
ಗಜೇಂದ್ರಗಡ : ಬ್ರೈಟ್ ಬಿಗಿನಿಂಗ್ ಶಾಲೆಯಲ್ಲಿ ಲಾಸ್ಟ ಬೆಂಚ್ ಗೆ ಕೋಕ್.
‘ಯು’ ಆಕಾರದಲ್ಲಿನ ಕಲಿಕೆ ಮಕ್ಕಳ ಮನಸ್ಸಿನ ಮೇಲೆ ಗಾಡ ಪರಿಣಾಮ ಬೀರಿದೆ : ನಾಜೀಯಾ ಮುದಗಲ್.
ಗಜೇಂದ್ರಗಡ :ಸತ್ಯಮಿಥ್ಯ (ಜು-22)
ತಾಲೂಕಿನ ಸೈನಿಕ ನಗರ ಹತ್ತಿರ ಬ್ರೈಟ್ ಬಿಗಿನಿಂಗ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಲಾಸ್ಟ ಬೆಂಚಗೆ ಕೋಕ ನೀಡುವ ಮೂಲಕ ಅರ್ಧ ಚಂದ್ರಾಕೃತಿಯಲ್ಲಿ ಬೆಂಚ್ ಗಳನ್ನು ಅಳವಡಿಸಿ ಮಕ್ಕಳಿಗೆ ಪಾಠ ಮಾಡುವ ವಿನೂತನ ಪ್ರಯೋಗವನ್ನು ಶಾಲೆ ಆರಂಭಿಸಿದೆ.
ಬಳಿಕ ಶಾಲೆಯ ಮುಖ್ಯ ಶಿಕ್ಷಕಿ ನಾಜೀಯಾ ಮುದಗಲ್ ಮಾತನಾಡಿ ‘ಯು’ ಆಕಾರದ ಬೆಂಚ್ ಅಳವಡಿಕೆಯ ವಿನೂತನ ಪ್ರಯೋಗವಾಗಿದ್ದು, ಇದರಿಂದ ಮಕ್ಕಳಿಗೆ ಎಲ್ಲಿಲ್ಲದ ಸಂತಸ ತಂದಿದೆ.ಮೊದಲ ಬೆಂಚ, ಲಾಸ್ಟ ಬೆಂಚ್ ಎಂಬ ಮುಗ್ದ ಮನಸ್ಸಿನಲ್ಲಿನ ಭ್ರಮೆಯನ್ನು ನಿವಾರಿಸಿ ಸರ್ವರಿಗೂ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದು ಇದರ ಹಿಂದಿನ ಉದ್ದೇಶವಾಗಿದೆ.
ಒಟ್ಟು ಶಾಲೆಯಲ್ಲಿ ೩ ತರಗತಿಗಳು ಇದ್ದು, ಪ್ರತಿ ತರಗತಿಯಲ್ಲಿ ೩೦ ವಿಧ್ಯಾರ್ಥಿಗಳು ಯು ಆಕಾರದ ( ಅರ್ಧ ಚಂದ್ರಕಾರದ) ಆಸನದಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಸಧ್ಯ ಯು ಆಕಾರದಲ್ಲಿ ಅಳವಡಿಸಿರುವ ಬೆಂಚ್ ಗಳ ಮೂಲಕ ಶಿಕ್ಷಕರು ಪಾಠ ಬೋಧನೆ ಮಾಡಲಾಗುತ್ತಿದೆ.
“ಮಕ್ಕಳಲ್ಲಿ ಉತ್ಸಾಹವನ್ನು, ಲಾಸ್ಟ ಬೆಂಚ್, ಫಸ್ಟ್ ಬೆಂಚ್ ಎನ್ನುವ ಭಾವನೆ ತೊಲಗುವಂತೆ ಮಾಡಿ ಎಲ್ಲಾ ವಿಧ್ಯಾರ್ಥಿಗಳಿಗೆ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ತೊಡಗುವಂತೆ ಮಾಡಲು ಯು ಆಕಾರದ ಬೆಂಚ್ ಗಳು ಹೆಚ್ಚು ಸಹಕಾರಿಯಾಗಿದೆ”
– ಸೀತಲ ಓಲೇಕಾರ
ಚೇರಮನ್ನರು, ಬ್ರೈಟ್ ಬಿಗಿನಿಂಗ್ ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕ ಶಾಲೆ, ಪುರ್ತಗೇರಿ.
ವರದಿ : ಸುರೇಶ ಬಂಡಾರಿ.