ಗಜೇಂದ್ರಗಡ : ದಾನಮ್ಮದೇವಿಯ ಭಾವಚಿತ್ರ ಮೆರವಣಿಗೆ.
ಗಜೇಂದ್ರಗಡ:ಸತ್ಯಮಿಥ್ಯ (ಸ -03)
ಶ್ರೀ ಗುಡ್ಡಾಪುರ ದಾನಮ್ಮದೇವಿಯ ಪುರಾಣ ಮಹಾಮಂಗಲೋತ್ಸವದ ಅಂಗವಾಗಿ ಇಂದು ನಗರದಲ್ಲಿ ದಾನಮ್ಮದೇವಿಯ ಭಾವಚಿತ್ರ ಮೆರವಣಿಗೆ ಅದ್ದೂರಿಯಾಗಿ ನಡೆಯಿತು.
ಮೈಸೂರ ಮಠದಿಂದ ದಾನಮ್ಮದೇವಿಯ ಭಾವಚಿತ್ರಕ್ಕೆ ಪುಷ್ಪಮಾಲೆ ಹಾಕುವ ಮೂಲಕ ಸಕಲ ಮಂಗಳ ವಾದ್ಯಗಳೊಂದಿಗೆ ಆರಂಭವಾದ ಮೆರವಣಿಗೆಯು ಪಟ್ಟಣದ ಬಸವೇಶ್ವರ ಸರ್ಕಲ್, ಕಮ್ಮಾರ ಸಾಲ, ಕೊಳ್ಳಿಯವರ ಕ್ರಾಸ್, ರಂಗ ಮಂದಿರ. ಹಿರೇ ಬಜಾರ, ಅಗಸಿ ಬಾಗಿಲಿನಿಂದ ಶ್ರೀ ಮೈಸೂರ ಮಠಕ್ಕೆ (ಚೌಕಿ ಮಠ) ಆಗಮಿಸಿತು.
ಬಳಿಕ ಅಪ್ಪು ಮತ್ತಿಕಟ್ಟಿ ಹಾಗೂ ಶಿವು ಶಶಿಮಠ ಮಾತನಾಡಿ ಒಂದು ತಿಂಗಳ ಕಾಲ ಶ್ರೀ ಮಠದ ಮಹಾಸ್ವಾಮಿಗಳ ಅಪ್ಪಣೆಯಂತೆ ಗುಡ್ಡಾಪುರ ದಾನಮ್ಮದೇವಿ ಪುರಾಣವನ್ನು ಅಚ್ಚುಕಟ್ಟಾಗಿ ಪುರಾಣ ಪ್ರವಚನಕಾರ ರಾದ ಶಿವಾಚಾರ್ಯ ಸ್ವಾಮಿಗಳು ಹಿರೇಮಠ ನಡೆಸಿಕೊಟ್ಟರು ಸುಮಾಜದ ಹಿರಿಯರು ಯುವಕರು ಪುರಾಣ ಯಶಸ್ಸಿಗೆ ಕಾರಣವಾದರೂ ಮತ್ತು ಒತ್ತಡದ ಜೀವನದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಮಾನಸಿಕ ನೆಮ್ಮದಿ ನಿಡುತ್ತದೆ ಎಂದರು.
ಈ ಸಂದರ್ಭದಲ್ಲಿ ಅಪ್ಪು ಮತ್ತಿಕಟ್ಟಿ, ಶಿವಕುಮಾರ ಕೋರಧ್ಯಾನಮಠ ,ಬಸವರಾಜ ಪುರ್ತಗೇರಿ,ಮಾಹಾತೇಶ ಪವಾರ,ಟಿ.ಎಸ್.ರಾಜೂರ, ಪ್ರಭು ಚವಡಿ,ಎ.ಪಿ.ಗಾಣಗೇರ, ಬಸವರಾಜ ಬೇಲೇರಿ, ಶಿವಯ್ಯ ಚಕ್ಕಡಿಮಠ, ಸಂಗಪ್ಪ ಕುಂಬಾರ, ವೀರಯ್ಯ ಕಲ್ಲಮಂಗಿಮಠ, ಸೇರಿದಂತೆ ಅನೇಕ ಸಮಾಜ ಮುಖಂಡರು ಉಪಸ್ಥಿತರಿದ್ದರು.
ವರದಿ : ಸುರೇಶ ಬಂಡಾರಿ.