
ಕಾರ್ಗಿಲ್ ವಿಜಯ ದಿವಸ – ಬಿಜೆಪಿ ಮುಖಂಡರಿಂದ ನಿವೃತ್ತ ಸೈನಿಕರಿಗೆ ಸನ್ಮಾನ.
ಗಜೇಂದ್ರಗಡ:ಸತ್ಯಮಿಥ್ಯ (ಜು-26).
ನಗರದಲ್ಲಿ ಇಂದು ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಭಾರತೀಯ ಜನತಾ ಪಾರ್ಟಿ ರೋಣ ಮಂಡಲದ ವತಿಯಿಂದ ಗಜೇಂದ್ರಗಡ ಸಮೀಪದ ಪುರ್ತಗೇರಿ ಗ್ರಾಮದ ಸೈನಿಕ ನಗರದಲ್ಲಿರುವ ವೀರ ಯೋಧರ ಸ್ಮಾರಕಕ್ಕೆ ಗೌರವ ಸಲ್ಲಿಸಿ ಸೈನಿಕರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿ ರೋಣ ಮಂಡಲದ ಅಧ್ಯಕ್ಷ ಉಮೇಶ್ ಮಲ್ಲಾಪುರ ಮಾತನಾಡಿ ತಮ್ಮ ಜೀವನದ ಕೌಟುಂಬಿಕ ಜವಾಬ್ದಾರಿಗಳನ್ನು ಮರೆತು ದೇಶದ ರಕ್ಷಣೆಯಲ್ಲಿ ತೊಡಗಿರುವ ಯೋಧರ ಕಾರ್ಯ ತುಂಬಾ ಮಹತ್ವದ್ದಾಗಿದ್ದು ಗಡಿ ಕಾಯುವ ಯೋಧರಿಗೆ ಆತ್ಮಸ್ಥೈರ್ಯ ತುಂಬುವುದರೊಂದಿಗೆ ಹುತಾತ್ಮರಾದ ಯೋಧರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಈ ಸಂದರ್ಭದಲ್ಲಿ ನಿವೃತ್ತ ಸೈನಿಕರದ ಎಲ್. ಎಂ. ಮುಧೋಳ, ಎಂ ಎನ್ ವೈದ್ಯ, ಎಸ್ ವೈ ಮೇದಾರ, ಎಚ್. ಬಿ. ಉಪ್ಪಾರ, ಎಸ್. ಬಿ. ಮಾರನಬಸರಿ,ಎಸ್ ಬಿ ಕುರಬನಾಳ,ಎಚ್ ಅಕ್ಬರಲಿಸಾಬ್ ರವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆರ್ ಕೆ ಚೌವ್ಹಾಣ, ಹಿರಿಯ ಮುಖಂಡರಾದ ಶಿವಾನಂದ ಮಠದ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಬಾಲಾಜಿರಾವ್ ಬೋಸ್ಲೆ, ರಮೇಶ ವಕ್ಕರ್, ಎಸ್ ಟಿ ಮೋರ್ಚಾ ಅಧ್ಯಕ್ಷರಾದ ಸಂತೋಷ ಕಡಿವಾಲ ಹಿಂದುಳಿದ ಮೋರ್ಚಾ ಅಧ್ಯಕ್ಷ ರಂಗನಾಥ ಮೇಟಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಸಲೀಂ ಕಲಾದಗಿ ಮುಖಂಡರಾದ ದುರ್ಗಪ್ಪ ಕಟ್ಟಿಮನಿ ಮಲ್ಲಪ್ಪ ಗೂಳಿ ಮಂಡಲ ಕಾರ್ಯದರ್ಶಿ ಸುಗುರೇಶ ಕಾಜಗಾರ, ಕಳಕಪ್ಪ ರಾಠೋಡ, ಮಲ್ಲಪ್ಪ ಕುರಿ, ಕಿರಣ ಕಟ್ಟಿ, ಭೀಮಸಿ ತಳವಾರ, ಲಕ್ಷ್ಮಣ ಬಂಕದ ಅಲ್ಲಾಸಾಬ ನದಾಫ, ರಾಜೇಶ ಹುಲಿಗೇರಿ,ಪರಶು ಗುಡುದೂರ, ಸುಭಾಷ ಹಡಪದ, ಯಮನೂರಪ್ಪ ವಾರಿಕಲ್, ಹುಚ್ಚುಸಾಬ ನದಾಫ ಸೇರಿದಂತೆ ಅನೇಕ ಮುಖಂಡರು ಹಾಗೂ ಮಾಜಿ ಸೈನಿಕರು ಉಪಸ್ಥಿತರಿದ್ದರು.
ವರದಿ : ಸುರೇಶ ಬಂಡಾರಿ.