ಗಜೇಂದ್ರಗಡ : ಜೀರೋ ಗ್ರಾವಿಟಿ ಟೆಕ್ನೋ ಸೆಂಟರ್ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ರಸಪ್ರಶ್ನೆ ಕಾರ್ಯಕ್ರಮ.
ವಿದ್ಯಾರ್ಥಿಗಳಲ್ಲಿ ಪ್ರಸ್ತುತ ಶೈಕ್ಷಣಿಕ ಅಭ್ಯಾಸದ ಜೊತೆಗೆ ಸ್ಪರ್ಧಾತ್ಮಕ ಜ್ಞಾನವು ಅವಶ್ಯ- ಪ್ರಾಚಾರ್ಯ ರಮೇಶ ಮರಾಠಿ.

ಗಜೇಂದ್ರಗಡ : ಜೀರೋ ಗ್ರಾವಿಟಿ ಟೆಕ್ನೋ ಸೆಂಟರ್ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ರಸಪ್ರಶ್ನೆ ಕಾರ್ಯಕ್ರಮ.
ವಿದ್ಯಾರ್ಥಿಗಳಲ್ಲಿ ಪ್ರಸ್ತುತ ಶೈಕ್ಷಣಿಕ ಅಭ್ಯಾಸದ ಜೊತೆಗೆ ಸ್ಪರ್ಧಾತ್ಮಕ ಜ್ಞಾನವು ಅವಶ್ಯ- ಪ್ರಾಚಾರ್ಯ ರಮೇಶ ಮರಾಠಿ.
ಗಜೇಂದ್ರಗಡ : ಸತ್ಯಮಿಥ್ಯ ( ಆಗಸ್ಟ್ -09).
ಸರ್ಕಾರಿ ಪದವಿ ಪೂರ್ವ ಕಾಲೇಜ್ ಗಜೇಂದ್ರಗಡ ಹಾಗೂ ಜೀರೋ ಗ್ರಾವಿಟಿ ಟೆಕ್ನೋ ಸೆಂಟರ್ ಇವರ ಸಂಯೋಗದಲ್ಲಿ ಇಂದು ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿತ್ತು.
ಸ್ಥಳೀಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಲಾ ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ 60 ವಿದ್ಯಾರ್ಥಿಗಳನ್ನು ಆರು ತಂಡಗಳನ್ನಾಗಿ ಮಾಡಿ ಆ ತಂಡಗಳಿಗೆ ಸ್ವಾಮಿ ವಿವೇಕಾನಂದ,ಕಿತ್ತೂರ ರಾಣಿ ಚೆನ್ನಮ್ಮ,ಭಗತ್ ಸಿಂಗ್,ಚಂದ್ರಶೇಖರ್ ಆಜಾದ್, ಡಾ.ಎಪಿಜೆ ಅಬ್ದುಲ್ ಕಲಾಂ,ಸರ್ ಐಸಾಕ್ ನ್ಯೂಟನ್ ಎಂಬ ಆದರ್ಶ ವ್ಯಕ್ತಿಗಳ ಹೆಸರನ್ನು ಇಡಲಾಗಿತ್ತು
ಒಂದು ಗುಂಪಿಗೆ ಹತ್ತರಂತೆ ಆರು ಹಂತಗಳಲ್ಲಿ ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು ಈ ಆರು ತಂಡಗಳಲ್ಲಿ.
ಚಂದ್ರಶೇಖರ್ ಆಜಾದ್ ತಂಡ ಪ್ರಥಮ ಬಹುಮಾನ
ಅಬ್ದುಲ್ ಕಲಾಂ ತಂಡ ಎರಡನೇ ಬಹುಮಾನ
ಭಗತ್ ಸಿಂಗ್ ತಂಡ ಮೂರನೇ ಬಹುಮಾನವನ್ನು ಪಡೆದುಕೊಂಡರು
ಈ ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಜೀರೋ ಗ್ರಾವಿಟಿ ಟೆಕ್ನೋ ಸೆಂಟರ್ ಗಜೇಂದ್ರಗಡದ ಆಯೋಜನೆಯ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಾಚಾರ್ಯರಾದ ರಮೇಶ ಮರಾಠಿ ಮಾತನಾಡಿ ವಿದ್ಯಾರ್ಥಿಗಳಲ್ಲಿ ಪ್ರಸ್ತುತ ಶೈಕ್ಷಣಿಕ ಅಭ್ಯಾಸದ ಜೊತೆಗೆ ಸ್ಪರ್ಧಾತ್ಮಕ ಜ್ಞಾನವು ಅವಶ್ಯ ಎಂದು ಮಾತನಾಡಿದರು.
ಸಹ ಉಪನ್ಯಾಸಕರಾದ ಬಸಪ್ಪ ಜೆ ಇವರು ಮಾತನಾಡಿ ನಮ್ಮ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉನ್ನತ ಹುದ್ದೆಗಳಿಗೆ ಸ್ಪರ್ಧಾತ್ಮಕ ಮಾದರಿಯಲ್ಲಿ ಅಭ್ಯಾಸ ಮಾಡಿ ಇಂತಹ ರಸಪ್ರಶ್ನೆ ಸ್ಪರ್ಧೆಗೆ ಭಾಗವಹಿಸಬೇಕೆಂದು ತಿಳಿಸಿದರು.
ಜೀರೋ ಗ್ರಾವಿಟಿ ಟೆಕ್ನೋ ಸೆಂಟರ್ ಕಂಪ್ಯೂಟರ್ ತರಬೇತಿ ಕೇಂದ್ರದ ವತಿಯಿಂದ ಸರ್ಕಾರಿ ಪದವಿಪೂರ್ವ ಕಾಲೇಜಿನ ಎಲ್ಲ ಉಪನ್ಯಾಸಕರಿಗೆ ಸನ್ಮಾನವನ್ನು ಮಾಡಲಾಯಿತು.
ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರಾದಂತ ರಮೇಶ ರಾಯ್ಕರ್, ಸರಸ್ವತಿ ದೊಡ್ಡಮನಿ, ಎಸ್ ಎಸ್ ಹಿರೇಮಠ್,ಎಂ ಎಸ್ ಕಂದ್ಗಲ್, ಆಸಿಫ್ ಮೋಮಿನ, ಶಿಲ್ಪಾ ದಿವಾನದ, ವೀರೇಶ ಎಲಿಗಾರ, ಸಿದ್ದಪ್ಪ ಪೂಜಾರ, ರಮೇಶ ಅಂಗಡಿ, ಎಲ್ಲಪ್ಪ ಕಟ್ಟಿ, ಕವಿತಾ ಪುರದ, ಸಂಗಮೇಶ ಹುನಗುಂದ ಹಾಗೂ ಉಪನ್ಯಾಸಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ :ಸುರೇಶ ಬಂಡಾರಿ.