ಕ್ರಾಂತಿಸೂರ್ಯ ಜೈ ಭೀಮ್ ಸೇನೆ ಗಜೇಂದ್ರಗಡ ತಾಲೂಕು ಮತ್ತು ನಗರ ಘಟಕ ಪದಾಧಿಕಾರಿಗಳ ಆಯ್ಕೆ.
ಗಜೇಂದ್ರಗಡ : ಸತ್ಯಮಿಥ್ಯ ( ಅ -02).
ಕ್ರಾಂತಿಸೂರ್ಯ ಜೈಭೀಮ್ ಸೇನೆ(ರಿ) ಗಜೇಂದ್ರಗಡ ತಾಲೂಕು ಹಾಗೂ ಗಜೇಂದ್ರಗಡ ನಗರ ಘಟಕದ ಪದಾಧಿಕಾರಿಗಳ ನೇಮಕ ಬುಧವಾರ ನಡೆಸಲಾಯಿತು.
ಗದಗ ಜಿಲ್ಲಾ ಕ್ರಾಂತಿಸೂರ್ಯ ಜೈಭೀಮ್ ಸೇನೆ ಉಪಾಧ್ಯಕ್ಷರಾಗಿ ರವಿ ಗುಗಲೋತ್ತರ, ಜಿಲ್ಲಾ ಸಂಘಟನಾ ಸಂಚಾಲಕರನ್ನಾಗಿ ಲಕ್ಷ್ಮಣ ಬಂಕದ ನೇಮಕರಾದರೆ, ಗಜೇಂದ್ರಗಡ ತಾಲೂಕು ಗೌರವಾಧ್ಯಕ್ಷರನ್ನಾಗಿ ಫಕೀರಪ್ಪ ನಿಡಗುಂದಿ, ತಾಲೂಕ ಅಧ್ಯಕ್ಷರನ್ನಾಗಿ ಕನಕಪ್ಪ ಕಲ್ಲೊಡ್ಡರ, ಸಂಘಟನಾ ಕಾರ್ಯದರ್ಶಿಯನ್ನಾಗಿ ಗೋವಿಂದ ಮನ್ನೇರಾಳ ಹಾಗೂ ಗಜೇಂದ್ರಗಡ ನಗರ ಘಟಕದ ಅಧ್ಯಕ್ಷರನ್ನಾಗಿ ಮುತ್ತು ರಾಠೋಡ, ಉಪಾಧ್ಯಕ್ಷರನ್ನಾಗಿ ರಮೇಶ ತಳವಾರ, ಸಂಚಾಲಕರನ್ನಾಗಿ ಲೋಕೇಶ ನಿಡಗುಂದಿ ಅವರನ್ನು ರಾಜ್ಯಾಧ್ಯಕ್ಷ ಮಂಜುನಾಥ ರಾಠೋಡ, ರಾಜ್ಯ ಸಂಚಾಲಕ ಪ್ರಕಾಶ ರಾಠೋಡ ನೇಮಕ ಮಾಡಿದರು.
ಇದೇ ಸಂದರ್ಭದಲ್ಲಿ ಪ್ರಕಾಶ ಮಾಳೋತ್ತರ, ಪ್ರಭು ನಿಡಗುಂದಿ, ಮಂಜು ಪೂಜಾರ, ರವಿ ನಿಡಗುಂದಿ, ರವಿ ಪೂಜಾರ, ಕುಮಾರ ರಾಠೋಡ, ಭೀಮು ಬಂಕದ, ಅಮಿತ ಭಜೇಂತ್ರಿ, ಶಂಕರ ಲಮಾಣಿ, ಗಿಡ್ಡಪ್ಪ ಲಕ್ಕಿಗಿಡದ, ರಾಮು ಕಲ್ಲೋಡ್ಡರ, ಮಂಜು ಉಳ್ಳಾಗಡ್ಡಿ, ಮಂಜುನಾಥ ಲಕ್ಕಲಕಟ್ಟಿ, ಆನಂದ ಬಂಡಿ, ಮಂಜುನಾಥ ಮ್ಯಾಗೇರಿ, ಪ್ರವೀಣ ರಾಠೋಡ, ಚೌಡು ಎಲಪು, ಬಸವರಾಜ ಛತ್ರದ, ಕಳಕೇಶ ರಾಠೋಡ, ಬಸವರಾಜ ರಾಠೋಡ, ರಾಘು ಗೋಂಧಳೆ, ಮಂಜುನಾಥ ಚಿಂಚಲಿ, ಶಿವು ಕರಮುಡಿ, ಮಾರುತಿ ಪವಾರ, ರವಿ ಪೂಜಾರ, ಶಿವು ಬನ್ನಿಗೊಳ, ಆನಂದ ಬನ್ನಿಗೋಳ, ಮನೋಹರ ಬಂಕದ, ಕಿರಣ ಹುಗ್ಗಾ, ಭೀಮಸಿ ಹುಬ್ಬಳ್ಳಿ ಸೇರಿದಂತೆ ಇತರರು ಇದ್ದರು
ವರದಿ : ಸುರೇಶ ಬಂಡಾರಿ.