ಸ್ಥಳೀಯ ಸುದ್ದಿಗಳು

ಮೈನಹಳ್ಳಿ ಸರ್ಕಾರಿ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ.

Share News

ಮೈನಹಳ್ಳಿ ಸರ್ಕಾರಿ ಶಾಲೆಯಲ್ಲಿ ಸ್ವಾತಂತ್ರ್ಯೋತ್ಸವ ದಿನಾಚರಣೆ.

ಅಡವಿಬಸಯ್ಯ ಶಿಕ್ಷಣ ,ಸಾಹಿತ್ಯ, ಸಾಂಸ್ಕೃತಿಕ ಸಂಸ್ಥೆ (ರಿ) ಯಿಂದ ಪಠ್ಯ ಪುಸ್ತಕ ವಿತರಣೆ

ಕೊಪ್ಪಳ : ಸತ್ಯಮಿಥ್ಯ (ಆ-15).

ದೇಶದ ಸ್ವಾತಂತ್ರ್ಯಕ್ಕಾಗಿ ಹಲವಾರು ಮಹನೀಯರು ತಮ್ಮ ಜೀವನವನ್ನೆ ಮುಡುಪಾಗಿಟ್ಟು ನಮಗೆ ಸ್ವಾತಂತ್ರ್ಯ ತಂದುಕೊಟ್ಟಿರುವುದನ್ನು ನಾವು ಪ್ರತಿ ನಿತ್ಯ ಸ್ಮರಣೆ ಮಾಡುವ ಜೊತೆಗೆ ಅವರ ಆದರ್ಶಗಳನ್ನು ಅಳವಡಿಸಿಕೊಂಡು ಬದುಕು ನಡೆಸಬೇಕು ಎಂದು ಶಾಲಾ ಮುಖ್ಯೋಪಾಧ್ಯಯರು ಮತ್ತು ನಿಕಟಪೂರ್ವ ಕ.ರಾ. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಶಂಭುನಗೌಡ್ರು ಪಾಟೀಲ್ ಹೇಳಿದರು.

ಅವರು ತಾಲ್ಲೂಕಿನ ಮೈನಹಳ್ಳಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಗಸ್ಟ್ 15ರ ಶುಕ್ರವಾರದಂದು 79 ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ ವಿದ್ಯಾರ್ಥಿಗಳು ನಮ್ಮ ದೇಶ ಹಾಗೂ ನಮ್ಮ ನಾಡಿನ ಮಹನೀಯರ ಕುರಿತು ಸತತ ಅಧ್ಯಯನ ನಡೆಸುವ ಮೂಲಕ ಅವರ ಆದರ್ಶಪಾಲನೆಗೆ ಮುಂದಾಗಬೇಕಿದೆ. ಶಾಲೆಯ ಸುಧಾರಣೆ ನಮ್ಮ ಕರ್ತವ್ಯವಾಗಿದ್ದು ಶಾಲೆಗೆ ದಾನ ಮಾಡಿದವರನ್ನು ಈ ದಿನ ಸ್ಮರಿಸಲೇಬೇಕಿದೆ ಎಂದರು.

ಮೈನಳ್ಳಿಯ ಶ್ರೀ ಅಡವಿಬಸಯ್ಯ ತೋಟದ ಶಿಕ್ಷಣ , ಸಾಹಿತ್ಯ, ಮತ್ತು ಸಾಂಸ್ಕೃತಿಕ (ರಿ) ಸಂಸ್ಥೆಯ ಸಂಸ್ಥಾಪಕರು, ಸಾಹಿತಿಗಳು, ಕಲಾವಿದರು, ವಕೀಲರು, ಸಮಾಜಸೇವಕರಾದ ಡಾ.ಷಣ್ಮುಖಯ್ಯ ತೋಟದ ಅವರು ಪ್ರತಿ ವರ್ಷದಂತೆ ಕಳೆದ 36 ವರ್ಷಗಳಿಂದ ಅವರ ತಂದೆ ತಾಯಿಯವರ ಸವಿನೆನಪಗಾಗಿ ಶಾಲೆಯ ಎಲ್ಲಾ ವಿಧ್ಯಾರ್ಥಿಗಳಿಗೆ ಉಚಿತವಾಗಿ ನೋಟ ಬುಕ್, ಲೇಖನಿ, ಪೆನ್ಸಿಲ್, ಜಾಮೆಟ್ರಿ ಬಾಕ್ಸ್ ವಿತರಣೆ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯವಾಗಿದ್ದು ಅವರ ಕಾರ್ಯ ಸಮಾಜಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು.

ನಂತರ ಶ್ರೀ ಅಡವಿಬಸಯ್ಯ ತೋಟದ ಶಿಕ್ಷಣ , ಸಾಹಿತ್ಯ, ಮತ್ತು ಸಾಂಸ್ಕೃತಿಕ (ರಿ) ಸಂಸ್ಥೆಯ ಸಂಸ್ಥಾಪಕರಾದ ಡಾ.ಷಣ್ಮುಖಯ್ಯ ತೋಟದ ಅವರು ಮಾತನಾಡಿ ನಮ್ಮ ದೇಶ ಹಾಗೂ ನಮ್ಮ ನಾಡಿನ ಒಳಿತಿಗಾಗಿ ವಿದ್ಯಾರ್ಥಿಗಳು ಸದಾ ಕಾರ್ಯೋನ್ಮುಖರಾಗಿ ಜೀವನ ನಡೆಸಬೇಕು, ದೇಶಕ್ಕೆ ಮಹಾನ್ ನಾಯಕರ, ಹೋರಾಟಗಾರರ, ಯೋಧರ, ರೈತರ ಕಾರ್ಯ ನಿಜಕ್ಕೂ ಸದಾಸ್ಮರಣೀಯವಾಗಿದ್ದು ಅವರ ಆದರ್ಶ ಗುಣಗಳನ್ನು ಅಳವಡಿಸಿಕೊಂಡು ವಿದ್ಯಾರ್ಥಿಗಳು ಸಾಗಬೇಕು ಎಂದರು.

ನಂತರ ಎಸ್.ಡಿ.ಎಮ್.ಎಸ್. ಅಧ್ಯಕ್ಷ ಮಹೇಂದ್ರಕುಮಾರ ಕುರಡಿಗಿ ಹಾಗೂ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಮರಿ ಶಾಂತವೀರ ಸ್ವಾಮಿ ಚಕ್ಕಡಿ,ವಿದ್ಯಾಧರ ಹಿರೇಗೌಡ್ರು, ಸಿದ್ದರಡ್ಡಿ ಡಂಬ್ರಳ್ಳಿ, ಬಸನಗೌಡ್ರ, ಜಗದೀಶ ಕತ್ತಿ ಇತರರು ಸ್ವಾತಂತ್ರ್ಯದ ಬಗ್ಗೆ ಮಾತನಾಡಿದರು.

ಈ ವೇಳೆ ಶಾಲೆಯ ವಿದ್ಯಾರ್ಥಿಗಳು ಸ್ವಾತಂತ್ರ್ಯೋತ್ಸವದ ಕುರಿತು ಭಾಷಣ ಮಾಡಿದರು. ಮತ್ತು ವಿವಿಧ ದೇಶ ಭಕ್ತಿ ಹಾಗೂ ನೃತ್ಯಗಳು ಜರುಗಿದವು, ಹಾಗೂ ಸ್ಕೌಟ್ ಆಂಡ್ ಗೈಡ್ಸ್ ವಿದ್ಯಾರ್ಥಿಗಳಿಗೆ ರಾಜ್ಯಪಾಲರ ಪ್ರಮಾಣಿಕೃತ ಪತ್ರ ನೀಡಲಾಯಿತು. ಇದೇ ವೇಳೆ ಶಾಲೆಯ ಅಡುಗೆ ಸಹಾಯಕರಿಗೆ ನಿವೃತ್ತಿ ಹೊಂದಿದ ಕಾರಣ ಸನ್ಮಾನಿಸಿ ಗೌರವಿಸಲಾಯಿತು.

‌ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಸದಸ್ಯರು ಹಾಗೂ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು, ಸದಸ್ಯರು ಮುದ್ದು ವಿದ್ಯಾರ್ಥಿಗಳು ಗ್ರಾಮದ ಗುರು‌ಹಿರಿಯರು, ಸಹ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು ಹಾಗೂ ಶಾಲೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ವರದಿ : ಉದಯ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!