
ಆಧಾರ ಕಾರ್ಡ್ ತಿದ್ದುಪಡಿ ಕೇಂದ್ರ ಪುನಃ ಪ್ರಾರಂಭಿಸದಿದ್ದರೆ ಹೋರಾಟ – ಭೀಮ್ ಆರ್ಮಿ.
ಗಜೇಂದ್ರಗಡ : ಸತ್ಯ ಮಿಥ್ಯ (ಜು-31).
ಕಳೆದ ಆರು ವರ್ಷಗಳ ಹಿಂದಿನಿಂದಲೂ ಅಂಚೆ ಕಚೇರಿಯಲ್ಲಿ ಆಧಾರ ತಿದ್ದುಪಡಿ ಕೇಂದ್ರ ಕಾರ್ಯನಿರ್ವಹಿಸಲು ಸರ್ಕಾರ ಆದೇಶ ಹೊರಡಿಸಿದ್ದರು. ಗಜೇಂದ್ರಗಡ ಅಂಚೆ ಕಛೇರಿಯಲ್ಲಿ ಮಾತ್ರ ಸಾರ್ವಜನಿಕ ಹಿತ ಕಾಪಾಡುವ ಸಂಘಟನೆಯವರು ಪ್ರತಿಭಟನೆ ಮಾಡಿದ ಸಂದರ್ಭದಲ್ಲಿ ಮಾತ್ರ ಕೆಲವು ದಿನಗಳವರೆಗೆ ಕಾರ್ಯಾರಂಭ ಮಾಡಿ. ನಂತರದ ದಿನಗಳಲ್ಲಿ ಇಲ್ಲದ ಸಬೂಬ್ ಹೇಳಿ ಆಧಾರ್ ಕಾರ್ಡ್ ತಿದ್ದುಪಡಿ ಕೇಂದ್ರವನ್ನು ಬಂದ್ ಮಾಡುವಂತಹ ಕೆಲಸ ಮಾಡುತ್ತಿದ್ದಾರೆ ಎಂದು ಭೀಮ್ ಆರ್ಮಿ ತಾಲೂಕಾಧ್ಯಕ್ಷ ಕಳಕಪ್ಪ ಪೋತಾ ನುಡಿದರು.
ಅವರು ಗಜೇಂದ್ರಗಡ ಅಂಚೆ ಕಛೇರಿಯಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ ಕೇಂದ್ರ ಪುನಃ ಪ್ರಾರಂಭಿಸಲು ಮನವಿ ಸಲ್ಲಿಸಿ ಮಾತನಾಡುತ್ತ.ಗಜೇಂದ್ರಗಡ ನಗರದ ಸುತ್ತಮುತ್ತಲು ಕೆಲವೇ ಕಿಲೋಮೀಟರ್ ಅಂತರದಲ್ಲಿ ಅನೇಕ ಗ್ರಾಮಗಳಿದ್ದು ಅವರಿಗೆ ಅಂಚೆ ಕಛೇರಿ ಆಧಾರ ತಿದ್ದುಪಡಿ ಕೇಂದ್ರ ಅನುಕೂಲವಾಗಿತ್ತು ಆದರಿಗ ಅದನ್ನು ಬಂದ್ ಆಗಿದ್ದರಿಂದ ಗ್ರಾಮೀಣ ಜನತೆ ಬಹಳಷ್ಟು ತೊಂದರೆಗಿಡಾಗಿದ್ದಾರೆ. ಕೂಡಲೇ ಆಧಾರ್ ತಿದ್ದುಪಡಿ ಕಚೇರಿ ತೆರೆಯದೆ ಇದ್ದರೆ ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದರು.
ಅಂಚೆ ಕಛೇರಿ ಇನ್ಸ್ಪೆಕ್ಟರ್ ವೆಂಕಟೇಶ ರೆಡ್ಡಿ ಕೊಳ್ಳಿ ಮನವಿ ಸ್ವೀಕರಿಸಿ ಮನವಿ ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಬಸವರಾಜ ಕಾಳೆ, ಉಮೇಶ ಕಲಮಶೆಟ್ಟಿ, ನೀಲಪ್ಪ ಚಲವಾದಿ, ವೆಂಕಟೇಶ್ ಸಿಂಗ್ಲಿ, ರಾಘವೇಂದ್ರ ಸಿಂಗ್ಲಿ,ಆನಂದ ಸಿನ್ನೂರ, ಕಾಸಿಂಸಾಬ್ ಉಟಗುರ, ಕಾಸಿಂಸಾಬ್ ಮುಚ್ಚಾಲಿ, ಇಮಾಮ ಹುಸೇನ್ ಒಂಟಿ,ಪಂಪಣ್ಣ ವನ್ನಾಲ, ಕಿರಣ ಮಾದರ, ಕನಕಪ್ಪ ಚಲವಾದಿ, ನೀಲಪ್ಪ ಚಲವಾದಿ, ಪ್ರಮೋದ ಛಲವಾದಿ, ಬುಡ್ಡಾ ಆರಗಿದ್ದಿ, ಶಂಕ್ರಪ್ಪ ಕಲಬುರ್ಗಿ, ದುರ್ಗಪ್ಪ ಮಂಣ್ಣೋಡ್ಡರ,ಹರ್ಷ ಕಾಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ : ಸುರೇಶ ಬಂಡಾರಿ.