ಸೋಶಿಯಲ್ ಮೀಡಿಯಾ ಅಪ್ಡೇಟ್ಸ್

ಹೊಸ ವರ್ಷಕ್ಕೆ ಮಾಳು ನಿಪನಾಳ ಯೂಟ್ಯೂಬ್ ಚಾನಲ್ ನಲ್ಲಿ “ವಿಜಯ ಪತಾಕೆ” ಟೀಸರ್ ಬಿಡುಗಡೆ.

Share News

ಹೊಸ ವರ್ಷಕ್ಕೆ ಮಾಳು ನಿಪನಾಳ ಯೂಟ್ಯೂಬ್ ಚಾನಲ್ ನಲ್ಲಿ “ವಿಜಯ ಪತಾಕೆ” ಟೀಸರ್ ಬಿಡುಗಡೆ.

ಗಜೇಂದ್ರಗಡ:ಸತ್ಯಮಿಥ್ಯ (ಡಿ -31).

ಉತ್ತರ ಕರ್ನಾಟಕ ಯುವಕ ಆರ್.ಶೈನ್ ನಾಯಕ‌ ನಟನಾಗಿ, ಕಥೆ, ಚಿತ್ರಕಥೆ, ನಿರ್ದೇಶನವನ್ನು ಮಾಡಿ, ನಾಯಕ ನಟಿಯಾಗಿ ಕಾಂಚನಾ ವಿಜಯಪುರ, ಖ್ಯಾತ ಖಳನಾಯಕ ಶೋಭರಾಜ ಸೇರಿದಂತೆ ಅನೇಕ ತಾರಾ ಬಳಗ ಒಳಗೊಂಡ ವಿಜಯ ಪತಾಕೆ ಚಲನಚಿತ್ರದ ಮೊದಲ ಟೀಸರ್ ಹೊಸ ವರ್ಷದ ಮೊದಲ ದಿನ ಅನಾವರಣಗೊಳ್ಳಲಿದೆ.

ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಆರ್. ಶೈನ್.ಉತ್ತರ ಕರ್ನಾಟಕದ ಹೆಸರಾಂತ ಜಾನಪದ ಕಲಾವಿದರಾದ ಮಾಳು ನಿಪನಾಳ ಅವರ ಸಾಮಾಜಿಕ ಜಾಲತಾಣವಾದ ಯೂಟ್ಯೂಬ್ ದಲ್ಲಿ ಬುಧುವಾರ ಮುಂಜಾನೆ 9 : 30 ಗಂಟೆಗೆ ವಿಜಯ ಪತಾಕೆಯ ಚಲನಚಿತ್ರದ ಮೊದಲ ಟೀಸರ್ ಬಿಡುಗಡೆ ಆಗಲಿದೆ. ಎಲ್ಲರೂ ಕೂಡಾ ವಿಕ್ಷೀಸಬಹುದಾಗಿದೆ.

ಉತ್ತರ ಕರ್ನಾಟಕ ಬಹುತೇಕ ಕಲಾವಿದರು ಚಲನಚಿತ್ರದಲ್ಲಿ ನಟಿಸಿದ್ದಾರೆ. ಉತ್ತರ ಕರ್ನಾಟಕದ ಕಲಾವಿದರನ್ನು ಆ ಕಡೆ ಭಾಗದ ಜನರು ಬೆಳೆಸಲ್ಲ ಹಾಗಾಗೀ ಕನ್ನಡ ಚಲನಚಿತ್ರ ರಂಗದಲ್ಲಿ ಉತ್ತರ ಕರ್ನಾಟಕದ ಕಲಾವಿದರಿಗೆ ಮಲತಾಯಿ ಧೋರಣೆ ಮಾಡುತ್ತಿದ್ದು, ಹೀಗಾಗಿ ಉತ್ತರ ಕರ್ನಾಟಕದ ಜನತೆಗಯೂ ಬೆನ್ನುತಟ್ಟಬೇಕಾಗಿದೆ ಎಂದರು.

ಬಹುತೇಕ ಉತ್ತರಕರ್ನಾಟಕದ ಭಾಗದಲ್ಲಿ ಗಜೇಂದ್ರಗಡ ಗುಡ್ಡದ ರಮಣೀಯ ಸ್ಥಳಗಳಲ್ಲಿ, ಮಲೆನಾಡ ಭಾಗ, ದಾಂಡೇಲಿ ಸೇರಿದಂತೆ ಅತ್ಯದ್ಭುತ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದ್ದು. ಪ್ರೇಕ್ಷಕರ ಮನಸೂರೆ ಗೊಳಿಸಲು ಚಿತ್ರತಯಾರಾಗಿದೆ. ಅದರ ಮೊದಲ ಪ್ರಕ್ರಿಯೆಯಾಗಿ ಟೀಸರ್ ಬಿಡುಗಡೆಯಾಗಲಿದೆ ಎಂದರು.

ಉಪನ್ಯಾಸಕ ಪ್ರಭು ಗಂಜಿಹಾಳ ಮಾತನಾಡಿ ನಮ್ಮ ಭಾಗದ ಹುಡುಗ ಕಷ್ಟ ಪಟ್ಟು “ವಿಜಯಪತಾಕೆ” ಚಿತ್ರವನ್ನು ತಯಾರುಮಾಡಿದ್ದಾನೆ.ಒಟ್ಟಾರೆ ಈ ಚಲನಚಿತ್ರ ಕರ್ನಾಟಕದ್ಯಂತ ಜನರ ಮನಸ್ಸನ್ನು ಗೆಲ್ಲುವ ನಿರೀಕ್ಷೆಯನ್ನು ಚಿತ್ರತಂಡ ಹೊಂದಿದೆ. ಪ್ರೇಕ್ಷಕರ ಪ್ರೋತ್ಸಾಹ ಅತ್ಯಗತ್ಯ ಯುಕೆ ಮಂದಿ ಮನಸ್ ಮಾಡಿ ಈ ಪಿಚ್ಚರ್ ಗೆಲ್ಲಸ್ರಿ ಎಂದು ಉತ್ತರ ಕರ್ನಾಟಕ ಭಾಷೆಯಲ್ಲಿಯೇ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ನಾಯಕಿ‌ ನಟಿ ಕಾಂಚನಾ ವಿಜಯಪುರ, ಹರೀಶ ಪತ್ತಾರ,ಸಂಗನಗೌಡ ಕುರಡಗಿ, ಜಯದೇವ ಗಂಜಿಹಾಳ ಸೇರಿದಂತೆ ಅನೇಕರು ಇದ್ದರು.

ವರದಿ : ಚನ್ನು. ಎಸ್.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Leave a Reply

Your email address will not be published. Required fields are marked *

Back to top button
error: Content is protected !!