ಸ್ಥಳೀಯ ಸುದ್ದಿಗಳು

ಮಲ್ಲಯ್ಯ ಗುಂಡುಗೋಪುರಮಠರಿಗೆ “ಛಾಯಾಶ್ರೀ” ಪ್ರಶಸ್ತಿ.

Share News

ಮಲ್ಲಯ್ಯ ಗುಂಡುಗೋಪುರಮಠರಿಗೆ “ಛಾಯಾಶ್ರೀ” ಪ್ರಶಸ್ತಿ

ಫೋಟೋ ಶೀರ್ಷಿಕೆ:ಬೆಂಗಳೂರಿನ ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ಛಾಯಾಶ್ರೀ ಪ್ರಶಸ್ತಿ ಸ್ವೀಕರಿಸಿದ ನರೇಗಲ್ಲದ ಮಲ್ಲಯ್ಯ ಗುಂಡಗೋಪುರಮಠ(ಎಡದಿಂದ ಎರಡನೇಯವರು).

ಜಕ್ಕಲಿ: ಸತ್ಯಮಿಥ್ಯ( ಸೆ.೨೪)

೧೯೮೬ರಿಂದಲೂ ಛಾಯಾಚಿತ್ರ ವೃತ್ತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಮಂಜುನಾಥ ಫೋಟೋ ಸ್ಟುಡಿಯೋದ ಮಾಲೀಕ, ಸಮೀಪದ ನರೇಗಲ್ಲ ಪಟ್ಟಣದ ಹಿರಿಯ ಛಾಯಾಗ್ರಾಹಕ ಮಲ್ಲಯ್ಯ ಕಳಕಯ್ಯ ಗುಂಡುಗೋಪರಮಠ ಅವರಿಗೆ ರಾಜ್ಯ ಮಟ್ಟದ “ಛಾಯಾಶ್ರೀ” ಪ್ರಶಸ್ತಿ ಲಭಿಸಿದೆ.

ಕರ್ನಾಟಕ ಛಾಯಾಚಿತ್ರಗ್ರಾಹಕರ ಸಂಘದಿಂದ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಡಿಜಿ ಇಮೇಜ್ ದಶಮಾನೋತ್ಸವ ೨೦೨೪ರ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನದ ಕಾರ್ಯಕ್ರಮದಲ್ಲಿ ಸಂಘದ ರಾಜ್ಯಾಧ್ಯಕ್ಷ ನಾಗೇಶ ಎಸ್.ಎಚ್ ಇವರು ಅನೇಕ ಗಣ್ಯರ ಸಮ್ಮುಖದಲ್ಲಿ ಮಲ್ಲಯ್ಯ ಅವರಿಗೆ ಛಾಯಾಶ್ರೀ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದ್ದಾರೆ.

ಗದಗ ಜಿಲ್ಲಾ ಗಜೇಂದ್ರಗಡ ತಾಲೂಕಿನ ನರೇಗಲ್ಲ ಪಟ್ಟಣದಲ್ಲಿ ಕಳೆದ ೩೮ ವರ್ಷಗಳಿಂದಲೂ ಛಾಯಾಗ್ರಾಹಕ ಕ್ಷೇತ್ರದಲ್ಲಿ ಉತ್ತಮ ಛಾಯಾಗ್ರಾಹಕರಾಗಿ ಸೇವೆಯೊಂದಿಗೆ, ಅನೇಕ ಸಂಘಟನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಇವರನ್ನು ಗುರುತಿಸಿದ ಗಜೇಂದ್ರಗಡ ತಾಲೂಕು ಛಾಯಾಗ್ರಾಹಕರ ಸಂಘ ಅವರನ್ನು ತಾಲೂಕಾ ಛಾಯಾಚಿತ್ರಗ್ರಾಹಕರ ಸಂಘದ ಉಪಾಧ್ಯಕ್ಷರನ್ನಾಗಿ ನೇಮಿಸಿತು. ನಂತರ ಗದಗ ಜಿಲ್ಲಾ ಛಾಯಾಗ್ರಾಹಕ ಸಂಘವು ಮಲ್ಲಯ್ಯ ಗುಂಡಗೋಪುರಮಠರಿಗೆಛಾಯಾಶ್ರೀ ಪ್ರಶಸ್ತಿಗಾಗಿ ಶಿಫಾರಸ್ಸು ಮಾಡಿತು. ಇದರಿಂದ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೆಪ್ಟೆಂಬರ್ ೨೦ರಿಂದ ೨೨ರವರೆಗೆ ಮೂರು ದಿನಗಳ ಕಾಲ ನಡೆದ ಅಂತಾರಾಷ್ಟ್ರೀಯ ಡಿಜಿ ೨೦೨೪ರ ಸಮ್ಮೇಳನದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

ನನ್ನ ಸೇವೆಯನ್ನು ಗುರುತಿಸಿ ನನಗೆ ಪ್ರಶಸ್ತಿ ನೀಡಿರುವುದಕ್ಕೆ ನಾನು ಎಲ್ಲರಿಗೂ ಆಭಾರಿಯಾಗಿದ್ದೇನೆ. ಈ ಪ್ರಶಸ್ತಿಯನ್ನು ನನ್ನ ಕುಟುಂಬಕ್ಕೆ ಹಾಗೂ ನನ್ನ ಛಾಯಾಗ್ರಾಹಕರ ಬಳಗಕ್ಕೆ ಅರ್ಪಿಸುತ್ತಿದ್ದೇನೆ. ನನಗೆ ಪ್ರಶಸ್ತಿ ನೀಡಿರುವುದಕ್ಕೆ ಎಲ್ಲರಿಗೂ ಅನಂತಾನಂತ ಧನ್ಯವಾದಗಳು” – ಮಲ್ಲಯ್ಯ ಗುಂಡಗೋಪುರಮಠ.

ಅಭಿನಂದನೆ: ಛಾಯಾಗ್ರಾಹಕ ಸಂಘದ ಜಿಲ್ಲಾಧ್ಯಕ್ಷ ಪವನ್ ಮೆಹರವಾಡೆ, ಗಜೇಂದ್ರಗಡ ತಾಲೂಕಾ ಅಧ್ಯಕ್ಷ ಶಿವಾನಂದ ಮೇಟಿ, ನರೇಗಲ್ಲದ ಸ್ಟುಡಿಯೋಗಳ ಮಾಲೀಕರಾದ ಸಮೀರ ಬಳಬಟ್ಟಿ, ಮಲ್ಲಣ್ಣ ಬೆಟಗೇರಿ, ಈಶ್ವರ ಬೆಟಗೇರಿ, ಗವಿಸಿದ್ದಪ್ಪ ಗೊಡಚಪ್ಪನವರ, ಚಂದ್ರಶೇಖರ ಬೆಟಗೇರಿ, ಚಂದ್ರು ಜೋಳದ, ರಫೀಕ್ ನದಾಫ್ ಸೇರಿದಂತೆ ಇನ್ನು ಅನೇಕ ಸ್ನೇಹಿತರು, ಬಂಧು-ಬಳಗದವರು ಗುಂಡಗೋಪುರಮಠರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ವರದಿ: ಸಂಗಮೇಶ ಮೆಣಸಗಿ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!