ವಿದ್ಯಾರ್ಥಿಗಳ ಶೈಕ್ಷಣಿಕ ಬೇಡಿಕೆಗಾಗಿ ಹೆಚ್ಚಿಗೆ ಅನುದಾನ ಮೀಸಲಿಡಿ – ಸಿಎಂ ಸಿದ್ದರಾಮಯ್ಯಗೆ ಎಸ್ ಎಸ್ ಐ ಒತ್ತಾಯ..

ವಿದ್ಯಾರ್ಥಿಗಳ ಶೈಕ್ಷಣಿಕ ಬೇಡಿಕೆಗಾಗಿ ಹೆಚ್ಚಿಗೆ ಅನುದಾನ ಮೀಸಲಿಡಿ – ಸಿಎಂ ಸಿದ್ದರಾಮಯ್ಯಗೆ ಎಸ್ ಎಸ್ ಐ ಒತ್ತಾಯ..
ರೋಣ : ಸತ್ಯಮಿಥ್ಯ (ಮಾ -02).
ಮುಂಬರುವ ರಾಜ್ಯ ಬಜೆಟ್‌ನಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಬೇಡಿಕೆಗಳನ್ನು ಈಡೇರಿಸಲು ಹೆಚ್ಚಿನ ಅನುದಾನ ಮೀಸಲಿಡಬೇಕೆಂದು ಒತ್ತಾಯಿಸಿ ಎಸ್ ಎಫ್ ಐ ಸಂಘಟನೆ ಸದಸ್ಯರು ರೋಣ ಮತಕ್ಷೇತ್ರದ ಶಾಸಕ ಜಿ. ಎಸ್. ಪಾಟೀಲರ ಮೂಲಕ ಸಿಎಂ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ ರಾಜ್ಯದ ಶಿಕ್ಷಣ ವ್ಯವಸ್ಥೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಮಾರ್ಚ್ 07 ರಂದು ಮಂಡನೆಯಾಗಲಿರುವ ರಾಜ್ಯ ಬಜೆಟ್ ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಮೀಸಲಿಟ್ಟು ಶಿಕ್ಷಣ ಕ್ಷೇತ್ರವನ್ನು ಬಲಪಡಿಸಲು ಭಾರತ ವಿದ್ಯಾರ್ಥಿ ಫೆಡರೇಷನ್ ಎಸ್ ಎಫ್ ಐ ವಿದ್ಯಾರ್ಥಿ ಸಂಘಟನೆ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತದೆ.
ದೇಶದಲ್ಲಿ ಕರೋನ ನಂತರದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ತುಂಬಾ ವ್ಯತ್ಯಾಸಗಳಾಗಿದ್ದು LKG ಇಂದ ಉನ್ನತ ಶಿಕ್ಷಣದ ವರೆಗೆ ಇಡಿ ಶಿಕ್ಷಣ ಕ್ಷೇತ್ರವನ್ನು ಅವಲೋಕಿಸಿದಾಗ ಗಮನಾರ್ಹವಾದ ಪರಿಣಾಮವೂ ಶಿಕ್ಷಣ ಕ್ಷೇತ್ರದ ಮೇಲೆ ಬಿರಿರುವುದು ಕಂಡುಬರುತ್ತದೆ. ದಿನದಿಂದ ದಿನಕ್ಕೆ ಶಾಲೆ ಬಿಟ್ಟ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು. ಅವರನ್ನು ಮರಳಿ ಶಾಲೆಗೆ ಕರೆತರಲು ನಿರ್ಧಿಷ್ಟವಾದ ಯಾವುದೇ ಕಾರ್ಯ ಯೊಜನೆಯಿಲ್ಲ. ಇನ್ನೊಂದೆಡೆಗೆ ಸರ್ಕಾರಿ ಮತ್ತು ಮಾತೃಭಾಷೆ ಮಾಧ್ಯಮದ ಶಾಲೆಗಳಗಳನ್ನು ವಿಲೀನದ ಹೆಸರಿನಲ್ಲಿ ಮುಚ್ಚುತ್ತಿರುವುದನ್ನು ಕಾಣುತ್ತೆವೆ. ಕರ್ನಾಟಕದಲ್ಲಿ ಇತ್ತಿಚೆಗೆ ಸುಮಾರು 6ಸಾವಿರಕ್ಕೂ ಅಧಿಕ ಕನ್ನಡ ಶಾಲೆಗಳನ್ನು ವಿಲಿನದ ಹೆಸರಿನಲ್ಲಿ ಮುಚ್ಚಲು ಪ್ರಸ್ತಾಪಿಸಿರುವುದು ಖಂಡನಿಯ..
ಮೂಲಭೂತ ಸೌಕರ್ಯಗಳಾದ, ಶುದ್ಧ ಕುಡಿಯುವ ನೀರು, ಪೌಷ್ಟಿಕ ಆಹಾರ, ಪಠ್ಯ ಪುಸ್ತಕ, ಸಮವಸ್ತ್ರ, ಸುಸಜ್ಜಿತ ಶೌಚಾಲಯ, ಶಾಲಾ ಕಟ್ಟಡಗಳು ಹಾಗೂ ಶಿಕ್ಷಕರು ನೇಮಕ , ಆಟದ ಸಾಮಗ್ರಿಗಳು , ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಬಿಸಿಯೂಟದ ಜೊತೆಗೆ ಮೊಟ್ಟೆ, ಬಾಳೆಹಣ್ಣು, ಶೆಂಗಾ ಚೇಕ್ಕೆ, ಹಾಲು ಇವುಗಳನ್ನು ಸರಿಯಾಗಿ ನಿಡದೆ ಇರುವುದರಿಂದ ಶಾಲಾ ಶಿಕ್ಷಣ ವ್ಯವಸ್ಥೆಯು ಇಂದು ಕುಂಠಿತಗೊಂಡಿದೆ. ಹಾಗಾಗಿ ವಿದ್ಯಾರ್ಥಿಗಳು ಮತ್ತು ಪೋಷಕರು ಕಾರ್ಪೋರೇಟ್ ಖಾಸಗಿ ಶಿಕ್ಷಣ ಸಂಸ್ಥೆಗಳ ಕಡೆ ಮುಖ ಮಾಡುತ್ತಿದ್ದಾರೆ. ಇದನ್ನು ತಡೆಗಟ್ಟಲು ಸರ್ಕಾರಗಳು ಶಿಕ್ಷಣ ಒಂದು ಸಾರ್ವತ್ರಿಕ ವ್ಯವಸ್ಥೆಯಾಗಿ ಉಳಿಸಿಕೊಳ್ಳಲು ವಿಫಲಗೊಂಡಿದೆ.
ರಾಜ್ಯದಲ್ಲಿ ಸುಮಾರು 51ಲಕ್ಷ ಪದವಿ ವಿದ್ಯಾರ್ಥಿಗಳಿಗೆ ಮುದ್ರಿತ ಅಂಕಪಟ್ಟಿ ನಿಡದೆ ಪ್ರತಿ ವಿದ್ಯಾರ್ಥಿಗಳಿಂದ ಮುದ್ರಣ ಅಂಕಪಟ್ಟಿ ನಿಡಲಿಕ್ಕಾಗಿಯೇ ಶುಲ್ಕ ವಸೂಲಾತಿ ಮಾಡಿ ಕೋಟ್ಯಂತರ ರೂಪಾಯಿ ಹಗರಣ ನಡೆಯುತ್ತಿದ್ದು ನಕಲಿ ಅಂಕಪಟ್ಟಿ ಸೃಷ್ಟಿಸುತ್ತಿದ್ದರು ಅದನ್ನು ತಡೆಗಟ್ಟಲು ಸರ್ಕಾರ ಮತ್ತು ಉನ್ನತ ಶಿಕ್ಷಣ ಇಲಾಖೆ ಮುಂದಾಗದಿರುವುದು ಖೇದಕರ.
UGC ಅನ್ನುವ ಸ್ವಾಯತ್ತ ಸಂಸ್ಥೆಯನ್ನು ಹಲ್ಲಿಲದ ಹಾವಿನಂತಾಗಿಸಿ ಅದರ ಸಂಪೂರ್ಣ ಅಧಿಕಾರವನ್ನು ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆ ನಿಯಂತ್ರಿಸುತ್ತಿದ್ದು ಇದು ಶಿಕ್ಷಣವನ್ನು ಕೆಸರಿಕರಣ ಮತ್ತು ಕೇಂದ್ರಿಕರಣಗೊಳಿಸಲು ಸೂಲಭ ದಾರಿ ಮಾಡಿಕೊಂಡಿವೆ. ಅದರ ಅನತಿಯಂತೆಯೆ ಇಂದು UGC ಕರಡನ್ನು ತಿದ್ದುಪಡಿ ಮಾಡಲಾಗಿದೆ. ಹಾಗೆಯೇ ಕರ್ನಾಟಕದಲ್ಲಿ ಒಂಬತ್ತು ವಿಶ್ವವಿದ್ಯಾಲಯಗಳನ್ನು ಮುಚ್ಚುವ ಹುನ್ನಾರ ನಡೆದಿದೆ.
ಕರ್ನಾಟಕದಲ್ಲಿ ವಿದ್ಯಾರ್ಥಿ ಕಾಲೇಜು ಮತ್ತು ವಿಶ್ವವಿದ್ಯಾಲಯಗಳ ನಡುವಿನ ಕೊಂಡಿಯನ್ನು ಕಲಚಿಹಾಕಿ UUCMS ಅನ್ನುವ ಮಧ್ಯವರ್ತಿ ಪೊರ್ಟಲ್ ಅನ್ನು ತರುವ ಮೂಲಕ ವಿದ್ಯಾರ್ಥಿಗಳನ್ನು ವಂಚಿಸುತ್ತಿದ್ದರು ರಾಜ್ಯ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ ಇದನ್ನು ವಿದ್ಯಾರ್ಥಿ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ.
ರಾಜ್ಯದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಮತ್ತು ಉಚಿತ ಶಿಕ್ಷಣವನ್ನು ಉನ್ನತ ಶಿಕ್ಷಣದ ವರೆಗೆ ನೀಡಲು ಎಸ್ ಎಫ್ ಐ ಅನೇಕ ಬಾರಿ ಒತ್ತಾಯಿಸುತ್ತಾ ಬಂದಿದೆ ಜೊತೆಗೆ ಕೊಠಾರಿ ಆಯೋಗದ ಶಿಫಾರಸ್ಸಿನಂತೆ ರಾಜ್ಯ ಸರ್ಕಾರ ತನ್ನ ಬಜೆಟ್ ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಶೇಕಡಾ 30% ರಷ್ಟು ಅನುದಾನವನ್ನು ಮೀಸಲಿಡಲು ಒತ್ತಾಯಿಸುತ್ತದೆ. ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಮಾನಸಿಕವಾಗಿ ಕನಿಷ್ಠ 3500 ಗಳನ್ನ ಆಹಾರ ಭತ್ತ್ಯೆಯಾಗಿ ನೀಡಲು ಒತ್ತಾಯಿಸುತ್ತದೆ. ಸ್ಕಾಲರ್ಶಿಪ್ ಫೆಲೋಶಿಪ್ ರೈತ ವಿದ್ಯಾನಿಧಿ ಕಟ್ಟಡ ಕಾರ್ಮಿಕರ ಮಕ್ಕಳಿಗೆ ನೀಡುವ ಶೈಕ್ಷಣಿಕ ಧನ ಸಹಾಯ ಸಂಶೋಧನಾ ವಿದ್ಯಾರ್ಥಿಗಳಿಗೆ ಫೆಲೋಶಿಪ್ ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಹೀಗೆ ಹತ್ತು ಹಲವಾರು ಬೇಡಿಕೆಗಳನ್ನು ಇಟ್ಟುಕೊಂಡು ಭಾರತ ವಿದ್ಯಾರ್ಥಿ ಫೆಡರೇಶನ್ ಎಸ್ ಎಫ್ ಐ ಸಂಘಟನೆಯು ನಿರಂತರ ಹೋರಾಟ ಮಾಡಿಕೊಂಡು ಸರ್ಕಾರಗಳನ್ನು ಒತ್ತಾಯಿಸುತ್ತಿದ್ದರು ಅವುಗಳನ್ನು ಜಾರಿ ಮಾಡಲು ಈವರೆಗೆ ಯಾವುದೇ ಸರ್ಕಾರಗಳು ಮುಂದಾಗಿಲ್ಲ. ಹಾಗಾಗಿ ಅಹಿಂದ ನಾಯಕ ಜನಪರ ಸರ್ಕಾರ ಜನಪರ ಸರ್ಕಾರವೆಂದು ಹೇಳಿಕೊಳ್ಳುವ ಮಾನ್ಯ ಸಿದ್ದರಾಮಯ್ಯನವರ ಕಾಂಗ್ರೆಸ್ ನೇತೃತ್ವ ಸರ್ಕಾರ ಈ ಕೆಳಗಿನ ಶೈಕ್ಷಣಿಕ ಬೇಡಿಕೆಗಳನ್ನು ರಾಜ್ಯದ ಈ ಬಜೆಟ್ ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡುವ ಮೂಲಕ ವಿದ್ಯಾರ್ಥಿಗಳ ಬೇಡಿಕೆಗಳನ್ನು ಈಡೇರಿಸಬೇಕೆಂದು ಭಾರತ ವಿದ್ಯಾರ್ಥಿ ಫೆಡರೇಶನ್ ಎಸ್ ಎಫ್ ಐ ಗಜೇಂದ್ರಗಡ ತಾಲೂಕ ಸಮಿತಿ ಈ ಮೂಲಕ ತಮ್ಮಲ್ಲಿ ಒತ್ತಾಯಿಸುತ್ತದೆ.
*ಹಕ್ಕೊತ್ತಾಯಗಳು*
1.ಸಮರ್ಪಕ ಸಾರಿಗೆ ವ್ಯವಸ್ಥೆ ಕಲ್ಪಿಸಲು ಹಾಗೂ ಉನ್ನತ ಶಿಕ್ಷಣದವರೆಗೂ(ಎಲ್.ಕೆ.ಜಿ ಯಿಂದ ಪಿಎಚ್.ಡಿವರೆಗೆ) ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಬೇಕು.
2.ರಾಜ್ಯ ಬಜೆಟ್‌ನಲ್ಲಿ ಶಿಕ್ಷಣಕ್ಕಾಗಿ ಕೋಥಾರಿ ಆಯೋಗದ ಶಿಫಾರಸ್ಸಿನಂತೆ ಶೇ.30ರಷ್ಟು ಹಣ ಮೀಸಲಿಡಬೇಕು.
3.ರಾಜ್ಯದಲ್ಲಿರುವ ಸರ್ಕಾರಿ ಹಾಸ್ಟೆಲ್ ವಿದ್ಯಾರ್ಥಿಗಳಿಗೆ (ಪ್ರಸ್ತುತದಲ್ಲಿ ಮೆಟ್ರಿಕ್ ಪೂರ್ವ 1970ರೂ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ 1850ರೂ ಮಾಸಿಕವಾಗಿ ನಿಗದಿಯಾಗಿದೆ) 3500ಕ್ಕೆ ಹೆಚ್ಚಿಸಬೇಕು. ಮತ್ತು ಆರೋಗ್ಯ ಭದ್ರತೆ ಒದಗಿಸಬೇಕು.
4.ದಿನಾಂಕ 28-02-2022 ರಂದು ವಿಶ್ವವಿದ್ಯಾಲಯಗಳು ಅಂಕಪಟ್ಟಿ ನೀಡಬಾರದು ಎಂದು ಅಂದಿನ ಬಿಜೆಪಿ ಸರ್ಕಾರ ಹೋರಡಿಸಿರುವ ಆದೇಶವನ್ನು ವಾಪಾಸ್ ಪಡೆದು ಬಾಕಿ ಉಳಿಸಿಕೊಂಡಿರುವ 50 ಲಕ್ಷ ಅಂಕಪಟ್ಟಿಗಳನ್ನು ತಕ್ಷಣ ರಾಜ್ಯದ ವಿದ್ಯಾರ್ಥಿಗಳಿಗೆ ನೀಡಬೇಕು.
5.ಸರ್ಕಾರಿ ಶಾಲಾ/ಕಾಲೇಜುಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಖಾಲಿ ಇರುವ ಶಿಕ್ಷಕರ, ಉಪನ್ಯಾಸಕ, ತಾಂತ್ರಿಕ ಹುದ್ದೆಗಳು ಹಾಗೂ ಬೋಧಕೇತರ ಹುದ್ದೆಗಳನ್ನು ಭರ್ತಿಮಾಡಬೇಕು.
6.ಶಾಲಾ ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯ(ಶೌಚಾಲಯ, ಶುದ್ಧ ಕುಡಿಯುವ ನೀರು, ಗ್ರಂಥಾಲಯ, ಕ್ರೀಡಾಂಣ, ಕಂಪ್ಯೂಟರ್ ಇತರೆ) ಒದಗಿಸಬೇಕು. ಮತ್ತು ಸರ್ಕಾರ ಮುಚ್ಚಲು ಮುಂದಾಗಿರುವ ಸರ್ಕಾರಿ ಶಾಲೆಗಳನ್ನು ಮುಚ್ಚದಂತೆ ಕ್ರಮವಹಿಸಿ ಶಾಲಾ/ಕಾಲೇಜುಗಳನ್ನು ಬಳಪಡಿಸಬೇಕು.
7.ರಾಜ್ಯದಲ್ಲಿ ಪ್ರತಿಯೊಂದು ಜಿಲ್ಲೆಯಲ್ಲಿ ಸರ್ಕಾರಿ ಕಾನೂನು, ಇಂಜಿನಿಯರಿಂಗ್, ವೈದ್ಯಕೀಯ ಹಾಗೂ ನರ್ಸಿಂಗ್ ಸರ್ಕಾರಿ ಕಾಲೇಜುಗಳನ್ನು ಪ್ರಾರಂಭಿಸಬೇಕು.
8.2006-07ರಿಂದ ಗ್ರಾಮೀಣ ಪ್ರದೇಶದ ೮ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ನೀಡುವ ಯೋಜನೆಯನ್ನು 2018ರಿಂದ ನಿಲ್ಲಿಸಲಾಗಿದೆ. ಅದನ್ನು ಮರುಜಾರಿ ಮಾಡಿ. ೮ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ನೀಡಬೇಕು.
09.ರಾಜ್ಯದಲ್ಲಿ ಸಂಶೋಧನೆ(Phd) ಮಾಡುತ್ತಿರುವ ವಿದ್ಯಾರ್ಥಿಗಳಿಗೆ 25,000 ಮಾಸಿಕ ಆರ್ಥಿಕ ಸಹಾಯ ದನ ನೀಡಬೇಕು.
10.ರಾಜ್ಯದ ಎಲ್ಲಾ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಆಧುನಿತ ತಂತ್ರಜ್ಞಾನದ ಲ್ಯಾಪ್‌ಟ್ಯಾಪ್ ವಿತರಣೆ ಮಾಡಬೇಕು.
11.ರಾಜ್ಯದಲ್ಲಿ ಖಾಸಗಿ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಪೈಕಿ ಮ್ಯಾನೇಜ್ಮೆಂಟ್ನ ಶೀಟುಗಳ ಪಡೆದು ಅಧ್ಯಯನ ಮಾಡುವ ವೃತ್ತಿಪರ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ(ಸ್ಕಾಲರ್ಷಿಪ್) ನೀಡುತ್ತಿಲ್ಲ, ಆದರಿಂದ ರಾಜ್ಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಶಿಷ್ಯವೇತನ(ಸ್ಕಾಲರ್ಷಿಪ್) ನೀಡಬೇಕು.
12.ವಿದ್ಯಾರ್ಥಿಗಳಿಗೆ ನೀಡಬೇಕಾದ ಸ್ಟೇಟ್ ಸ್ಕಾಲರ್‌ಶಿಪ್ ಪೋರ್ಟಲ್ (SSP) ಸರಿಯಾಗಿ ಎಲ್ಲಾ ವಿದ್ಯಾರ್ಥಿಗಳಿಗೆ ಸಿಗಬೇಕು, ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸಹಾಯಧನ, ರೈತ ವಿದ್ಯಾನಿಧಿ ಸ್ಕಾಲರ್ಶಿಪ್ ಮರು ಪ್ರಾರಂಭಿಸಬೇಕು
13.ರಾಜ್ಯದಲ್ಲಿ 9 ಹೊಸ ವಿಶ್ವವಿದ್ಯಾಲಯಗಳನ್ನು ಮುಚ್ಚಲು ರಾಜ್ಯ ಸರಕಾರದ ಸಚಿವ ಸಂಪುಟದ ಉಪ ಸಮಿತಿ ತೀರ್ಮಾನಿಸಿದೆ. ವಿಶ್ವವಿದ್ಯಾಲಯಗಳ್ಳನ್ನು ಮುಚ್ಚದೆ, ವಿಶ್ವವಿದ್ಯಾಲಯಗಳಿಗೆ ಅನುದಾನ ಬಿಡುಗಡೆ ಮಾಡಿ ಬಲಗೊಳ್ಳಿಸಬೇಕು ಎಂದು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗದಗ ಜಿಲ್ಲಾ ಭಾರತ ವಿದ್ಯಾರ್ಥಿ ಫೆಡರೇಷನ್ ಅಧ್ಯಕ್ಷರಾದ ಚಂದ್ರು ರಾಠೋಡ
ಎಸ್ ಎಫ್ ಐ ನ ರಾಜ್ಯ ಉಪಾಧ್ಯಕ್ಷರಾದ ಗಣೇಶ ರಾಠೋಡ, ಅನಿಲ ಆರ್, ಶರಣು ಮಾಟರಂಗಿ, ನಾಗರಾಜ, ಅಭಿಲಾಷ್ ರಾಠೋಡ ಇದ್ದರು.
ವರದಿ : ಚನ್ನು. ಎಸ್.