
ಕೆಇಬಿ ಅಧಿಕಾರಿಗಳ ನಿರ್ಲಕ್ಷ : ಅಪಾಯದಲ್ಲಿ ಸ್ಥಳೀಯರು – ಆಕ್ರೋಶ.
ಗದಗ : ಸತ್ಯಮಿಥ್ಯ (ಜು-30).
ನಗರದ ಹಳೆ ಕಚೇರಿ ಕಿಲ್ಲ ಓಣಿಯಲ್ಲಿ ಮರದ ಗೊಂಬೆಗಳು ವಿದ್ಯುತ್ ತಂತಿಗೆ ತಗಲಿ ವಿದ್ಯುತ್ ಕಂಬಗಳು ಬಿದ್ದು ಸ್ಥಳೀಯರ ವಸ್ತುಗಳು ಹಾನಿಯಾದ ಘಟನೆಯು ಜರುಗಿದೆ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ ಇದರಿಂದಾಗಿ ಕೆಇಬಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ನಿರ್ಲಕ್ಷದಿಂದಾಗಿ ವಿದ್ಯುತ್ ಕಂಬಗಳು ಬಿದ್ದಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಘಟನೆಯ ಕುರಿತಂತೆ ಸ್ಥಳೀಯರು ಕಳೆದ ಹಲವಾರು ದಿನಗಳಿಂದ ಮರದ ಗೊಂಬೆಗಳು ವಿದ್ಯುತ್ ತಂತಿಗೆ ತಗಲಿರುವುದರ ಕುರಿತಂತೆ ಕೆಇಬಿ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ತಿಳಿಸಿದರು ಮರದ ಕೊಂಬೆಗಳನ್ನು ವಿದ್ಯುತ್ ತಂತಿಯ ಕಡೆಯಿಂದ ತೆಗೆಯದೆ ಇರುವದರಿಂದ ಈ ಘಟನೆಯಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಘಟನೆ ನಡೆದ ಸ್ಥಳದಲ್ಲಿ ಪುಟ್ಟ ಮಕ್ಕಳು ದಿನನಿತ್ಯ ಆಟವಾಡುತ್ತಾ ಇರುತ್ತಿದ್ದರು ಅಲ್ಲದೆ ಸಾರ್ವಜನಿಕರು ಸಹ ಅಲ್ಲಿ ನಿಲ್ಲುತ್ತಿದ್ದರು ಅದೃಷ್ಟವಶಾತ್ ಘಟನೆ ನಡೆಯುವ ಸಮಯದಲ್ಲಿ ಯಾವ ಮಕ್ಕಳು ಅಲ್ಲಿ ಆಟ ಆಡುತ್ತಿದ್ದಿಲ್ಲ ಹಾಗೂ ಸಾರ್ವಜನಿಕರು ನಿಂತಿರುವುದಿಲ್ಲ ಏನಾದರೂ ಅನಾಹುತವಾದರೆ ಇದಕ್ಕೆ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳೇ ಕಾರಣ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
” ನಗರದ ಅನೇಕ ಕಡೆಗಳಲ್ಲಿ ವಿದ್ಯುತ್ ಕಂಬಗಳಿಗೆ ಹೊಂದಿಕೊಂಡು ಗಿಡ ಮರಗಳು ಹಾಗೂ ಮುಳ್ಳಿನ ಗಿಡಗಳು ಬೆಳೆದಿವೆ ಗಾಳಿ ಮಳೆಯೂ ಜೋರಾಗಿದ್ದು ಗಾಳಿ ಮಳೆಗೆ ಗಿಡ ಮರದ ಕೊಂಬೆಗಳು ವಿದ್ಯುತ್ ಕಂಬಗಳಿಗೆ ತಾಕಿ ಅನಾಹುತವಾದರೆ ಯಾರು ಕಾರಣ ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸಮಸ್ಯೆಯ ಕುರಿತು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು “
– ಮುಕ್ರಂ ಕಾಜಿ. ಸಾಮಾಜಿಕ ಕಾರ್ಯಕರ್ತರಾದ.
ವರದಿ:ಮುತ್ತು ಗೋಸಲ