ಗದಗ : ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ- ವಿಡಿಎಸ್ ಕ್ಲಾಸಿಕ್ ಶಾಲೆಯಲ್ಲಿ ರಕ್ಷಾ ಬಂಧನ ಆಚರಣೆ.

ಗದಗ : ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ- ವಿಡಿಎಸ್ ಕ್ಲಾಸಿಕ್ ಶಾಲೆಯಲ್ಲಿ ರಕ್ಷಾ ಬಂಧನ ಆಚರಣೆ.
ಗದಗ:ಸತ್ಯಮಿಥ್ಯ (ಆಗಸ್ಟ್ -21)
ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಕ್ಲಾಸಿಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಾಬಂಧನ ಹಬ್ಬದ ಅಂಗವಾಗಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀ ವಿಶ್ವವಿದ್ಯಾಲಯದ ಶ್ರೀಮತಿ ಬಿ. ಕೆ. ಮಮತಾ ಹಾಗೂ ಶ್ರೀಮತಿ ಬಿ. ಕೆ. ಪ್ರೇಮಲತಾ ಅವರು ಶಾಲೆಯ ಎಲ್ಲಾ ಶಿಕ್ಷಕ/ಶಿಕ್ಷಕಿಯರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ರಾಖಿ ಕಟ್ಟಿ, ರಕ್ಷಾ ಬಂಧನ ಹಬ್ಬದ ಶುಭಾಶಯಗಳನ್ನು ತಿಳಿಸಿದರು.
ಶ್ರೀಮತಿ ಬಿ. ಕೆ. ಮಮತಾ ಮಾತನಾಡಿ ಶ್ರಾವಣ ಮಾಸ ಅಥವಾ ಪುರುಷೋತ್ತಮ ಮಾಸದಲ್ಲಿ ಬರುವ ರಕ್ಷಾ ಬಂಧನ ಹಬ್ಬವನ್ನು ಪುಣ್ಯ ಪ್ರದಾಯಕ, ವಿಷ ನಿವಾರಕ ಪರ್ವ ಎನ್ನುವರು. ಕಾಮ, ಕ್ರೋಧ, ಲೋಭ, ಮೋಹ ಹಾಗೂ ಅಹಂಕಾರಗಳನ್ನು ರಕ್ಷಿಸಲು ಕಟ್ಟುವ ಪವಿತ್ರ ಹಾಗೂ ಸೂತ್ರವೇ ಈ ರಾಖಿ. ಈ ರಕ್ಷೆಯನ್ನು ಒಡಹುಟ್ಟಿದ ಸಹೋದರಿಯು ತನ್ನ ಸಹೋದರನಿಗೆ ಕಟ್ಟಬೇಕೆನ್ನುವ ಸಂಪ್ರದಾಯವಿದೆ. ಆದರೆ ವಾಸ್ತವವಾಗಿ ನಾವೆಲ್ಲ ಜ್ಯೋತಿರ್ಬಿಂದು ಆತ್ಮರು, ಒಬ್ಬ ಪರಮಾತ್ಮನ ಮಕ್ಕಳು, ನಾವೆಲ್ಲ ಸಹೋದರ ಸಹೋದರಿಯರು. ಅನ್ಯರನ್ನು ನೋಡುವಾಗ ನಮ್ಮ ದೃಷ್ಟಿ ಅನ್ಯರ ಹಣೆಯ ನಡುವೆ ಹೊಳೆಯುವ ಪವಿತ್ರ ಆತ್ಮನ ಕಡೆಗೆ ಹೋಗಬೇಕು. ಆಗ ಆತ್ಮೀಯತೆ, ಪ್ರೀತಿ, ಗೌರವವಾದ ಪವಿತ್ರ ಭಾವನೆಗಳು ಬರುತ್ತೇವೆ. ರಾಖಿಯಲ್ಲಿ ಪವಿತ್ರತೆಯ ಸಂದೇಶವಿದೆ. ಸಹೋದರ ಭಾವದ ವಿಶೇಷತೆ ಇದೆ. ಆತ್ಮ ಭಾಗದ ಪ್ರಕಾಶ ಇದೆ, ಪರಮಾತ್ಮನ ಸತ್ಯಜ್ಞಾನದ ಅರಿವಿದೆ. ನಾವು ಸಹೋದರಿಯ ಶುಭ ಹಾರೈಕೆ ಕೋರುವ ಎಂದು ತಿಳಿಸಿದರು.
ಶಾಲೆಯ ಹಿರಿಯ ಶಿಕ್ಷಕಿಯರಾದ ಶ್ರೀಮತಿ ರೇಣುಕಾ ವೆಂಕಟಾಪುರ ಮಾತನಾಡಿ ಭಾರತ ದೇಶವು ಸಂಪ್ರದಾಯಕ ಹಬ್ಬಗಳ ತೊಟ್ಟಿಲು, ನಾವೆಲ್ಲ ಹಬ್ಬಗಳನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಮುಂದಿನ ಪೀಳಿಗೆಗೆ ಸಂಸ್ಕೃತಿ, ಸಂಪ್ರದಾಯ ಹಾಗೂ ಪದ್ಧತಿಗಳನ್ನು ಉಳಿಸಿ ಬೆಳೆಸಬೇಕಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶಾಲೆಯ ಸಮಸ್ತ ಶಿಕ್ಷಕ/ಶಿಕ್ಷಕಿಯರು ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.
ವರದಿ : ಮುತ್ತು ಗೋಸಲ