ಭವಾನಿ ಬ್ಯಾಂಕ್ | ₹32 ಲಕ್ಷ 28 ಸಾವಿರ ಲಾಭ: ಉಮೇಶ್ ಜಾಧವ
ಸಾವಳಗಿ:ಸತ್ಯಮಿಥ್ಯ(ಸ-16)
ಸ್ಥಳೀಯ ಪ್ರತಿಷ್ಠಿತ ಭವಾನಿ ಕೋ ಆಪ್ ಕ್ರೇಡಿಟ್ ಸೊಸಾಯಿಟಿ ನಿ ಬ್ಯಾಂಕ್ 2023 – 24ನೇ ಸಾಲಿನಲ್ಲಿ ₹ ₹32 ಲಕ್ಷ 28 ಸಾವಿರ ಲಾಭ ಗಳಿಸಿದೆ’ ಎಂದು ಬ್ಯಾಂಕಿನ ಅದ್ಯಕ್ಷ ಉಮೇಶ್ ಜಾಧವ್ ಹೇಳಿದರು.
ನಗರದಲ್ಲಿ ಅಂಬಾ ಭವಾನಿ ಭವನದಲ್ಲಿ ಇತ್ತೀಚೆಗೆ ನಡೆದ ಬ್ಯಾಂಕಿನ 23ನೇ ವಾರ್ಷಿಕ ಸರ್ವ ಸಾಧಾರಣ ಸಭೆ ಉದ್ಘಾಟಿಸಿ ಮಾತನಾಡಿದರು.
ನಮ್ಮ ಸಹಕಾರಿ ಸಂಘವು 43 ಕೋಟಿ 27 ಲಕ್ಷ ಹೆಚ್ಚು ವಹಿವಾಟು ನಡೆಸಿದೆ ನಮ್ಮ ಸಂಘದ ಒಟ್ಟು ಬಂಡವಾಳ 13 ಕೋಟಿ 7 ಲಕ್ಷ ಬಂಡವಾಳ ಹೊಂದಿದೆ, ಈ ವರ್ಷ 32 ಲಕ್ಷ 28ಸಾವಿರ ನಿವ್ವಳ ಲಾಭ ಗಳಿಸಿದೆ ಇದಕ್ಕೆ ಕಾರಣರಾದ ನಮ್ಮ ಸಂಘದ ಕೆಲವು ಗ್ರಾಹಕರಿಗೆ ಗೌರವ ಸನ್ಮಾನ ಸಮಾರಂಭ ನಡೆಸಿ ಇದೆ ಸಂದರ್ಭದಲ್ಲಿ ಮುಂದಿನ ವರ್ಷ 50 ಲಕ್ಷ ಲಾಭ ಹೊಂದುವ ಗುರಿ ಹೊಂದಲಾಗಿದೆ ಎಂದು ಭವಾನಿ ಕೋ ಆಪ್ ಕ್ರೇಡಿಟ್ ಸೊಸಾಯಿಟಿ ನಿ ಅಧ್ಯಕ್ಷ ಉಮೇಶ್ ಜಾಧವ್ ಎಂದು ಹೇಳಿದರು.
ಸಭೆಯಲ್ಲಿದ್ದ ಸಂಘದ ಮುಖ್ಯ ವ್ಯವಸ್ಥಾಪಕ ಸಹದೇವ ಕೇಸ್ಕರ ವರದಿವಾಚನ ಮಂಡಿಸಿದರು. ಸಭೆಯಲ್ಲಿ ಶೇರುದಾರರು ಸಂಘದ ಬೆಳವಣಿಗೆಗೆ ಸಲಹೆ ಸೂಚನೆ ನೀಡಿದರು ಬ್ಯಾಂಕಿನ ಹಿರಿಯ ನಿರ್ದೇಶಕ ಮಾತನಾಡಿದರು ಪ್ರತಿಭಾವಂತ ಮಕ್ಕಳಿಗೆ ಸತ್ಕರಿಸಿ ಪ್ರೋತ್ಸಾಹಿಸಲಾಯಿತು.
ಪ್ರತಿಭಾ ಪುರಸ್ಕಾರ: ಪ್ರಸಕ್ತ 2023-24 ನೇ ಸಾಲೀನ ಎಸ್.ಎಸ್.ಎಲ್.ಸಿ ಮತ್ತು ದ್ವೀತಿಯ ಪಿಯುಸಿ ವಾರ್ಷಿಕ ಪರಿಕ್ಷೇಯಲ್ಲಿ 85% ಕ್ಕಿಂತ ಹೆಚ್ಚು ಅಂಕ ಗಳಿಸಿದ ಜಮಖಂಡಿ ತಾಲೂಕಾ ಮರಾಠ ಸಮಾಜದ ವಿಧ್ಯಾರ್ಥಿ/ನಿಯರಿಗೆ ಪ್ರತಿಭಾನ್ವಿತ ಮಕ್ಕಳಿಗೆ ಪ್ರೋತ್ಸಾಹಿಸಿದರು.
ಇದೇ ಸಂದರ್ಭದಲ್ಲಿ ಭವಾನಿ ಕೋ ಆಪ್ ಕ್ರೇಡಿಟ್ ಸೊಸಾಯಿಟಿ ನಿ, ಬ್ಯಾಂಕಿನ ಉಪಾಧ್ಯಕ್ಷ ಶ್ರೀಮತಿ ಪೂಜಾ ಸಂತೋಷ ಜಾಧವ, ನಿರ್ದೇಶಕರಾದ ಜೋತಿ ಜಾಧವ, ಕಲ್ಲಪ್ಪ ಹುನ್ನೂರ, ಭೀಮಪ್ಪ ಕೇಸ್ಕರ, ಶಶಿಕುಮಾರ್ ಬಾಪಕರ, ಶಿವಾಜಿ ಹರಪಾಳೆ, ರಾಜು ಮೋಹಿತೆ, ಸಂಬಾಜಿ ವಾಗಾಂವಕರ, ಸುನೀಲ್ ಗಾಯಕವಾಡ, ಶ್ರೀಮತಿ ರುಕ್ಮಾಕ ಸೂರ್ಯವಂಶಿ, ಶ್ರೀಮತಿ ನಿಂಬೇವ್ವಾ ಭಜಂತ್ರಿ, ಹಾಗೂ ಅರ್ಜುನ್ ಬಾಪಕರ, ಸಂಜೀವ ಮೋಹಿತೆ, ಕೀರ್ತಿಕುಮಾರ ನಾಂದ್ರೇಕರ ಶೇರುದಾರರು, ಸೇರಿದಂತೆ ಅನೇಕ ಉಪಸ್ಥಿತರಿದ್ದರು.
ನಮ್ಮ ಸಂಘವು ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಲಾಭ ಪಡೆದಿದ್ದು ಸಂಘದ ಬೆಳವಣಿಗೆಗೆ ಎಲ್ಲಾ ಶೇರುದಾರರು ಹಾಗೂ ಸಿಬ್ಬಂದಿ ವರ್ಗದವರು ಕಾರಣರಾಗಿದ್ದಾರೆ. ಮುಂದಿನ ವರ್ಷದ ಒಳಗಾಗಿ ಬ್ಯಾಂಕಿನ ವತಿಯಿಂದ ರಸಗೊಬ್ಬರ ಔಷಧ, ಸುಪರ್ ಮಾರ್ಕೆಟವನ್ನು ಪ್ರಾರಂಭಿಸೋಣ.
ಉಮೇಶ್ ಜಾಧವ್. ಅಧ್ಯಕ್ಷರು ಭವಾನಿ ಕೋ ಆಪ್ ಕ್ರೇಡಿಟ್ ಸೊಸಾಯಿಟಿ ನಿ ಸಾವಳಗಿ