ದುಶ್ಚಟಗಳಿಗೆ ಬಲಿಯಾಗದಿರಿ ಇಂದರಿಂದ ಕುಟುಂಬಗಳು ನೆಮ್ಮದಿ ಕಳೆದುಕೊಳ್ಳುತ್ತಿವೆ.
ದೇವ ಒಬ್ಬ ನಾಮ ಹಲವು ದೇವರು ನಮ್ಮ ಆತ್ಮದಲ್ಲಿ ನೆಲೆಸಿದ್ದಾನೆ: ಬಂಡಿಗಣಿ ಶ್ರೀಗಳು.
ದುಶ್ಚಟಗಳಿಗೆ ಬಲಿಯಾಗದಿರಿ ಇಂದರಿಂದ ಕುಟುಂಬಗಳು ನೆಮ್ಮದಿ ಕಳೆದುಕೊಳ್ಳುತ್ತಿವೆ.
ದೇವ ಒಬ್ಬ ನಾಮ ಹಲವು ದೇವರು ನಮ್ಮ ಆತ್ಮದಲ್ಲಿ ನೆಲೆಸಿದ್ದಾನೆ: ಬಂಡಿಗಣಿ ಶ್ರೀಗಳು.
ಮುಗಳಖೋಡ:ಸತ್ಯಮಿಥ್ಯ ( ಜೂಲೈ -06)
ಸಾಕಷ್ಟು ಜನರು ಮದ್ಯಪಾನ ಮತ್ತು ಗುಟ್ಕಾದಂತ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಇದರಿಂದ ಹಲವಾರು ಕುಟುಂಬಗಳು ನೆಮ್ಮದಿ ಕಳೆದುಕೊಳ್ಳುತ್ತಿವೆ. ಪಟ್ಟಣದಲ್ಲಿಯ ಮದ್ಯಪಾನ ಗುಟ್ಕಾ ಅಂಗಡಿಗಳನ್ನು ಬಂದ್ ಮಾಡಿ, ಆರೋಗ್ಯಯುತ ಸಮಾಜವನ್ನು ನಿರ್ಮಾಣ ಮಾಡಬೇಕು, ದೇವ ಒಬ್ಬ ನಾಮ ಹಲವು ದೇವರು ನಮ್ಮ ಆತ್ಮದಲ್ಲಿ ನೆಲೆಸಿದ್ದಾನೆ ಎಂದು ಬಂಡಿಗಣಿಯ ಬಸವಗೋಪಾಲ ಶ್ರೀಗಳು ಹೇಳಿದರು.
ಅವರು ಪಟ್ಟಣದ ನೀರಲಕೋಡಿ ನಾಸಿ ತೋಟದ ಶ್ರೀ ಹನುಮಾನ ದೇವಸ್ಥಾನದಲ್ಲಿ ನಾಲ್ಕನೆಯ ಪಾರಮಾರ್ಥಿಕ ಸಪ್ತಾಹ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಾ, ಮಾನವ ಜನ್ಮ ದೊಡ್ಡದು ಒಳ್ಳೆಯ ಮಾನವನಾಗಬೇಕಾದರೆ ಅನುಭವ ಮುಖ್ಯ, ದುರ್ಜನರ ಸಂಗದಿಂದ ಹಾಳು ಮಾಡಿಕೊಳ್ಳದೆ ದೈವ ನಾಮಸ್ಮರಣೆ ದ್ಯಾನ,ಧಾನ ಮಾಡಿದರೆ ಆತ್ಮ ಮುಕ್ತಿ ಎಡೆಗೆ ಸಾಗುತ್ತದೆ. ಸುಜ್ಞಾನಿಯಾಗಲು ಅಜ್ಞಾನದಿಂದ ಮನಸ್ಸಿನಿಂದ ಹೊರಬಂದು ಒಳ್ಳೆಯ ಕೆಲಸ ಮಾಡಿ ಜೀವನದಲ್ಲಿ ಸುಖ ನೆಮ್ಮದಿ ಪಡೆದುಕೊಳ್ಳಲು ಸಾದ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ನೀರಲಕೋಡಿ ನಾಶಿ ತೋಟದ ಭಕ್ತ ಮಂಡಳಿಯವರಿಂದ ಬಂಡಿಗಣಿಯ ಬಸವಗೋಪಾಲ ಶ್ರೀಗಳಿಗೆ ‘ನೇಗಿಲಯೋಗಿ ರತ್ನ’ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಿದರು.
ಬಳಿಕ ಚಿಕ್ಕೋಡಿ ಲೋಕಸಭಾ ಸದಸ್ಯೆ ಪ್ರಿಯಾಂಕ ಜಾರಕಿಹೊಳಿ, ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಂಡಿಗಣಿ ಶ್ರೀಗಳ ಆಶೀರ್ವಾದ ಪಡೆದುಕೊಂಡರು.
ಸರ್ವ ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಪಟಣದ ಹಾಗೂ ನೀರಲಕೋಡಿ ನಾಶಿ ತೋಟ, ಹಳ್ಳೂರ ಹಾಗೂ ಸುತ್ತಲಿನ ಗ್ರಾಮದ ಗುರು ಹಿರಿಯರು, ತಾಯಂದಿರು ಬಂಡಗಣಿ ಮಠದ ಭಕ್ತರು ಭಾಗಿಯಾಗಿದ್ದರು.
ವರದಿ : ಸಂತೋಷ ಮುಗಳಿ.