ಮುದ್ದೇಬಿಹಾಳ: ಸತ್ಯಮಿಥ್ಯ (ಜುಲೈ -24).
ಬಯ್ಯಾ ಬಯ್ಯಾ ಬಗಲಮೇ ಚೂರಿ ಎಂದು ನನ್ನನ್ನು ಸೋಲಿಸಿದರು,ನಾನಾರಿಗೂ ಮೋಸ ಮಾಡಿಲ್ಲದಿರುವುದೇ ನನ್ನ ಸಾಧನೆ, ಮೂರು ಬಾರಿ ನಿಮ್ಮ ಪ್ರತಿನಿಧಿಯಾಗಿ ವಿಧಾನಸಭೆ ಪ್ರವೇಶಿಸುವ ಅವಕಾಶವನ್ನು ಕೊಟ್ಟಿದ್ದಿರಿ,ಭಯ್ಯಾ ಬಯ್ಯಾ ಎಂದು ಬಗಲಮೇ ಚೂರಿ ಹಾಕಿದವರು ನನ್ನನ್ನು ಸೋಲಿಸಿದರು, ನನಗೆ ಅಧಿಕಾರದ ಆಶೆಯ ಹುಚ್ಚಿಲ್ಲ, ನಾನು ಸೋತಾಗ ಐದು ವರ್ಷಗಳ ನಿಮ್ಮ ಸೇವೆ ಮಾಡುವ ಅವಕಾಶದಿಂದ ವಂಚಿತನಾದೆ ಎಂಬ ನೋವು ಒಂದು ಕ್ಷಣ ಕಾಡಿತು ಎಂದು ಕರ್ನಾಟಕ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಸ್ಥಳೀಯ ರತ್ನ ಸಂಗಮ ಮಂಗಲ ಕಾರ್ಯಾಲಯದಲ್ಲಿ ಚಂದ್ರಶೇಖರ ಗಂಗನಗೌಡ್ರ ಗೆಳೆಯರ ಬಳಗದಡಿ ಹಮ್ಮಿಕೊಂಡಿದ್ದ ತಮ್ಮ 55 ನೇ ಜನ್ಮ ದಿನ ಹಾಗೂ ಸಮಾಜ ಸೇವಕ ಚಂದ್ರಶೇಖರ ಗಂಗನಗೌಡ ಅವರ 45 ನೇ ಜನ್ಮದಿನದ ಆಚರಣೆಯ ಸಮಾರಂಭದಲ್ಲಿ ಮಾತನಾಡಿದರು.
ಎರಡು ಅಣೆಕಟ್ಟಿನ ನಡುವಿನ ಬಂಗಾರದ ಭೂಮಿಯಿದ್ದು, ಬಂಗಾರದ ಬೆಳೆ ಬೆಳೆ ಬೆಳೆಯಬೇಕು,ಭೂಮಿ ಇದ್ದವನೇ ಸಿರಿವಂತ ಎಂದು ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಇದಕ್ಕೂ ಮೊದಲು ವೀರೇಶ್ವರ ಶರಣರ ಮಹಾಮನೆಯಲ್ಲಿ ಶರಣರಿಗೆ ಹಾಗೂ ಗೋ ಮಾತೆಗೆ ಪೂಜೆ ಸಲ್ಲಿಸಿದರು,ಡಾ.ಬಾಬಾಸಾಹೇಬ್ ಅಂಬೇಡ್ಕರ್,ಶರಣ ವೀರೇಶ್ವರರ,ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣಿ ಮಾಡಿ ಶರಣರ ಮಠದಿಂದ ಮೆರವಣಿಗೆ ಮೂಲಕ ಕಾರ್ಯಕ್ರಮದ ಸ್ಥಳಕ್ಕೆ ತೆರಳಿದರು.
ಕೆಂಚಪ್ಪ ಬಿರಾದಾರ,ಎಂ.ಎಸ್.ಪಾಟೀಲ,ಮುತ್ತು ಅಂಗಡಿ,ಮುನ್ನಾಧಣಿ ನಾಡಗೌಡ್ರ,ಗಿರೀಶ್ ಪಾಟೀಲ ಮಾತನಾಡಿದರು.ರಾಜು ಹಾದಿಮನಿ ನಿರೂಪಿಸಿ ವಂದಿಸಿದರು. ಬಿಜೆಪಿ ಮುಖಂಡ ಬಿ.ಎಂ.ತಾಳಿಕೋಟಿ ವಕೀಲರು ಸೇರಿದಂತೆ ಸಾವಿರಾರು ಕಾರ್ಯಕರ್ತರು,ಅಭಿಮಾನಿಗಳು ಇದ್ದರು.
ವರದಿ : ಶಿವು ರಾಠೋಡ.