ಸ್ಥಳೀಯ ಸುದ್ದಿಗಳು

ಕೊಪ್ಪಳ:ಮೂರು ಜೋಡಿಗೆ ‘ಲೋಕ ಅದಾಲತ್‌’ನಲ್ಲಿ ‘ನವಜೀವನ’

Share News

ಕೊಪ್ಪಳ:ಮೂರು ಜೋಡಿಗೆ ‘ಲೋಕ ಅದಾಲತ್‌’ನಲ್ಲಿ ‘ನವಜೀವನ’ 

ಕೊಪ್ಪಳ:ಸತ್ಯಮಿಥ್ಯ (ಜುಲೈ -14)

ಕೌಟುಂಬಿಕ ಸಮಸ್ಯೆ ಹಾಗೂ ವೈ ಮನಸ್ಸಿನ ಕಾರಣದಿಂದಾಗಿ ದಾಂಪತ್ಯ ಬದುಕಿನಿಂದ ದೂರವಾಗಬೇಕು ಅಂದುಕೊಂಡ ಬಂದಿದ್ದ ಮೂರು ಜೋಡಿಗೆ ‘ಲೋಕ ಅದಾಲತ್‌’ನಲ್ಲಿ ‘ನವಜೀವನ’ ಲಭಿಸಿತು.

ಪ್ರಧಾನ‌ ಜಿಲ್ಲಾ‌ ಹಾಗೂ ಸಷೆನ್ಸ್‌ ನ್ಯಾಯಾಲಯದಲ್ಲಿ ಬುಧವಾರ ನಡೆದ ಅದಾಲತ್‌ನಲ್ಲಿ ವಿಚ್ಚೇದನಕ್ಕಾಗಿ ಹಲವು ವರ್ಷಗಳಿಂದ‌ ನ್ಯಾಯಾಲಯಕ್ಕೆ‌ ಅಲೆಯುತ್ತಿದ್ದ ಮೂರು ಜೋಡಿಗಳನ್ನು ಮನವೊಲಿಸಿ ಒಂದುಗೂಡಿಸಲಾಯಿತು.

ಇದಕ್ಕಾಗಿ ನ್ಯಾಯಾಧೀಶರಾದ ಸಿ.ಚಂದ್ರಶೇಖರ್ ಅವರ ನೇತೃತ್ವದಲ್ಲಿ ಶುಭ ಸಂದರ್ಭ‌ ಒದಗಿಬಂದಿತು. ಮೂವರು ದಂಪತಿಗೆ ಪರಸ್ಪರರಿಂದ ಹೂ‌ಮಾಲೆ ಹಾಕಿಸಿ, ಸಿಹಿ ತಿನ್ನಿಸಿ‌ ಶುಭ ಹಾರೈಸಲಾಯಿತು. ಸೂಕ್ತ ತಿಳಿವಳಿಕೆ, ಹೊಂದಾಣಿಕೆ, ಕೌಟುಂಬಿಕ‌ ಜೀವನ ಕುರಿತಂತೆ ಚಂದ್ರಶೇಖರ್ ಅವರ ಜೋಡಿಗೆ ಸಲಹೆಗಳನ್ನು ನೀಡಿದರು.

ಇದೇ ವೇಳೆ‌ ಅಂಗವಿಕಲನಾಗಿದ್ದ ತಂದೆಯನ್ನು‌ ನೋಡಿಕೊಳ್ಳದೆ ತಿರಸ್ಕರಿಸಿದ್ದ ಮಕ್ಕಳ ಮನವೊಲಿಸಿ ಹಿಟ್ನಾಳ ಮೂಲದ ತಂದೆ ಮಕ್ಕಳನ್ನು ಒಂದುಗೂಡಿಸಲಾಯಿತು. ಮಕ್ಕಳಿಗೆ‌ ಬುದ್ದಿ ಹೇಳಿ, ತಂದೆ ತಾಯಿಯರನ್ನು ನೋಡಿಕೊಳ್ಳುವುದು‌ ಮಕ್ಕಳ‌ ಕರ್ತವ್ಯವೆಂದು ತಿಳಿಸಿ ಪ್ರಕರಣ ಇತ್ಯರ್ಥಪಡಿಸಲಾಯಿತು.

ಹೀಗೆ ನೂರಾರು ಪ್ರಕರಣಗಳನ್ನು‌ ರಾಜಿ ಸಂಧಾನದ‌ ಮೂಲಕ‌ ಬಗೆಹರಿಸಲಾಯಿತು. ನ್ಯಾಯಾಲಯದ ಈ ನಡೆ ನ್ಯಾಯಕ್ಕಾಗಿ ಅಲೆಯುತ್ತಿದ್ದ‌ ಕಕ್ಷಿದಾರರ ಮೊಗದಲ್ಲಿ‌ ಮಂದಹಾಸ‌ ಮೂಡಿಸಲಾಯಿತು. ಈ ಮೂಲಕ ಅನಗತ್ಯ ಅಲೆದಾಟ, ಖರ್ಚು ವೆಚ್ಚಗಳು ತಪ್ಪುವಂತೆ ಮಾಡಲಾಯಿತು.

ಪ್ರಧಾನ‌ ಜಿಲ್ಲಾ ಕೌಟುಂಬಿಕ ನ್ಯಾಯಾಧೀಶರಾದ ಸರಸ್ವತಿದೇವಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಲಕಾರಿ ರಾಮಪ್ಪ‌ ಒಡೆಯರ್, ಜಿಲ್ಲಾ‌ ವಕೀಲರ ಸಂಘದ ಅಧ್ಯಕ್ಷ ಎ.ವಿ.ಕಣವಿ ಸೇರಿದಂತೆ ಪಾಲ್ಗೊಂಡಿದ್ದಾರೆ.

ವರದಿ : ಮಲ್ಲಿಕಾರ್ಜುನ ಹಿರೇಮಠ್.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!