
ಆಡಿನ ಮೇಲೆ ಚಿರತೆ ದಾಳಿ ಆತಂಕದಲ್ಲಿ ರೈತರು.

ಗಜೇಂದ್ರಗಡ:ಸತ್ಯಮಿಥ್ಯ (ಜು-15)
ಗಜೇಂದ್ರಗಡ ಸಮೀಪದ ಜೀವಲೆಪ್ಪನ ಕೊಳ್ಳದ ವ್ಯಾಪ್ತಿಯಲ್ಲಿ ಆಗಾಗ ಪ್ರತೇಕ್ಷವಾಗುವ ಚಿರತೆಗೆ ಅಲ್ಲಿನ ಹೊಲಗಳಲ್ಲಿ ವಾಸವಾಗಿರುವ ರೈತರು ಭಯಭೀತರಾಗಿದ್ದಾರೆ.
ಸೋಮವಾರ ಸಾಯಂಕಾಲ 6:00 ಗೆ ಚಿರತೆ ಒಂದು ಆಡಿನ ಮೇಲೆ ದಾಳಿ ಮಾಡಿ ತಿಂದು ಹಾಕಿದೆ ಮಂಜಪ್ಪ ಜೀವಲೇಪ್ಪ ಮಾಳೋತ್ತರ ಎನ್ನುವವರು ಹೇಳುತ್ತಾರೆ.
ಕೆಲವು ದಿನಗಳ ಹಿಂದೆ ಒಂದು ಚಿರತೆಯನ್ನು ಅರಣ್ಯ ಇಲಾಖೆಯವರು ಒಂದು ಚಿರತೆಯನ್ನು ಹಿಡಿದಿದ್ದಾರೆ. ಆದರೂ ಕೂಡಾ ಮತ್ತೊಂದು ಚಿರತೆ ಇರುವುದು ಆಡಿನ ಮೇಲಿನ ದಾಳಿಯನ್ನು ನೋಡಿದರೆ ತಿಳಿಯುತ್ತದೆ ಎನ್ನುತ್ತಾರೆ.
ಹೊಲದಲ್ಲಿ ನಡೆದ ಮೇಲೆ ದಾಳಿಯಾಗಿದೆ ಆತಂಕದಲ್ಲಿ ರೈತರು ಇಲ್ಲಿರೋದು ಬಹಳ ಕಷ್ಟಕರವಾಗಿದೆ ಚಿರತೆ ಪ್ರತ್ಯಕ್ಷಗೊಂಡು ಸಮೀಪದ ಹೊಲದಲ್ಲಿ ರೈತರು ಮನೆ ಮಾಡಿಕೊಂಡು ವಾಸವಾಗಿರುತ್ತಾರೆ ಎಷ್ಟು ಮನವಿ ಮಾಡಿದ್ದರು ಅರಣ್ಯ ಇಲಾಖೆ ಇದಕ್ಕೆ ಸ್ಪಂದಿಸುತ್ತಿಲ್ಲ ಬರ್ತಾರೆ ಬೋನಿಟ್ಟು ಹೋಗ್ತಾರೆ ಆಡು ಹಾಕ್ರಿ ನಾಯಿ ಹಾಕ್ರಿ ಎನ್ನುತ್ತಾರೆ ವಿನಹ. ಅದನ್ನು ಹಿಡಿಯಲು ಮುಂದಾಗುತ್ತಿಲ್ಲ ಇಲ್ಲಿನ ರೈತರಿಗೆ ಬಹಳ ತೊಂದರೆಯಾಗುತ್ತಿದೆ ಎಂದು ಇಲ್ಲಿನ ನಿವಾಸಿಗಳ ನರಸಪ್ಪ ಮಾಳೋತ್ತರ ಅಳಲಾಗಿದೆ.
“ಈಗಾಗಲೇ ಈ ಭಾಗದಲ್ಲಿ 4 ಚಿರತೆಗಳನ್ನು ಹಿಡಿಯಲಾಗಿದೆ. ಜೀವಲೆಪ್ಪ ಕೊಳ್ಳದ ಭಾಗದಲ್ಲಿ ಆಡಿನ ಮೇಲೆ ಚಿರತೆ ದಾಳಿ ಮಾಡಿದೆ ಎಂದು ಅಲ್ಲಿನ ರೈತರು ಮಾಹಿತಿ ನೀಡಿದ್ದಾರೆ. ಪಶುವೈದ್ಯರನ್ನು ಕರೆದುಕೊಂಡು ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳುತ್ತೇವೆ”
– ಅಮೀನಸಾಬ್ ಬಳೂಟಗಿ . ಬಿಟ್ ಫಾರೆಸ್ಟರ್.
ವರದಿ : ಸುರೇಶ ಬಂಡಾರಿ.