ವಿದ್ಯಾರ್ಥಿಗಳ ಜೀವನ ಸುಂದರವಾಗಲು ಹಿರಿಯರ ಮಾರ್ಗದರ್ಶನ ಅವಶ್ಯ – ಪ್ರೊ. ಜೆಟ್ಟೆಣ್ಣವರ.
ಬೆನಕಪ್ಪ ಶಂಕ್ರಪ್ಪ ಸಿಂಹಾಸನದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ನಡೆದ "ನಮ್ಮ ಹಿರಿಯರು ನಮ್ಮ ಆದರ್ಶ" ಕಾರ್ಯಕ್ರಮ
ವಿದ್ಯಾರ್ಥಿಗಳ ಜೀವನ ಸುಂದರವಾಗಲು ಹಿರಿಯರ ಮಾರ್ಗದರ್ಶನ ಅವಶ್ಯ – ಪ್ರೊ. ಜೆಟ್ಟೆಣ್ಣವರ.
ಬೆನಕಪ್ಪ ಶಂಕ್ರಪ್ಪ ಸಿಂಹಾಸನದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ನಡೆದ “ನಮ್ಮ ಹಿರಿಯರು ನಮ್ಮ ಆದರ್ಶ” ಕಾರ್ಯಕ್ರಮ
ಗಜೇಂದ್ರಗಡ-ಸತ್ಯಮಿಥ್ಯ (ಸೆ -18).
ವಿದ್ಯಾರ್ಥಿಗಳೇ ನಿಮ್ಮ ಜೀವನವನ್ನು ಸುಂದರವಾಗಿಸಿಕೊಳ್ಳಲು ಹಿರಿಯರ ಮಾರ್ಗದರ್ಶನ ಅತ್ಯವಶ್ಯಕ.ನಮ್ಮ ಹಿರಿಯರು ನಡೆದ ಹಾದಿ ಮುಂದಿನ ಪೀಳಿಗೆಗೆ ಮಾರ್ಗದರ್ಶನವಾಗಲಿದೆ ಎಂದು ಪ್ರೊಫೆಸರ್ ಜೆಟ್ಟೆಣ್ಣವರ ಹೇಳಿದರು.
ಅವರು ಬುಧವಾರ ಶ್ರೀ ಬೆನಕಪ್ಪ ಶಂಕ್ರಪ್ಪ ಸಿಂಹಾಸನದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ನಡೆದ “ನಮ್ಮ ಹಿರಿಯರು ನಮ್ಮ ಆದರ್ಶ” ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತಾ. ಪ್ರಸ್ತುತ ಸಂದರ್ಭದಲ್ಲಿ ನಮ್ಮ ಹಿರಿಯ ದಾರ್ಶನಿಕರು ಮುಂದಿನ ಯುವ ಪೀಳಿಗೆಗೆ ತಮ್ಮ ಜೀವನದ ಅನುಭವಗಳನ್ನು ಗರಿಷ್ಠ ಪ್ರಮಾಣದಲ್ಲಿ ಹೇಳಿದ್ದಾರೆ ಅವುಗಳನ್ನು ಅನುಕರಣೆ ಒಂದೇ ಬಾಕಿ ಇದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಮಹೇಂದ್ರ.ಜಿ. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿ ಗಳು ಹಿರಿಯರಿಗೆ ಗೌರವ ಕೊಡುತ್ತಿಲ್ಲ. ಹಿರಿಯರ ಬಗ್ಗೆ ನಿರ್ಲಕ್ಷ ದೋರಣೆ ತೋರುತ್ತಿದ್ದಾರೆ. ಅದನ್ನೆಲ್ಲವನ್ನು ಬಿಟ್ಟು ಹಿರಿಯರನ್ನು ಗೌರವದಿಂದ ಕಾಣಬೇಕು ಮತ್ತು ಅವರ ಸೇವೆ ಮಾಡುವದು ಕಿರಿಯರ ಕರ್ತವ್ಯವಾಗಬೇಕು ಅಂದಾಗ ಮಾತ್ರ ನೀವೂ ಜೀವನದಲ್ಲಿ ಉನ್ನತ ಮಟ್ಟ ತಲುಪಲು ಸಾಧ್ಯವೆಂದರು.
ಕಾರ್ಯಕ್ರಮವನ್ನು ಅಂತಿಮ ವರ್ಷದ ವಿದ್ಯಾರ್ಥಿಗಳಾದ ಪ್ರದೀಪ ನರಿ ಮತ್ತು ತಂಡದವರು ನಿರ್ವಹಣೆ ಮಾಡಿದರು.
ಈ ಸಂದರ್ಭದಲ್ಲಿ IQAC ಸಂಚಾಲಕರಾದ ಶ್ರೀಮತಿ ಸರಸ್ವತಿ, ಸಾಂಸ್ಕೃತಿಕ ವಿಭಾಗದ ಸಂಚಾಲಕರಾದ ಶ್ರೀ ಸಿದ್ದೇಶ ಕೆ ಇವರು ಭಾಗವಹಿಸಿದ್ದರು
ವರದಿ : ಸುರೇಶ ಬಂಡಾರಿ.