ಸರ್ಕಾರಿ ಶಾಲಾ ಆವರಣದಲ್ಲಿ ಸರಸ್ವತಿ ಮೂರ್ತಿ ಪ್ರತಿಷ್ಠಾಪನೆ.
ಮಾರನಾಳ ತಾಂಡಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರ್ಣದಲ್ಲಿ ಸರಸ್ವತಿ ಮೂರ್ತಿ ಪ್ರತಿಷ್ಠಾಪನೆ.
ಸರ್ಕಾರಿ ಶಾಲಾ ಆವರಣದಲ್ಲಿ ಸರಸ್ವತಿ ಮೂರ್ತಿ ಪ್ರತಿಷ್ಠಾಪನೆ.
ಯಾದಗಿರಿ:ಸತ್ಯಮಿಥ್ಯ (ಸೆ-07)
ಜಿಲ್ಲೆಯ ಹುಣಸಗಿ ತಾಲೂಕಿನ ಮಾರನಾಳ ತಾಂಡದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸರಸ್ವತಿ ಮೂರ್ತಿ ಪ್ರತಿಷ್ಠಾನ ಹಾಗೂ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಮಾರನಾಳ ತಾಂಡಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರ್ಣದಲ್ಲಿ ಸರಸ್ವತಿ ಮೂರ್ತಿ ಪ್ರತಿಷ್ಠಾಪನ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳ ವರ್ಗಾವಣೆ ಪ್ರಯುಕ್ತ.ವಿದ್ಯಾರ್ಥಿಗಳು,ಗ್ರಾಮಸ್ಥರು ಹಾಗೂ ಗುರುವೃಂದದವತಿಯಿಂದ ಮುಖ್ಯ ಗುರುಗಳ ಉಪಸ್ಥಿತಿಯಲ್ಲಿ ಈ ಸರಸ್ವತಿ ಮೂರ್ತಿ ಪ್ರತಿಷ್ಠಾಪನೆ ಮಾಡುವ ಅಭಿಲಾಷೆ ಹೊಂದಿದ್ದರು.
ಅವರ ಆಸೆಯಂತೆ ಇಂದು ಸರಸ್ವತಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಯಿತು ಮೂರ್ತಿ ನಿರ್ಮಾಣವನ್ನು ಗ್ರಾಮಸ್ಥರ ದೇಣಿಗೆ ಹಾಗೂ ಸರ್ಕಾರದ ಹಿರಿಯರ ಪ್ರಾಥಮಿಕ ಶಾಲೆ ಅನುಧಾನದಲ್ಲಿ 6 ಫಿಟ್ ಎತ್ತರ ಅಳತೆಯ ಸರಸ್ವತಿ ಮೂರ್ತಿ ಪ್ರತಿಷ್ಠಾಣ ಮಾಡಲಾಯಿತು.
ಇದರ ಜೊತೆಯಲ್ಲಿ ವರ್ಗಾವಣೆ ಆಗುತ್ತಿರುವ ಕೊಟ್ರೇಶ್. ಬಿ. ಕೊಳುರ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಗುರುಗಳು ಹಾಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲೆಯ ಶಿಕ್ಷಕರ ಸಂಘದ ಹುಣಸಗಿ ತಾಲ್ಲೂಕು ಅಧ್ಯಕ್ಷರು, ಇವರಿಗೆ ಗುರುವೃಂದದವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು ಮತ್ತು ಹುಣಸಗಿ ತಾಲ್ಲೂಕಿನ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲೆಯ ಶಿಕ್ಷಕರ ಸಂಘದ ಪ್ರಧಾನ ಕಾರ್ಯದಶಿರವರಿಗು ಮತ್ತು ಕಾರ್ಯನಿರತ ಪತ್ರಕರ್ತರ ಧ್ವನಿಯ ಹುಣಸಗಿ ತಾಲ್ಲೂಕಿನ ಅಧ್ಯಕ್ಷರಾದ ಡಾ. ಶಿವು ರಾಠೋಡರವರಿಗು ಸನ್ಮಾನಿಸಿದರು ಜೊತೆಯಲ್ಲಿ ನಾರಾಯಣಾಪುರ ಪ್ರೊಲೀಸ್ ಠಾಣೆಯ ಪಿಎಸ್ಐ ರಾಜಶೇಖರ್ ರಾಠೋಡರವರನ್ನು ಸನ್ಮಾನಿಸಿದರು.
ಪಿಎಸ್ಐ ರಾಜಶೇಖರ ರಾಠೋಡರವರು ಮಕ್ಕಳೊಂದಿಗೆ ಸ್ವಲ ಸಮಯ ಬೆರೆತು ಮಕ್ಕಳಲ್ಲಿ ಮಕ್ಕಳಂತೆ ಕಾನೂನು ಅರಿವು ಮೂಡಿಸಿದರು. ಬಾಲ್ಯವಿವಾಹ. ಲೈಂಗಿಕ ದೌರ್ಜನ್ಯ ಹಾಗೂ ಕೆಟ್ಟದಾಗಿ ಮುಟ್ಟುವ ರೀತಿ ಬಗ್ಗೆ ಮಾಹಿತಿ ನೀಡಿದರು ಮತ್ತು ಓದಿ ಒಳ್ಳೆಯ ಸಾಧಕರು ಆಗಬೇಕು ತಂದೆ ತಾಯಿಯ ಗೌರವ ನಿಮ್ಮ ಜವಾಬ್ದಾರಿ ಇದೆ ಎಂದು ಅರಿವು ಮೂಡಿಸಿದರು ಜೊತೆಯಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಮತ್ತೆ ಶಾಲೆಗೆ ಕರೆತನ್ನಿ ಇಂದು ತಿಳಿಸಿದರು.
ಇದೆ ಸಂಧರ್ಭದಲ್ಲಿ ಓಂ ಪ್ರಕಾಶ ಪತ್ತಾರ್ ಹಿರಿಯ ಪ್ರಧಾನ ಗುರುಗಳು ಮಾರನಾಳ , ಬಸಲಿಂಗಪ್ಪ ಹಿರೇಮಠ , ಶ್ರೀಮತಿ ಪವಿತ್ರ.ಎಸ್, ಶ್ರೀಮತಿ ರುದ್ರಮ್ಮ , ಶ್ರೀಮತಿ ಭಾವನೇಶ್ವರಿ, ರೇಷ್ಮಾ ಖಾಜಿ, ತಿರುಪತಿ ರಾಠೋಡ್, ಮಾಹಾದೇವ ರಾಠೋಡ್ , ಆನಂದ ಕೆರೆಹೋಲ ಮತ್ತು ಶಾಲೆಯ ಉಸ್ತುವಾರಿ ಹಾಗೂ ಮೇಲಉಸ್ತುವಾರಿ ಅಧ್ಯಕ್ಷರು ಸರ್ವ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರು ಇದ್ದರು.
ವರದಿ : ಶಿವು ರಾಠೋಡ್.