
ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ” ಪ್ರಶಸ್ತಿಗೆ ರೈತ ಶೌಕತ್ಅಲಿ ಲಂಬೂನವರ ಆಯ್ಕೆ.
ನವಲಗುಂದ : ಸತ್ಯಮಿಥ್ಯ (ಸೆ-13)
ದೇಶದ ಬೆನ್ನೆಲುಬು ರೈತರು ಎನ್ನುವುದು ಹೆಸರಿಗಷ್ಟೇ ಇರದೆ ಅವರು ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಕೃಷಿಯಲ್ಲಿ ಸಮಗ್ರ ಕೃಷಿಯು ಕಡೆಗೆ ಗಮನಹರಿಸಿದಾಗ ಮಾತ್ರವೇ ಅವರಿಗೆ ಗೌರವ ಹಾಗೂ ಸನ್ಮಾನಗಳು ಅವರನ್ನು ಅರಸಿ ಬರುತ್ತವೆ ಅಂತಹ ಸಮಗ್ರ ಕೃಷಿಯ ರೈತ ಶೌಕತಅಲಿ ಲಂಬೂನವರ ಅವರಿಗೆ ಧಾರವಾಡ ಕೃಷಿ ವಿಶ್ವವಿದ್ಯಾನಿಲಯ ಆಯೋಜಿಸಿರುವ ಕೃಷಿ ಮೇಳದಲ್ಲಿ “ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿಕ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ರೈತ ಶೌಕತಅಲಿ ಲಂಬೂನವರ ಅವರು ಕೃಷಿಯಲ್ಲಿ ವಿನೂತನವಾದ ಕ್ರಮಗಳನ್ನು ಕೈಗೊಳ್ಳುವುದರ ಮೂಲಕ ಕೃಷಿಯಲ್ಲಿ ಉತ್ಪನ್ನಗಳ ಹೆಚ್ಚಳಕ್ಕೆ ಹಗಲಿರುಳು ಎನ್ನದೆ ಕೃಷಿಯಲ್ಲಿ ತೊಡಗಿದ್ದಾರೆ ಅವರ ತೋಟಕ್ಕೆ ರಾಜಕೀಯ ಗಣ್ಯರು ಸಂಘ ಸಂಸ್ಥೆಯವರು ಶಾಲಾ-ಕಾಲೇಜು ವಿದ್ಯಾರ್ಥಿಗಳು ಅವರ ತೋಟಕ್ಕೆ ಭೇಟಿ ನೀಡಿ ಅವರ ಸಮಗ್ರ ಕೃಷಿಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಅವರಿಂದ ಕೃಷಿ ಚಟುವಟಿಕೆಯಲ್ಲಿ ಸಲಹೆಗಳನ್ನು ಪಡೆದುಕೊಂಡಿದ್ದಾರೆ.
ಅವರ ಸಮಗ್ರ ಕೃಷಿಗೆ ಹಲವಾರು ಸ್ಥಳೀಯ ಸಂಘ-ಸಂಸ್ಥೆಯವರು ರೈತ ಸಂಘದವರು ರಾಜಕೀಯ ಗಣ್ಯರು ಶಾಲಾ ಕಾಲೇಜ ಸೇರಿದಂತೆ ರಾಜ್ಯದ ಹಲವು ಪ್ರಶಸ್ತಿಗಳು ಅವರಿಗೆ ಸಂದಿವೆ.
ಅವರು ತಮ್ಮ ತೋಟಗಾರಿಕೆಯಲ್ಲಿ ರೇಷ್ಮೆ ಹುಳು, ಮೀನುಗಾರಿಕೆ ,ವಿವಿಧ ತಳಿಯ ಹಣ್ಣುಗಳು,ತರಕಾರಿ, ಸೇರಿದಂತೆ ಹಲವಾರು ಬಗೆಯ ವಿನೂತನ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಅವರ ಸಮಗ್ರ ಕೃಷಿಗೆ ಧಾರವಾಡ ಕೃಷಿ ವಿಶ್ವ ವಿದ್ಯಾಲಯದಿಂದ ಕೊಡಲ್ಪಡುವ ಧಾರವಾಡ ಜಿಲ್ಲಾ ಮಟ್ಟದ ಶ್ರೇಷ್ಠ ಕೃಷಿ ಪ್ರಶಸ್ತಿಗೆ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಪ್ರಗತಿಪರ ರೈತ ಶೌಕತಅಲಿ ಲಂಬೂನವರ ಅವರು ಭಾಜನರಾಗಿದ್ದು, ಧಾರವಾಡ ಕೃಷಿ ವಿಶ್ವ ವಿದ್ಯಾಲಯದಲ್ಲಿ ಸೆ.15ರಂದು ಬೆಳಗ್ಗೆ 10:30ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ವರದಿ : ಮುತ್ತು ಗೋಸಲ.