಳಿಗೆ ಸಲ್ಲುತ್ತದೆ ಎಂದು ಹೇಳಿದರು.
ನಂತರ ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಿರಿಯ ಪತ್ರಕರ್ತರಾದ ಕೊಟ್ರಪ್ಪ ತೋಟದ ಮಾತನಾಡಿ ಸ್ವತಃ ಅಂಧರಾಗಿದ್ದರೂ ಶ್ರೀಗುರು ಪುಟ್ಟರಾಜರು ಜಗತ್ತಿಗೆ ಜ್ಞಾನದ ಬೆಳಕು ನೀಡಿದ್ದಾರೆ. 12ನೇ ಶತಮಾನದ ಶರಣರ ವಾಣಿಯಂತೆ ಬಾಳಿ ಬದುಕಿದ ಪೂಜ್ಯರು, ತಮ್ಮ ಇಡೀ ಜೀವನವನ್ನು ಸಮಾಜಕ್ಕಾಗಿ ಅರ್ಪಿಸಿದ್ದರು. ಅಂತಹವರನ್ನು ಸಮಾಜವೂ ಸದಾ ಸ್ಮರಿಸುತ್ತದೆ. ಪುಣ್ಯಪುರುಷರ ಸ್ಮರಣೆಯಿಂದ ಹೃದಯದಲ್ಲಿ ಜ್ಞಾನದ ಜ್ಯೋತಿ ಬೆಳಗುತ್ತದೆ. ಜೀವನದಲ್ಲಿ ಸುಖ, ಶಾಂತಿ ನೆಲೆಗೊಳ್ಳುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮದ ವಿಶೇಷ ಕಲಾವಿದರಾದ ಮಂಗಳೇಶಪ್ಪ ಯತ್ನಟ್ಟಿ, ಚೆನ್ನಪ್ಪ ಉಳ್ಳಾಗಡ್ಡಿ, ಹನುಮಂತಪ್ಪ ಭಜಂತ್ರಿ ಕಲಾವಿದರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ವಿಶೇಷ ಸಂಗೀತ ಸೇವೆಯನ್ನು ಸುಜಾತ, ತೇಜಸ್ವಿನಿ, ಶೃತಿ, ವಾಣಿಶ್ರೀ ,ಲಕ್ಷ್ಮಿ, ರಾಜೇಂದ್ರ ಚಿನ್ನೂರ ನೆರವೇರಿಸಿದರು.
ಈ ಸಂದರ್ಭದಲ್ಲಿ ರೇವಣಸಿದ್ದಯ್ಯ ಸ್ವಾಮಿ ಅರಳೇಲೆ ಹಿರೇಮಠ, ಸಕ್ರಪ್ಪ ಎಂ. ಚಿನ್ನೂರ ಗ್ರಾ.ಪಂ. ಅಧ್ಯಕ್ಷರು, ಶರಣಪ್ಪ ಉಮಚಗಿ ಉಪನ್ಯಾಸಕರು, ಕೊಟ್ರಪ್ಪ ತೋಟದ ಪತ್ರಕರ್ತರು, ಶಿವಪುತ್ರಪ್ಪ ಶಿವಶಂಪಿ, ಸುರೇಶ್ ಮಡಿವಾಳರ, ಕಳಕೇಶ ಬಳಿಗಾರ, ಮಂಗಳೇಶ ಎಲಿಗಾರ, ಶರಣಪ್ಪ ಎಮ್ಮಿ ಗ್ರಾ. ಪಂ. ಸದಸ್ಯರು, ಮಹೇಶ ಬಂಡರಕಲ್, ಶರಣಯ್ಯ ಕಲ್ಮಠ, ಮುದುಕಯ್ಯ ವಣಗೇರಿ ಮಠ, ಪ್ರಕಾಶ ಬೆಲ್ಲದ, ರಾಜೇಂದ್ರ ಚಿನ್ನೂರ, ಮಾಬು ಸಾಬ್ ನೂರ್ ಬಾಷಾ, ಆನಂದ್ ಚಿನ್ನೂರ, ಮತ್ತು ಗ್ರಾಮದ ಗುರುಹಿರಿಯರು ಇತರರು ಇದ್ದರು.
ವರದಿ : ಚೆನ್ನಯ್ಯ ಹಿರೇಮಠ.