ಸ್ಥಳೀಯ ಸುದ್ದಿಗಳು

ಹೂಗಾರರ ಸಮುದಾಯ ಶೈಕ್ಷಣಿಕವಾಗಿ ಬೆಳೆಯಲು ಸರ್ಕಾರದ ಮೀಸಲಾತಿ ಅಗತ್ಯವಿದೆ :ಶಶಿಧರ ಹೂಗಾರ.

Share News

ಹೂಗಾರರ ಸಮುದಾಯ ಶೈಕ್ಷಣಿಕವಾಗಿ ಬೆಳೆಯಲು ಸರ್ಕಾರದ ಮೀಸಲಾತಿ ಅಗತ್ಯವಿದೆ :ಶಶಿಧರ ಹೂಗಾರ.

ಗಜೇಂದ್ರಗಡ:ಸತ್ಯಮಿಥ್ಯ (ಸೆ-19)

ಹೂಗಾರ ಸಮುದಾಯ ಚಿಕ್ಕ ಸಮುದಾಯವಾಗಿದ್ದು. ಈ ಸಮಾಜ ಶೈಕ್ಷಣಿಕವಾಗಿ ಬೆಳೆಯಲು ಸರ್ಕಾರದ ಮೀಸಲಾತಿ ಅಗತ್ಯವಿದೆ.ಹನ್ನೆರಡನೇ ಶತಮಾನದ ಬಸವ ಪರಂಪರೆಯ ಭಾಗವಾಗಿರುವ ಶರಣ ಹೂಗಾರ ಮಾದಯ್ಯನವರು ತಮ್ಮ ವೃತ್ತಿಯ ಮೂಲಕ ಶರಣ ಸಂಸ್ಕೃತಿಗೆ ಕೊಡುಗೆ ನೀಡಿದವರು. ಇವರ ಜೀವನ ನಮ್ಮೆಲ್ಲರಿಗೂ ಆದರ್ಶ ಎಂದು ಹೂಗಾರ ಸಮಾಜದ ಅಧ್ಯಕ್ಷ ಶಶಿಧರ ಹೂಗಾರ ಹೇಳಿದರು.

ನಗರದ ಕಾಲಕಾಲೇಶ್ವರ ವೃತ್ತದಲ್ಲಿ ಹೂಗಾರ ಸಮಾಜದಿಂದ ಹಮ್ಮಿಕೊಂಡಿದ್ದ ಹೂಗಾರ ಮಾದಯ್ಯ ಜಯಂತಿಯಲ್ಲಿ ಭಾಗಿಯಾಗಿ ಮಾತನಾಡಿದರು.

ಭಾರತ ಸತ್ಯ ಪರಂಪರೆ ಹೊಂದಿದ ನಾಡಾಗಿದೆ. ಇಲ್ಲಿ ಅನೇಕ ಮಹಾ ಶರಣರಲ್ಲಿ ಹೂಗಾರ ಮಾದಯ್ಯನವರು ಕೂಡಾ ಒಬ್ಬರು. ೧೨ ನೇ ಶತಮಾನದಲ್ಲಿ ಕಾಯಕ ಪ್ರೀತಿಯೊಂದಿಗೆ ಜೀವನ ಸಾಗಿಸುವದನ್ನು ನಡೆದು ತೋರಿಸಿದ್ದಾರೆ . ಆದರೆ ಪ್ರಸ್ತುತ ದಿನಗಳಲ್ಲಿ ಹೂ, ಪತ್ರಿಗಳು ಮಾರುವುದು ಅಲ್ಲದೆ ಬೇರೆ ಬೇರೆ ಕಲೆಗಳನ್ನು ಕರಗತ ಮಾಡಿಕೊಂಡಿದ್ದಾರೆ ಹೂಗಾರ ಸಮಾಜದವರು.

ಸ್ಥಳೀಯ ಪುರಸಭೆಯಿಂದ ಹೂ ಮಾರಲು ಅನೂಕೂಲ ಮಾಡಿಕೊಳ್ಳಬೇಕಿದೆ. ಬಾಸಿಂಗ್ ತಯಾರಿಸುವುದು ,ಹೂ ಮಾರುವುದು, ಪತ್ರಿಗಳು ನೀಡುವುದು ಹೂಗಾರ ಸಮಾಜ. ಆದರೆ ಇವುಗಳೆಲ್ಲವನ್ನು ಬೇರೆ ಬೇರೆ ಸಮಾಜದವರು ಕೂಡಾ ಕಾಯಕ ಮಾಡುತ್ತಿದ್ದಾರೆ. ಅದರಿಂದ ನೈಜ್ಯ ಹೂಗಾರ ವೃತ್ತಿಯು ಇಂದು ಅಳವಿನಂಚಿನಲ್ಲಿದೆ. ಅದನ್ನು ಉಳಿಸಲು ಸ್ಥಳೀಯ ಆಡಳಿತ, ಪುರಸಭೆ, ಸರ್ಕಾರವು ಸಹಕರಿಸಬೇಕಿದೆ. ಮಕ್ಕಳ ಶಿಕ್ಷಣಕ್ಕೆ ಸಾಧ್ಯವಾದರೆ ಯಾವೂದಾದರೂ ಮೀಸಲಾತಿ ನೀಡಿದರೆ ಶೈಕ್ಷಣಿಕವಾಗಿ ನಾವೂ ಕೂಡಾ ಸಮಾಜದಲ್ಲಿ ಸಾಧನೆ ಮಾಡುತ್ತೇವೆ ಎಂದರು.

ಬಳಿಕ ರವಿ ಗಡೇದವರ ಮಾತನಾಡಿ ಹೂಗಾರ ಸಮಾಜ ದೇಶದಲ್ಲಿಯೇ ಅತ್ಯಂತ ಪಾವಿತ್ರ್ಯ ಪಡೆದುಕೊಂಡ ಸಮಾಜವಾಗಿದೆ. ಹೂಗಾರ ಸಮಾಜ ಅತ್ಯಂತ ಚಿಕ್ಕ ಸಮಾಜವಾದರೂ ಹೂವಿನಷ್ಟೇ ಮೃದುವಾದ ಸಮಾನವಾಗಿದೆ. ಬಸವಣ್ಣನವರ ಕಾಲದಲ್ಲಿ ಜನಸಿದಂತ ಮಹಾನ ಚೇತನ್ ರ ತತ್ವಾದರ್ಶಗಳನ್ನು ನಾವಲ್ಲ ಪಾಲನೆ ಮಾಡೋಣ ಎಂದರು.

ಬಳಿಕ ಬಸವರಾಜ ಶೀಲವಂತರ, ಬಸವರಾಜ ಕೊಟಗಿ, ಶರಣು ಪೂಜಾರ, ಮಹಾದೇವಪ್ಪ ಮಡಿವಾಳರ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯ ಮುರ್ತುಜಾ ಡಾಲಾಯತ,ಶ್ರೀಧರ ಬಿದರಳ್ಳಿ, ಲೋಕಪ್ಪ ರಾಠೋಡ, ಕಳಕಪ್ಪ ಹೂಗಾರ, ಬಸವರಾಜ ಹೂಗಾರ, ಕಳಕಯ್ಯ ಸಾಲಿಮಠ, ಮಲ್ಲಯ್ಯ ಪೂಜಾರ, ಚಿದಾನಂದ ಹಡಪದ, ವಿರೇಶ ರಾಠೋಡ, ಅಲ್ಲಾಭಕ್ಷಿ ಮುಚ್ಚಾಲಿ, ಮಂಜು ಹೂಗಾರ, ಬಾಲಾಜಿರಾವ ಬೊಸ್ಲೇ ,ಸಂಗಪ್ಪ ಕುಂಬಾರ,ಅಂದಪ್ಪ ರೋಣದ, ತಿರಕಪ್ಪ ಹೂಗಾರ, ಚಂದ್ರು ಹೂಗಾರ, ಜಗದೀಶ ಕವಡಿಮಟ್ಟಿ, ಭೀಮವ್ವ ಹೂಗಾರ, ಗಿರಿಜವ್ವ ಹೂಗಾರ, ಸುಮಾ ಹೂಗಾರ ಸೇರಿದಂತೆ ಅನೇಕರು ಇದ್ದರು.

ವರದಿ:ಚನ್ನು. ಎಸ್.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!