ಗುರು ಅಂಧಕಾರ ಕಳೆಯುವ ಮಹಿಮಾಪುರುಷ -ಕಾವ್ಯಶ್ರೀ ಅಮ್ಮ
ಮೂಡಲಗಿ: ಸತ್ಯ ಮಿಥ್ಯ ( ಜುಲೈ -22).
“ಗುರು ಎನ್ನುವುದು ಒಂದು ದೊಡ್ಡ ಶಕ್ತಿಯಾಗಿದ್ದು ನಮ್ಮ ಅಂಧಕಾರವನ್ನು ಕಳೆದು ಬೆಳಕಿನ ದೀವಿಗೆಯನ್ನು ಹಚ್ಚುವ ಮಹಿಮಾಪುರುಷನಾಗಿದ್ದಾನೆ. ಗುರು ಪೂರ್ಣಿಮೆಯು ನಮ್ಮೆಲ್ಲಾ ಗುರುಗಳನ್ನು ನೆನೆಯುವ ಅವರ ಮಾರ್ಗದರ್ಶನದ ಮೆಲುಕು ಹಾಕುವ ಸಂದರ್ಭವಾಗಿದೆ” ಎಂದು ಶ್ರೀ ಜಗದ್ಗುರು ರೇಣುಕಾಚಾರ್ಯ ಶಿವಲಿಂಗ ಆಶ್ರಮ ನಾಗನೂರ ಮಠದ ಕಾವ್ಯಶ್ರೀ ಅಮ್ಮ ಹೇಳಿದರು.
ಅವರು ಸ್ಥಳೀಯ ಜ್ಞಾನದೀಪ್ತಿ ಪೌಂಡೇಶನ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಡಿಯಲ್ಲಿ ಗುರುಪೂರ್ಣಿಮೆಯ ನಿಮಿತ್ತ ಹಮ್ಮಿಕೊಂಡ ಹುಣ್ಣಿಮೆಯ ಬೆಳದಿಂಗಳ ಚಿಂತನ-ಮಂಥನ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯವಹಿಸಿ ಮಾತನಾಡಿದರು.
ಗುರು ಇಲ್ಲದಿದ್ದರೆ ಇವರು ಯಾರು ಇರುವುದಿಲ್ಲ ಏಕೆಂದರೆ ಗುರುವಾದವನು ಎಲ್ಲರ ಬದುಕಿನ ದಾರಿಯನ್ನು ತೋರಿಸಿ ಬದುಕನ್ನು ಸುಂದರಗೊಳಿಸುತ್ತಾನೆ ಎಂದರು.
ಕಾರ್ಯಕ್ರಮದಲ್ಲಿ ಪರಿಷತ್ತಿನ ಸದಸ್ಯ ಬಿ.ಆರ್. ತರಕಾರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಪರಿಷತ್ತಿನಿಂದ ಶ್ರಾವಣಮಾಸದಲ್ಲಿ ಪ್ರತಿ ಸೋಮವಾರ ಹಮ್ಮಿಕೊಳ್ಳಲಾಗುವ ವಚನ ಶ್ರಾವಣ ಕಾರ್ಯಕ್ರಮದ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಪರಿಷತ್ತಿನ ಕಾರ್ಯಕಾರಣಿ ಸಮಿತಿಯ ನೂತನ ಪದಾಧಿಕಾರಿಗಳನ್ನಾಗಿ ಶಿವಕುಮಾರ ಕೋಡಿಹಾಳ, ನಿಂಗಪ್ಪ ಸಂಗ್ರೇಜಿಕೊಪ್ಪ, ಶಶಿರೇಖಾ ಬೆಳ್ಳಕ್ಕಿ ಹಾಗೂ ಭಾಗೀರಥಿ ಕುಳಲಿ ಅವರನ್ನು ಸ್ವಾಗತಿಸಲಾಯಿತು.
ಗೌರವ ಉಪಸ್ಥಿತಿವಹಿಸಿದ್ದ ಬೆಳಗಾವಿಯ ಬಿ.ಡಿ.ಸಿ.ಸಿ ಉಪಾಧ್ಯಕ್ಷ ಸುಭಾಸ ಢವಳೇಶ್ವರ ಮಾತನಾಡಿ ಪರಿಷತ್ತಿನ ಎಲ್ಲಾ ಕಾರ್ಯಚಟುವಟಿಕೆಗಳಿಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬಿ.ವಾಯ್ ಶಿವಾಪೂರ ಮಾತನಾಡಿದರು.
ಇದೇ ಸಂದರ್ಭದಲ್ಲಿ ಸೀನಿಯರ್ ನ್ಯಾಶನಲ್ ಕುಸ್ತಿ ಸ್ಪರ್ಧೆಯಲ್ಲಿ ಚಿನ್ನದ ಪದಕ ವಿಜೇತ ಕಾಡೇಶ ಪಾಟೀಲ ಕುಸ್ತಿಪಟುವನ್ನು ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಜ್ಞಾನದೀಪ್ತಿ ಪೌಂಡೇಶನ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಂಜಯ ಸಿಂಧಿಹಟ್ಟಿ, ಮೂಡಲಗಿ ಸಾಯಿ ಸದ್ಭಕ್ತ ಮಂಡಳಿಯ ಸರ್ವ ಸದಸ್ಯರು, ಗೌರವ ಕಾರ್ಯದರ್ಶಿ ಎ.ಎಚ್ ಒಂಟಗೋಡಿ, ಸಲಬಣ್ಣವರ, ಮೋಹಿತೆ ಕಿತ್ತೂರ, ಚಿದಾನಂದ ಹೂಗಾರ, ಗೋದಾವರಿ ದೇಶಪಾಂಡೆ, ಶೈಲಜಾ ಬಡಿಗೇರ,ರಾಜಶ್ರೀ ಕಲಾಲ್ ಮತ್ತಿತರರು ಪಾಲ್ಗೊಂಡಿದ್ದರು. ಉಪನ್ಯಾಸಕ ಯಲ್ಲಪ್ಪ ಗದಾಡಿ ನಿರೂಪಿಸಿದರು. ಮಯೂರಿ ಪ್ರಾರ್ಥಿಸಿದರು.
ವರದಿ : ಶಿವಾನಂದ ಮುಧೋಳ್.