
ವಿದ್ಯಾರ್ಥಿಗಳ ಸರ್ವಾಂಗಿಣ ಬೆಳವಣಿಗೆಗೆ ಕ್ರೀಡೆ ಸಹಕಾರಿ :-ಜಶ್ವಂತ್ ರಾಜ್ ಜೈನ್
ಕುಕನೂರ :ಸತ್ಯಮಿಥ್ಯ (ಅ -15).
ಕಲಬುರಗಿ ವಿಭಾಗ ಮಟ್ಟದ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಖೋ ಖೋ ಮತ್ತು ವಾಲಿಬಾಲ್ ಕ್ರೀಡಾಕೂಟಕ್ಕೆ ಕುಕನೂರು ಪಟ್ಟಣದ ವಿದ್ಯಾಶ್ರೀ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಸೋಮವಾರ ಚಾಲನೆಯನ್ನು ವಿದ್ಯಾಶ್ರೀ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಜಸ್ವಂತ್ ರಾಜ್ ಜೈನ್ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ವಿದ್ಯಾರ್ಥಿಗಳಿಗೆ ಶಿಕ್ಷಣವೆಷ್ಟು ಪ್ರಮುಖ ಅಷ್ಟೇ ಕ್ರೀಡೆ ಪ್ರಮುಖವಾಗಿದೆ. ಅಧ್ಯಯನಗಳು ಮುಖ್ಯವಾಗಿದ್ದರೂ, ಕ್ರೀಡೆಯು ಮಗುವಿನ ಒಟ್ಟಾರೆ ಬೆಳವಣಿಗೆಗೆ ಸಹಾಯ ಮಾಡುತ್ತದೆ ಎಂಬುದನ್ನು ನಾವು ಅಲ್ಲಗಳೆಯುವಂತಿಲ್ಲ ಎಂದು ಹೇಳಿದರು.
ಸೋಮಶೇಖರ ಗೌಡ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾತನಾಡಿ ವಯಸ್ಸಿನಿಂದಲೂ, ಕ್ರೀಡೆಗಳನ್ನು ಆರೋಗ್ಯಕರವಾಗಿ ಮತ್ತು ಫಿಟ್ ಆಗಿರಲು ಒಂದು ಮಾರ್ಗವೆಂದು ಪರಿಗಣಿಸಲಾಗಿದೆ, ಆದರೆ ಅದು ಅದನ್ನು ಮೀರಿದೆ. ಇಂದು ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಕ್ರೀಡೆಗಳು ಅತ್ಯಗತ್ಯ. ವಿವಿಧ ಕ್ರೀಡೆಗಳನ್ನು ಆಡುವುದರಿಂದ ಅವರು ತಂಡದ ಕೆಲಸ, ನಾಯಕತ್ವ, ಹೊಣೆಗಾರಿಕೆ, ತಾಳ್ಮೆ ಮತ್ತು ಆತ್ಮ ವಿಶ್ವಾಸದಂತಹ ಜೀವನ ಕೌಶಲ್ಯಗಳನ್ನು ಕಲಿಸಲು ಸಹಾಯ ಮಾಡುತ್ತದೆ ಮತ್ತು ಜೀವನದ ಸವಾಲುಗಳನ್ನು ಎದುರಿಸಲು ಅವರನ್ನು ಸಿದ್ಧಪಡಿಸುತ್ತದೆ ಎಂದು ಹೇಳಿದರು.
ತಹಸೀಲ್ದಾರ್ ಎಚ್ ಪ್ರಾಣೇಶ್, ತಾ ಪಂ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ್ ಬಿರಾದಾರ್ ಅವರು ಕ್ರೀಡಾ ಜ್ಯೋತಿ ಬರಮಾಡಿ ಕೊಳ್ಳುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಕಲಬುರಗಿ ವಿಭಾಗದ 7 ಜಿಲ್ಲೆಯ 28 ತಂಡಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದು ಸುಮಾರು ಎರಡು ದಿನಗಳ ಕಾಲ ಕ್ರೀಡಾಕೂಟವು ನಡೆಯಲಿದೆ.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಲಲಿತವ್ವ ಯಡಿಯಾಪುರ, ಕ್ರೀಡಾಕೂಟದ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ವಿದ್ಯಾಶ್ರೀ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಜಶ್ವಂತ್ ರಾಜ್ ಜೈನ್, ಜಿಲ್ಲಾ ದೈಹಿಕ ಶಿಕ್ಷಣಧಿಕಾರಿ ಎ ಬಸವರಾಜ್, ಟಿ.ಜೆ ದಾನಿ ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ, ದೈಹಿಕ ಶಿಕ್ಷಣ ಇಲಾಖೆಯ ಎಸ್ ವಿ ಧರಣಾ, ದೈಹಿಕ ಪರಿವಿಕ್ಷಕಿ ಸರಸ್ವತಿ, ,ಬಸವರಾಜ್ ಮುಳಗುಂದ, ವೀರಭದ್ರಪ್ಪ ಅಂಗಡಿ, ಬಿ.ಆರ್.ಸಿ. ಪೀರ್ ಸಾಬ್ ದಫೆದಾರ್, ಮಂಜುನಾಥ್ ತೆಗ್ಗಿನಮನಿ, ಉಮೇಶ್ ಕಂಬಳಿ, ರವಿ ಮಳಗಿ, ಶರಣಪ್ಪ ರಾವಣಕಿ, ಅಶೋಕ ಮಾದೇನೂರು, ಚಂದ್ರು ದೊಡ್ಡಮನಿ, ಶರಣಪ್ಪ ವೀರಾಪೂರ,ನವೀನ ನವಲೆ , ವೀರಯ್ಯ ಉಳ್ಳಾಗಡ್ಡಿ ,ರವಿ ನಲ್ವಡ್ ಇತರರು ಉಪಸ್ಥಿತರಿದ್ದರು.
ವರದಿ : ಚನ್ನಯ್ಯ ಹಿರೇಮಠ.