ಶ್ರಾವಣ ಸೋಮವಾರ ಕಾಲಕಾಲೇಶ್ವರ ದೇವಾಲಯಕ್ಕೆ ಭಕ್ತರ ಬೇಟಿ.
ಅಂದಪ್ಪ ಸಂಕನೂರ, ಅವಿನಾಶ ಮತ್ತಿಕಟ್ಟಿ ಗೆಳೆಯರ ಬಳಗದಿಂದ ಪ್ರಸಾದ ಸೇವೆ.
ಗಜೇಂದ್ರಗಡ:ಸತ್ಯಮಿಥ್ಯ (ಆಗಸ್ಟ್ -19)
ಹಿಂದೂಗಳ ಪವಿತ್ರ ಮಾಸ ಎಂದು ಕರೆಯಲ್ಪಡುವ ಶ್ರಾವಣ ಮಾಸದಲ್ಲಿನ ಮೂರನೇ ಸೋಮವಾರ ದಕ್ಷಿಣ ಕಾಶಿ ಕಾಲಕಾಲೇಶ್ವರನಿಗೆ ಅಪಾರ ಭಕ್ತರ ದಂಡು ಹರಿದು ಬಂದಿದ್ದು, ಭಕ್ತರಿಂದ ಪ್ರಸಾದ ಸೇವೆ ನಡೆಯಿತು.
ಇನ್ನೂ ಇದೇ ಸಂದರ್ಭದಲ್ಲಿ ಭಕ್ತರಾದ ಅವಿನಾಶ ಮತ್ತಿಕಟ್ಟಿ ಮಾತನಾಡಿ ನಾವೂ ಪ್ರತಿವರ್ಷವೂ ಕೂಡಾ ಶ್ರಾವಣದಲ್ಲಿ ಸೋಮವಾರದಂದು ಗಜೇಂದ್ರಗಡ ನಗರದಿಂದ ಪಾದಯಾತ್ರೆಯ ಮೂಲಕ ಆಗಮಿಸಿ ನಾನು ನಮ್ಮ ಗೆಳೆಯ ಅಂದಪ್ಪ ಸಂಕನೂರ ಗೆಳೆಯರ ಬಳಗದಿಂದ ಕಾಲಕಾಲೇಶ್ವರ ದೇವಾಲಯದ ದರ್ಶನಕ್ಕೆ ಬಂದ ಭಕ್ತರಿಗೆ ಪ್ರಸಾದ ಸೇವೆಯನ್ನು ನೆರವೇರಿಸಲಾಗುತ್ತದೆ ಎಂದರು.
ಬಳಿಕ ಕರ್ನಾಟಕ ಜನಪರ ಸೇವಾ ಸಮಿತಿಯ ರಾಜ್ಯ ಅಧ್ಯಕ್ಷ ಗಣೇಶ ಗುಗಲೋತ್ತರ ಮಾತನಾಡಿ ಹಿಂದೂಗಳ ಪವಿತ್ರ ಮಾಸದಲ್ಲಿ ದೇವರುಗಳ ಆರಾಧನೆ ಮಾಡುವುದು ಸಹಜ. ಅದರಂತೆ ಈ ಭಾಗದ ಆರಾಧ್ಯದೈವ ಕಾಲಕಾಲೇಶ್ವರ ಸನ್ನಿದಿಗೆ ಶ್ರಾವಣ ಸೋಮವಾರದಂದು ಭಕ್ತರು ಪ್ರಾಥಃ ಕಾಲದಲ್ಲಿಯೇ ಉಪವಾಸ ಮಾಡುವ ಮೂಲಕ, ಪಾದಯಾತ್ರೆಯ ಮೂಲಕ ಬೆಟ್ಟವನ್ನು ಏರಿ ಭಕ್ತಿಯನ್ನು ಮೆರೆಯುವುದನ್ನು ಕಾಣ ಬಹುದು. ಇದನ್ನು ಅರಿತು ಅಂದಪ್ಪ ಸಂಕನೂರ ಹಾಗೂ ಅವಿನಾಶ ಮತ್ತಿಕಟ್ಟಿ ಗೆಳೆಯರ ಬಳಗದಿಂದ ಬಂದ ಭಕ್ತರಿಗೆ ಪ್ರಸಾದ ಸೇವೆಯನ್ನು ಮಾಡಿ ಕಾಲಕಾಲೇಶ್ವರನಿಗೆ ನಮ್ಮ ಅಲ್ಪ ಸೇವೆಯನ್ನು ಮಾಡೋಣ ಎಂದಾಗ ಗೆಳೆಯರ ಬಳಗ ಸಂತೋಷದಿಂದ ಇದಕ್ಕೆ ಕೈ ಜೋಡಿಸಿದ್ದಾರೆ. ಕಾಲಕಾಲೇಶ್ವರ ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದರು.
ಇದೇ ಸಂದರ್ಭದಲ್ಲಿ ಬಿ.ಕೆ.ಮಾದಿ, ಅನಿಲ ಮ್ಯಾಗೇರಿ,ಪ್ರವೀಣ ಬೆಟಗೇರಿ,ಕಳಕಪ್ಪ ತಳವಾರ, ಸಂತೋಷ ಸಂಕನೂರ ಸೇರಿದಂತೆ ಅನೇಕರು ಇದ್ದರು.
ವರದಿ : ಸುರೇಶ ಬಂಡಾರಿ