ಸಂವಿಧಾನ ಶಿಲ್ಪಿ ಡಾ.ಬಿ. ಆರ್.ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನೆಗೆ ಒತ್ತಾಯ.
ಗಜೇಂದ್ರಗಡ :ಸತ್ಯಮಿಥ್ಯ(ಸೆ -27).
ಗಜೇಂದ್ರಗಡ ಪುರಸಭೆ ವ್ಯಾಪ್ತಿಯಲ್ಲಿ ಬರುವ ಡಾ.ಬಿ.ಆರ್. ಅಂಬೇಡ್ಕರ್ ಅವರ ವೃತ್ತದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ. ಆರ್.ಅಂಬೇಡ್ಕರವರ ಮೂರ್ತಿ ನಿರ್ಮಿಸಬೇಕೆಂದು ಒತ್ತಾಯಿಸಿ ಶುಕ್ರವಾರ ಮುಖ್ಯಾಧಿಕಾರಿಗೆ ಕ್ರಾಂತಿಸೂರ್ಯ ಜೈಭೀಮ್ ಸೇನೆ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
ಈ ವೇಳೆ ಸಂಘಟನೆಯ ಮುಖಂಡ ಪ್ರಕಾಶ ರಾಠೋಡ ಮಾತನಾಡಿ, ಗಜೇಂದ್ರಗಡ ಪಟ್ಟಣದ ಜೋಡು ರಸ್ತೆಯಲ್ಲಿರುವ ಅಂಬೇಡ್ಕರ್ ವೃತ್ತವು ನೆಪ ಮಾತ್ರಕ್ಕೆ ಸೀಮಿತವಾಗಿದ್ದು . ಆದರೆ ಭಾರತೀಯ ಸಂವಿಧಾನದ ರಚನೆಕಾರ ಸ್ವತಂತ್ರ ಭಾರತದ ಮೊದಲ ಕಾನೂನು ಮಂತ್ರಿ, ಗಡಿಗಳನ್ನು ಮರುರೂಪಿಸಿದ ಬಹುಮುಖ ವ್ಯಕ್ತಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಮೂರ್ತಿಯನ್ನು ವೃತ್ತದಲ್ಲಿ ಇನ್ನೂ ನಿರ್ಮಿಸಿಲ್ಲ. ಕೂಡಲೇ ಪುರಸಭೆ ವತಿಯಿಂದ “ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಕಲ್ಯಾಣ ಯೋಜನೆ ಹಾಗೂ ಪ್ರಸ್ತುತ ಸಾಲಿನ ಎಸ್ಎಫ್ಸಿ ಹಾಗೂ ಪುರಸಭಾ ನಿಧಿ ಬಳಸಿಕೊಂಡು ಸಂವಿಧಾನಶಿಲ್ಪಿ, ಡಾ.ಬಿ.ಆರ್. ಅಂಬೇಡ್ಕರ್ ಅವರ ವೃತ್ತದಲ್ಲಿ ಮಹಾನಾಯಕ ಅಂಬೇಡ್ಕರ್ ಅವರ ಮೂರ್ತಿ ನಿರ್ಮಾಣದ ಕುರಿತು ಪುರಸಭೆ ಸಾಮಾನ್ಯ ವಿಷಯ ಪ್ರಸ್ತಾಪಿಸಿ, ಕೂಡಲೇ ಅನುಮೊದನೆಗೆ ಮುಂದಾಗಬೇಕು. ಇಲ್ಲವಾದಲ್ಲಿ ಸಂಘಟನೆಯಿಂದ ಉಗ್ರ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಸಿದರು.
ಇದೇ ಸಂದರ್ಭದಲ್ಲಿ ಕನಕಪ್ಪ ಕಲ್ಲೋಡ್ಡರ, ರವಿ ನಿಡಗುಂದಿ, ಅಮಿತ ಭಜೇಂತ್ರಿ, ರಮೇಶ ತಳವಾರ, ದುರಗಪ್ಪ ಪೂಜಾರ, ಮಾರುತಿ ಬಂಕದ, ಶುಭಂ ಮಾರನಾಳ, ಕಿರಣ ವಡ್ಡರ, ಮಾರುತಿ ವಡ್ಡರ ಸೇರಿದಂತೆ ಇತರರು ಇದ್ದರು.
ವರದಿ : ಚನ್ನು. ಎಸ್.