ತುರ್ತು ಪರಿಸ್ಥಿತಿ ವಿರೋಧಿಸಿ – ಬಿಜೆಪಿ ಪೋಸ್ಟರ್ ಅಭಿಯಾನ.
1975 ರಲ್ಲಿ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ವಿರೋಧಿಸಿ ಪೋಸ್ಟರ್ ಅಭಿಯಾನ

ತುರ್ತು ಪರಿಸ್ಥಿತಿ ವಿರೋಧಿಸಿ – ಬಿಜೆಪಿ ಪೋಸ್ಟರ್ ಅಭಿಯಾನ.
1975 ರಲ್ಲಿ ಇಂದಿರಾ ಗಾಂಧಿ ಹೇರಿದ್ದ ತುರ್ತು ಪರಿಸ್ಥಿತಿ ವಿರೋಧಿಸಿ ಪೋಸ್ಟರ್ ಅಭಿಯಾನ
ಗಜೇಂದ್ರಗಡ – ಸತ್ಯ ಮಿಥ್ಯ (ಜೂ -25).
ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೇಸ್ ವಿರುದ್ದ ಬಿಜೆಪಿ ಯುವ ಮೋರ್ಚಾ ರೋಣ ಮಂಡಲವತಿಯಿಂದ ಗಜೇಂದ್ರಗಡ ನಗರದಲ್ಲಿ ಪೋಸ್ಟರ್ ಅಭಿಯಾನ ನಡೆಸಿದರು.
ಈ ಸಂದರ್ಭದಲ್ಲಿ ಗಜೇಂದ್ರಗಡ ನಗರ ಘಟಕದ ಬಿಜೆಪಿ ಅಧ್ಯಕ್ಷ ರಾಜೇಂದ್ರ ಘೋರ್ಪಡೆ ಮಾತನಾಡಿ. ಎಲ್ಲೆಂದರಲ್ಲಿ ಸಂವಿಧಾನ ಪ್ರದರ್ಶನ ಮಾಡುತ್ತಾ ಸಂವಿಧಾನ ರಕ್ಷಣೆಯ ಸೋಗು ಹಾಕಿರುವ ಇಂದಿನ ಕಾಂಗ್ರೇಸ್ ನಾಯಕರು. 1975 ರಲ್ಲಿ ಸಂವಿಧಾನದ ಆಶಯವನ್ನು ಮೂಲೆಗುಂಪು ಮಾಡಿ ದೇಶದ ಮೇಲೆ ತುರ್ತು ಪರಿಸ್ಥಿತಿ ಹೆರುವ ಮೂಲಕ ಸರ್ವಾಧಿಕಾರಿ ಧೋರಣೆ ಅನುಸರಿಸಿತು. ಕಾಂಗ್ರೇಸ್ ನ ಕುತಂತ್ರದಿಂದ ಸಂವಿಧಾನ ಶಿಲ್ಪಿ ಬಾಬಾಸಾಹೇಬ ಅಂಬೇಡ್ಕರ್ ರವರನ್ನು ಚುನಾವಣೆಯಲ್ಲಿ ಸೋಲಿಸುವ ಮೂಲಕ ಅಪಹಾಸ್ಯ ಮಾಡಿದರು. ಕಾಂಗ್ರೇಸ್ ಪಕ್ಷ ಸಂವಿಧಾನಕ್ಕೆ ಮತ್ತು ಸಂವಿಧಾನ ರಚನೆಕಾರರನ್ನು ದಿಕ್ಕರಿಸಿ ಇಂದಿರಾ ಗಾಂಧಿ ಸರ್ವಾಧಿಕಾರಿ ಆಡಳಿತ ನಡೆಸಿತ್ತು. ಸಂವಿಧಾನವನ್ನು ಉಳಿಸುವ ನಾಟಕವಾಡುತ್ತಿರುವ ಕಾಂಗ್ರೇಸ್ ಪಕ್ಷಕ್ಕೆ ಜನ ತಕ್ಕ ಪಾಠ ಕಲಿಸಿದ್ದಾರೆ ಎಂದರು.
ನಂತರ ನಗರದ ಪ್ರಮುಖ ಸ್ಥಳಗಳಲ್ಲಿ ತುರ್ತು ಪರಿಸ್ಥಿತಿಯ ಕರಾಳ ಛಾಯೆಗಳನ್ನು ಪ್ರದರ್ಶನ ಮಾಡುತ್ತಾ ಕಾಂಗ್ರೇಸ್ ವಿರುದ್ದ ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಯುವ ಮೋರ್ಚಾ ಅಧ್ಯಕ್ಷರಾದ ಉಮೇಶ್ ಚನ್ನು ಪಾಟೀಲ್, ಮುಖಂಡರಾದ ಅಶೋಕ ವನ್ನಾಲ,ಸಿದ್ದಣ್ಣ ಬಳಿಗೇರ , ಅಶೋಕ ಪವಾಡ ಶೆಟ್ಟಿ, ಅನಿಲಕುಮಾರ್ ಪಲ್ಲೆದ, ಶಿವಾನಂದ ಜಿಡ್ಡಿಬಾಗಿಲ,ಬಾಲಾಜಿ ಬೋಸಲೇ,ಮಾಂತೇಶ ಪೂಜಾರ, ಮುತ್ತಯ್ಯ ಕಾರಡಗಿಮಠ ಮುಂತಾದವರು ಉಪಸ್ಥಿತರಿದ್ದರು.
ವರದಿ : ಸುರೇಶ ಭಂಡಾರಿ.