ಸ್ಥಳೀಯ ಸುದ್ದಿಗಳು

ಕೆಎಲ್ ಇ ಕಾಲೇಜು ಕ್ರೀಡಾಕೂಟಕ್ಕೆ : ಹುಣಸಿಮರ ನಾಶ,ಸ್ಥಳೀಯ ನಿವಾಸಿಗಳಿಂದ ಆಕ್ರೋಶ.

Share News

ಕೆಎಲ್ ಇ ಕಾಲೇಜು ಕ್ರೀಡಾಕೂಟಕ್ಕೆ : ಹುಣಸಿಮರ ನಾಶ,ಸ್ಥಳೀಯ ನಿವಾಸಿಗಳಿಂದ ಆಕ್ರೋಶ.

ಕುಕನೂರ : ಸತ್ಯಮಿಥ್ಯ ( ಆಗಸ್ಟ್ -12).

ಐತಿಹಾಸಕ ಹಿನ್ನೆಲೆಯುಳ್ಳ ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದ 19ನೇ ವಾರ್ಡ್ ಗುದ್ನೇಶ್ವರ ಮಠದಲ್ಲಿ ನೂರಾರು ವರ್ಷ ಇತಿಹಾಸವಿರುವ ಹುಣಸೆ ಮರಗಳಿದ್ದು, ಅವುಗಳನ್ನು ಯಾರು ಸ್ವಂತಕ್ಕೆ ಉಪಯೋಗಿಸದಂತೆ ಕಾನೂನು ನಿರ್ಬಂಧ ಹೆರಲಾಗಿತ್ತು. ಆದರೆ ಏಕಾಏಕಿ ಕೆಎಲ್ ಇ ಕಾಲೇಜಿನವರು ಯಾವುದನ್ನು ಲೆಕ್ಕಿಸದೆ ಕ್ರೀಡಾ ಕೂಟದ ನೆಪದಲ್ಲಿ ಮರಗಳ ಮಾರಣ ಹೋಮ ಮಾಡಲು ಹೊರಟಿದ್ದಾರೆ ಎಂದು ಗುದ್ನೇಪ್ಪನಮಠದ ಸಮಿತಿ ಅಧ್ಯಕ್ಷ ರುದ್ರಯ್ಯ ವೀರಪಣ್ಣವರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾಧ್ಯಮದೊಂದಿಗೆ ಮಾತನಾಡಿದ ಅವರು ಈ ಮಠಕ್ಕೆ ನೂರಾರು ವರ್ಷಗಳ ಇತಿಹಾಸವಿದ್ದು ಗುದ್ನೇಶ್ವರ ಸ್ವಾಮಿಯು ಈ ಗಿಡಗಳನ್ನು ಬಿತ್ತಿದನೆಂದು, ಅವುಗಳು ಮುಂದೆ ಕಾಲಕ್ರಮೇಣ ಬೃಹತ್ ಮರಗಳಾಗಿ ಬೆಳದಿದ್ದು, ಅವುಗಳಿಂದ ಬರುವ ಹುಣಸಿಹಣ್ಣಿನ ಆದಾಯವನ್ನು ತಾಲೂಕಾಡಳಿತವು ತೆಗೆದುಕೊಳ್ಳುತ್ತಾ, ಜಾತ್ರಾ ಮಹೋತ್ಸವದಂತಹ ಕಾರ್ಯಕ್ರಮಗಳನ್ನು ನಡೆಸುತ್ತಿತ್ತು .

ಮಠಕ್ಕೆ ಸಂಬಂಧಿಸಿದಂತೆ ಸುಮಾರು ಆರರಿಂದ ಎಂಟುನೂರು ಮರಗಳಿದ್ದು, ಅವುಗಳು ಬಹಳ ಹಿಂದಿನವಾಗಿದ್ದು ಕೇಲವೊಂದಿಷ್ಟು ತಾವೇ ನೆಲಕ್ಕೂರುಳಿ, ಇನ್ನೂ ನಾಲ್ಕೈದು ನೂರು ಮರಗಳು ಉಳಿದದ್ದು, ಅವುಗಳನ್ನು ಪ್ರತಿ ವರ್ಷ ಹರಾಜು ಮಾಡಲಾಗುತ್ತದೆ ಎಂದರು.

ಈ ಮರಗಳನ್ನು ಯಾರೇ ಕಡಿಯುವುದಾಗಲಿ, ಹುಣಸಿಹಣ್ಣು ಹರಿಯುವುದಾಗಲಿ, ಮಾಡಿದರೇ ಕಾನೂನು ಕ್ರಮ ಕೈಗೊಳ್ಳಲಾಗುತ್ತಿತ್ತು ಆದರೆ. ತಾಲೂಕಾಡಳಿತ ಹಾಗೂ ಕಮಿಟಿಯವರಿಗೆ ಈ ವಿಷಯವನ್ನು ತಿಳಿಸದೇ ಮರಗಳನ್ನು ನೆಲಕ್ಕೂರುಳಿಸಿದ್ದು ಸಾರ್ವಜನಿಕರ ಹಾಗೂ ಪರಿಸರ ಪ್ರೇಮಿಗಳಿಗೆ ಆಕ್ರೋಶವನ್ನುಂಟು ಮಾಡಿದೆ.

ಈ ಕುರಿತು ಇಲ್ಲಿನ ನಿವಾಸಿಗಳು ಮಾತನಾಡಿ ಈ ಹಿಂದೆ ನಮ್ಮ ಜಮೀನಿನಲ್ಲಿ ನಾವು ಕೃಷಿ ಚಟುವಟಿಕೆ ಕೈಗೊಂಡಾಗ ಸುಖಾ ಸುಮ್ಮನೆ, ಹುಣಸೆಮರಗಳನ್ನು ಕಡಿದಿದ್ದೀರಿ ಎಂದು ಆರ್ ಐ ನಮ್ಮ ಗ್ರಾಮದವರ ಮೇಲೆ ಎಫ್ ಆಯ್ ಆರ್ ದಾಖಲಿಸಿ ನಮ್ಮ ಮೇಲೆ ಕೇಸ್ ಮಾಡಿದ್ದರು, ಆದರೆ ಇಂದು ಕ್ರೀಡಾಕೂಟದ ನೆಪದಿಂದ ಹಾಗೂ ಕೆ ಎಲ್ ಇ ಕಾಲೇಜಿನ ಕೇಲವೊಂದಿಷ್ಟು ಸದಸ್ಯರ ಹಾಗೂ ಮುಖಂಡರ ಮಾತುಗಳನ್ನು ಕೇಳಿ, ಕಾಲೇಜು ಪ್ರಾಚಾರ್ಯರು ಮುಂದೆ ನಿಂತು ಹುಣಸೆಮರಗಳನ್ನು ನೆಲಕ್ಕುರುಳಿಸಿದರು ಸ್ಥಳೀಯ ತಾಲೂಕ ಆಡಳಿತವಾಗಲಿ ಕಾನೂನು ಕ್ರಮ ಕೈಗೊಳ್ಳಲು ಮುಂದಾಗುತ್ತಿಲ್ಲಾ ಎಂದು ದೂರಿದರು.

ಈ ಸರ್ವೆ ನಂಬರ್ ಮೇಲೆ ಕೊರ್ಟ್ ಸ್ಟೇ ಇದ್ದರು ಸಹಿತ ಕಾನೂನು ಉಲ್ಲಂಘನೆಯಲ್ಲಿ ತೊಡಗಿದ್ದಾರೆ, ಮರಗಳನ್ನು ರಕ್ಷಿಸಿ ಫೋಸಿಸಬೇಕಾದ ಇವರೇ ಈ ರೀತಿ ವರ್ತನೆ ತೋರಿಸುವುದು ಸರಿಯೇ ಎಂದು ಪ್ರಶ್ನೀಸಿದರು.

ಈ ಕುರಿತು ಪ್ರಾಚಾರ್ಯ ಅರುಣ ಮಾತನಾಡಿ ನಮ್ಮ ಕಾಲೇಜಿನ ಕ್ರೀಡಾ ಕೂಟದ ಅಂಗವಾಗಿ ಸ್ವಚ್ಚತೆ ಮಾಡುತ್ತಿದ್ದೆವೆ, ನಾವು ಮರಗಳಿಗೆ ಯಾವುದೇ ದಕ್ಕೆಯನ್ನುಂಟು ಮಾಡಿಲ್ಲಾ ಎಂದು ಸಮರ್ಥನೆ ನೀಡಿದರು.

ಈ ಸಂದರ್ಭದಲ್ಲಿ ಸಿದ್ದಲಿಂಗಯ್ಯ ಬಂಡಿ, ಶರಣಯ್ಯ ಹುಣಸಿಮರದ, ಜಗನ್ನಾಥ ಭೋವಿ, ಸಂಗಯ್ಯ ಬಂಡಿ, ರುದ್ರಯ್ಯ ಬಂಡಿ, ರುದ್ರಯ್ಯ ಓಲಿ, ಶರಣಯ್ಯ ಹೂವಿನಾಳ, ರುದ್ರಯ್ಯ ನಾಗಣ್ಣವರ್, ಈರಯ್ಯ ನಾಗಣ್ಣವರ್ ಇದ್ದರು.

ವರದಿ : ಚೆನ್ನಯ್ಯ ಹಿರೇಮಠ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!