
ಬಗೆಹರಿಯದ ಬೀದಿಬದಿ ವ್ಯಾಪಾರಸ್ಥರ ಸಮಸ್ಯೆ- ನಾಳೆ ಗಜೇಂದ್ರಗಡ ಬಂದ್ !
ಗಜೇಂದ್ರಗಡ: ಸತ್ಯಮಿಥ್ಯ (ಜ -07)
ಬೀದಿ ಬದಿ ವ್ಯಾಪಾರಸ್ಥರ ಸಂಘದಿಂದ ಕರೆ ನೀಡಿರುವ ಗಜೇಂದ್ರಗಡ ಬಂದ್ ಕರೆಗೆ ಸ್ಥಳೀಯ ವ್ಯಾಪಾರಸ್ಥರ ವ್ಯಾಪಕ ಬೆಂಬಲ ಸೂಚಿಸಿದ್ದು ಬೀದಿ ಬದಿ ವ್ಯಾಪರಿಗಳಿಗೆ ವ್ಯಾಪರ ಮಾಡಲು ಅವಕಾಶ ಕೊಡುವವರಿಗೂ ಈ ಹೋರಾಟ ನಿರಂತರ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಪ್ರಾಂತ ಕೃಷಿ ಕೂಲಿಕಾರ ಸಂಘದ ರಾಜ್ಯ ಉಪಾಧ್ಯಕ್ಷ ಜಿ ನಾಗರಾಜ್ ಹೇಳಿದರು.
ನಗರದ ಪುರಸಭೆ ಆವರಣದಲ್ಲಿ ಬೀದಿ ಬದಿ ವ್ಯಾಪಾರಸ್ಥರ ಅನಿರ್ದಿಷ್ಟಾವಧಿ ಧರಣಿಗೆ ಬೆಂಬಲ ಸೂಚಿಸಿ ಅವರು ಮಾತನಾಡಿದರು.
ಸ್ಥಳೀಯ ಬೀದಿ ಬದಿ ವ್ಯಾಪಾರಸ್ಥರಿಗೆ ಜೋಡು ರಸ್ತೆಯಲ್ಲಿ ವ್ಯಾಪರ ಮಾಡಲು ಅವಕಾಶ ಕಲ್ಪಿಸದೆ, ಅವರನ್ನು ಬಲವಂತವಾಗಿ ಒಕ್ಕಲೇಬ್ಬಿಸಿ ಅನಧಿಕೃತ ಬಯಲು ಜಾಗೆಗೆ ಕಳಿಸಿದ ಕ್ರಮ ಖಂಡನೀಯ, ಕೂಡಲೇ ಶಾಸಕರು ಮಧ್ಯ ಪ್ರವೇಶ ಮಾಡಿ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗಬೇಕು ಎಂದರು.
ಡಿವಾಯ್ಎಫ್ಐ ರಾಜ್ಯ ಮುಖಂಡ ಫಯಾಜ್ ತೋಟದ ಬೆಂಬಲ ಸೂಚಿಸಿ ಮಾತನಾಡಿದರು.
ಬೀದಿ ಬದಿ ವ್ಯಾಪರಸ್ಥರ ಸಂಘದ ಅಧ್ಯಕ್ಷ ಎಸ್ ಎ ದಿಂಡವಾಡ, ಪ್ರಧಾನ ಕಾರ್ಯದರ್ಶಿ ಪೀರು ರಾಠೋಡ,
ಸಿಪಿಐಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಬಾಲು ರಾಠೋಡ ಶಾಖಾ ಕಾರ್ಯದರ್ಶಿ ದಾವಲಸಾಬ ತಾಳಿಕೋಟಿ, ಮೆಹಬೂಬ್ ಹವಾಲ್ದಾರ್ ಚಂದ್ರು ರಾಠೋಡ, ಗಣೇಶ ರಾಠೋಡ, ಅನೀಲ ರಾಠೋಡ, ಸೇರಿದಂತೆ ನೂರಾರು ಬೀದಿ ಬದಿ ವ್ಯಾಪಾರಸ್ಥರ ಭಾಗವಹಿಸಿದ್ದರು.
ವರದಿ : ಚನ್ನು. ಎಸ್.