
ಹಾವು ಕಚ್ಚಿ ಬಾಲಕಿ ಸಾವು
ಹಟ್ಟಿ ಚಿನ್ನದ ಗಣಿ: ಸತ್ಯಮಿಥ್ಯ (ಜುಲೈ -31).
ಸ್ಥಳೀಯ ಗುರುಗುಂಟಾ ಗ್ರಾಮದಲ್ಲಿಂದು ಹಾವು ಕಚ್ಚಿ ಏಳು ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ನಡೆದಿದೆ.
ಗುರುಗುಂಟಾ ಗ್ರಾಮದ ಪಕ್ಕದ ಹೊಲದಲ್ಲಿ ಮನೆ ಮಾಡಿಕೊಂಡು ವಾಸವಾಗಿದ್ದ ನಾಗಪ್ಪ ನಾಯಕ್ ಎಂಬುವವರ ಮಗಳಾದ ನಿರ್ಮಲಾ ಎನ್ನುವ 7ವರ್ಷದ ಬಾಲಕಿ ಮನೆಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಹಾವು ಕಚ್ಚಿದೆ ತಕ್ಷಣ ಮನೆಯವರು ಹಟ್ಟಿ ಚಿನ್ನದ ಗಣಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವತಿ ಮೃತಪಟ್ಟಿರುವ ಘಟನೆ ನಡೆದಿದೆ ಮಗಳನ್ನು ಕಳೆದು ಕೊಂಡ ಪಾಲಕರ ರೋಧನ ಮುಗಿಲು ಮುಟ್ಟಿದೆ.
ವರದಿ : ಶಿವು ರಾಠೋಡ್.