ಶೌಚಾಲಯ ಕಟ್ಟಿಸಲು ವಿದ್ಯಾರ್ಥಿಗಳು ಪ್ರೇರಣೆಯಾಗಬೇಕು – ಸಿ.ಇ.ಓ ರಾಹುಲ್ ರತ್ನಂ ಪಾಂಡೆ.
ಕೊಪ್ಪಳ: ಸತ್ಯಮಿಥ್ಯ (ಜುಲೈ – 25)
ಶೌಚಾಲಯ ಒಂದು ಗೌರವದ ಸಂಕೇತ ಎಲ್ಲರೂ ಕಡ್ಡಾಯವಾಗಿ ಶೌಚಾಲಯ ನಿರ್ಮಾಣ ಮಾಡಿಕೊಳ್ಳಿ ಎಂದು ಕೊಪ್ಪಳ ಜಿಲ್ಲಾಪಂಚಾಯತ್ ಸಿಇಓ ರಾಹುಲ್ ರತ್ನಂ ಪಾಂಡೆ ನುಡಿದರು.
ಜಿಲ್ಲೆಯ ಕುಕನೂರು ತಾಲೂಕ ಮಂಗಳೂರು ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ಜನಸ್ಪಂದನ ಕಾರ್ಯಕ್ರಮದ ನಿಮಿತ್ಯ ಮಂಗಳೂರು ಗ್ರಾಮದ ಸರ್ಕಾರಿ ಪ್ರೌಢ ಶಾಲಾ ಕಾಲೇಜಿನ ಭೇಟಿ ನೀಡಿದರು. ವಿಧ್ಯಾರ್ಥಿಗಳೊಂದಿಗೆ ಸಂವಾದ ಮಾಡಿದ ಸಿಇಒ ವಿದ್ಯಾರ್ಥಿಗಳ ಓದುವಾಗ ಗುರಿಯನ್ನು ಇಟ್ಟುಕೊಳ್ಳಬೇಕು ಅಂದಾಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದರು. ವಿದ್ಯಾರ್ಥಿಗಳಿಗೆ ತಮ್ಮ ಮನೆಯಲ್ಲಿ ಶೌಚಾಲಯ ಇರುವ ಬಗ್ಗೆ ವಿಚಾರಿಸಿದರು ಅದಕ್ಕೆ ಕೆಲವು ವಿದ್ಯಾರ್ಥಿಗಳು ತಮ್ಮ ಮನೆಯಲ್ಲಿ ಶೌಚಾಲಯ ಇರುವುದಿಲ್ಲ ಎಂದರು ಅದಕ್ಕೆ ಮಾನ್ಯರು ಸರ್ಕಾರದಿಂದ 16000-18000 ಸಹಾಯಧನ ಸಿಗುತ್ತದೆ ಅದಕ್ಕೆ ವಿದ್ಯಾರ್ಥಿಗಳು ತಮ್ಮ ಪಾಲಕರ ರೇಷನ್ ಕಾರ್ಡ ಅಕೌಂಟ್ ನಂಬರ ನೀಡಬೇಕೆಂದು ಸೂಚಿಸಿದರು.
ನಂತರ ಶಾಲಾ ಆವರಣದಲ್ಲಿರುವ 10 ನೇ ಅಂಗನವಾಡಿ ಕೇಂದ್ರ ಹಾಗೂ ಕೂಸಿನ ಮನೆಯನ್ನು ವೀಕ್ಷಣೆ ಮಾಡಿದರು.ಅಂಗನವಾಡಿ ಕೇಂದ್ರದಲ್ಲಿ ಸ್ಟಾಕ್, ಅಡುಗೆ ಸಾಮಗ್ರಿಗಳು ಹಾಗೂ ಇತರೆ ಪರಿಕರಗಳ ಬಗ್ಗೆ ವಿಚಾರಿದಿದರು.
ಸ್ಥಳದಲ್ಲಿ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಂತೋಷ ಬಿರಾದರ್ ಪಾಟೀಲ್ ಸರ್, ಸಿ.ಡಿ.ಪಿ.ಓ ಬೆಟದಪ್ಪ ಮಾಳೆಕೊಪ್ಪ, ಗ್ರಾಮ ಪಂಚಾಯತಿ ಪಿಡಿಓ ರವರು ಅಂಗನವಾಡಿ ಕಾರ್ಯಕರ್ತೆಯರು, ಕೂಸಿನಮನೆ ಆರೈಕೆದಾರರು ಗ್ರಾಮ ಪಂಚಾಯತಿ ಸಿಬ್ಬಂದಿಗಳು, ಶಾಲಾ ಮಕ್ಕಳು ಹಾಜರಿದ್ದರು.
ವರದಿ :ಚೆನ್ನಯ್ಯ ಹಿರೇಮಠ.