ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿ ಟ್ರಸ್ಟ್ ನ ಕಾರ್ಯಕ್ಕೆ ಮೆಚ್ಚುಗೆ.
ಕುಕನೂರು : ಸತ್ಯಮಿಥ್ಯ ( ಅಗಸ್ಟ್ -28)
ಪಟ್ಟಣದ ಕನ್ನಡ ಮತ್ತು ಸಂಸ್ಕೃತಿ ಅಭಿವೃದ್ಧಿ ಟ್ರಸ್ಟ್ ವತಿಯಿಂದ ವಿದ್ಯಾನಗರದ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ನಿಮಿತ್ತ ನಗರದ ಚಿಣ್ಣರಿಗಾಗಿ ಸಾಂಸ್ಕೃತಿಕ ಪ್ರತಿಭೋತ್ಸವ ಮಕ್ಕಳ ವಿವಿಧ ಬಗೆಯ ವೇಷ ಭೂಷಣ ಪ್ರದಶ೯ನ ಸೋಮವಾರ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯ್ಯೊಪಾಧ್ಯಾಯ ಧರ್ಮಪ್ಪ ನಾಯಕ್ ಮಾತನಾಡಿ, ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ ಉಳಿಕೆ, ಬಳಕೆ ಮತ್ತು ಬೆಳವಣಿಗೆಗೆ ಸ್ಥಳೀಯ ಕನ್ನಡ ಅಭಿವೃದ್ಧಿ ಟ್ರಸ್ಟ್ ಅನೇಕ ಚಟುವಟಿಕೆಗಳನ್ನು ನಡೆಸುತ್ತಾ ಬಂದಿದೆ.
ತಾಲೂಕು ಜಿಲ್ಲಾಮಟ್ಟದಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿ ಕನ್ನಡ ಸಾಹಿತ್ಯ ಸಂಸ್ಕೃತಿ ಬೆಳವಣಿಗೆಯ ಸೇವೆ ಮಾಡುತ್ತಿದೆ ಎಂದು ಹೇಳಿದರು.
ಎಸ್ ಡಿ ಎಂ ಸಿ ಅಧ್ಯಕ್ಷ ಪ್ರವೀಣ್ ದಾಸ್ ಅವರಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಕುರಿತ ಆಚರಣೆ, ಉದ್ದೇಶದ ಬಗ್ಗೆ ವಿಶೇಷ ಮಾತುಗಳನ್ನು ಹೇಳಿದರು.
ಸ್ಥಳೀಯ ಠಾಣೆಯ ಪಿಎಸ್ಐ ಗುರುರಾಜ್ ಟಿ ಅವರು ಕಾರ್ಯಕ್ರಮಕ್ಕೆ ೩೫ ಕೂ ಅಧಿಕ ಬಂದು ಭಾಗವಹಿಸಿದ ಮುದ್ದು ಮಕ್ಕಳಿಗೆ ಪ್ರಶಸ್ತಿ ಪತ್ರ ವಿತರಿಸಿದರಲ್ಲದೆ ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯ ಕೋರಿದರು. ಆಕಾಶ ವಾಣಿ ಕಲಾವಿದರಾದ ಮೇಘರಾಜ ಜಿಡಗಿ ಅವರು ಹಾಡುಗಳನ್ನು ಹಾಡಿ ರಂಜಿಸಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ್ ಸದಸ್ಯರಾದ ರಾಧಾ ದೊಡ್ಡಮನಿ, ಉಪಾಧ್ಯಕ್ಷ ಪ್ರಶಾಂತ್ ಆರುಬೆರಳಿನ, ಸಿ. ಆರ್ .ಪೀ. ಪೀರಸಾಬ್ ದಫೆದಾರ್,ಎಸ್ ಡಿ ಎಂ ಸ ಉಪಾಧ್ಯಕ್ಷೆ ಮಮತಾಜ್ ಬೇಗಂ, ಪತ್ರಕರ್ತ ಈರಯ್ಯ ಕುರ್ತಕೋಟಿ, ಚನ್ನಯ್ಯಾ ಹಿರೇಮಠ, ಶಿಕ್ಷಕಿಯರು ಉಪಸ್ಥಿತರಿದ್ದರು. ಶಿಕ್ಷಕಿ ವೀಣಾ ಪ್ರಾರ್ಥಿಸಿದರು. ಸಂಸ್ಥೆಯ ಅಧ್ಯಕ್ಷ ರುದ್ರಪ್ಪ ಭಂಡಾರಿ ಸ್ವಾಗತಿಸಿದರು.
ವರದಿ :ಚೆನ್ನಯ್ಯ ಹಿರೇಮಠ.