ಟ್ರೆಂಡಿಂಗ್ ಸುದ್ದಿಗಳು

ಹನುಮ ಸ್ವರವೇ ಹಿಂದುಗಳ ಪವಿತ್ರತೆ ಸಾರ- ಹಾರಿಕಾ.

Share News

” ಹನುಮ ಸ್ವರವೇ ಹಿಂದುಗಳ ಪವಿತ್ರತೆ ಸಾರ- ಹಾರಿಕಾ “

ಸಾವಳಗಿ:ಸತ್ಯಮಿಥ್ಯ (ಜ -03)

ನಿಭ೯ಯತ್ವ ಗುಣಸಂಧಾನ ಹೊಂದಿರುವ ಹನುಮಾನ ಶ್ರೇಷ್ಠತೆ ಸರಣಿಯ ಅನ್ಯೋನ್ಯತೆ ದೇವ. ಉದಾತ್ತ ಪರಿಮಳಯುತ ವಿವೇಚನಾ ಪಳಿಕೆಯುಳ್ಳ ಹನುಮ ಉತ್ಕಟ ವಾಕ್ ಪಟುವು ಕೂಡಾ.ವಿದ್ವತ್ತಿನ ಅಗಾಧ ರೂಪ ಲಾವಣ್ಯವೇ ಹನುಮನ ಭಾವಾಂತರದಲ್ಲಿ ನಿಷ್ಕಲ್ಮಶವಾಗಿ ಮಿನುಗಿದೆ. ಕಾರಣ ಹಿಂದುಗಳ ನರನಾಡಿ ಮಿಡಿತಗಳಲ್ಲಿ ಹನುಮನ ಸ್ವರರಾಗದಲ್ಲಿ ರಾಮನ ಪ್ರತಿಬಿಂಬಿಸುವ ಭಕ್ತಿ ಸಂಚಲನ ಎಚ್ಚೇಥವಾಗಿ ಹರಿದಾಡಲಿ ಎಂದು ಯುವ ವಾಗ್ಮಿ ಹಾರಿಕಾ ಮಂಜುನಾಥ ಹೇಳಿದರು.

ಜಮಖಂಡಿ ತಾಲೂಕಿನ ಸಾವಳಗಿ ಸಮೀಪದ ಚಿಕ್ಕಪಡಸಲಗಿ ಗ್ರಾಮದಲ್ಲಿ ಐತಿಹಾಸಿಕ ಹನುಮಾನ ಮಂದಿರ ಆವರಣದಲ್ಲಿ ಜೈ ಹನುಮಾನ ಯುವ ಮಿತ್ರ ಮಂಡಳಿ ಆಶ್ರಯದಲ್ಲಿ ಶ್ರೀ ಮಾರುತಿ ದೇವರ ಕಾತಿ೯ಕೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ “ಧರ್ಮ ಮತ್ತು ಸಂಸ್ಕೃತಿ” ಉಪನ್ಯಾಸ ಕಾರ್ಯಕ್ರಮದಲ್ಲಿ ಹನುಮನ ಚರಿತೆ ಹಾಗೂ ಹಿಂದು ಧರ್ಮದ ಸಂಸ್ಕೃತಿ, ಸಂರಕ್ಷಣೆ ಕುರಿತು ಅವರು ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.

ಹನುಮನಿಲ್ಲದಿದ್ದರೆ ನಮ್ಮ ಭಾರತೀಯ ಪರಂಪರೆ, ಸಂಸ್ಕೃತಿ ಪರಿಸ್ಥಿತಿ ಏನಾಗುತ್ತಿತ್ತೆಂದು ಸೂಕ್ಷ್ಮತೆಯಿಂದ ನಾವೆಲ್ಲರೂ ಇಂದು ಮನಗಾಣಬೇಕಾಗಿದೆ.ಸಮೃದ್ಧ ಶಕ್ತಿಬಲದ ಹನುಮನ ಕಾಯಕ ಕೈಂಕರ್ಯ ಹಾಗೂ ಶ್ರೀ ರಾಮನ ಭಕ್ತಿ ಶಕ್ತಿ ಭಾವ ಎಂದೂ ಮರೆಯಲಾಗದು.ಅವರು ಹಿಂದು ಧರ್ಮಕ್ಕೆ ಜಯದೀಕ್ಷೆ ನೀಡಿದ ಮಹಾನು ಜೀವಗಳು ಎಂದರು. ಹಿಂದುಗಳ ಹೃದಯದಲ್ಲಿ ಹನುಮ ಪ್ರತಿಷ್ಟಾಪನೆಗೊಂಡಿದ್ದಾನೆ.ಈ ದೇವ ಬಲದ ಸಾಮಥ್ರ್ಯ ಭಕ್ತಿಯಿಂದ ಆರಾಧಿಸಿ ಕೊಂಡಾಡುತ್ತೆವೆ.ಜ್ಞಾನದೇವ ಹನುಮನ ದಿವ್ಯತೆ ಆಲೋಚನೆಗಳು ಪರಮ ಪವಿತ್ರವಾಗಿವೆ.ಹನುಮನ ಸಾಮಥ್ರ್ಯಯಾರಿಂದಲೂ ಮೀರಿಸಲಾಗದು. ಅಂಥ ದೊಡ್ಡ ಶಕ್ತಿ ಬಲದ ಸಾಮಥ್ರ್ಯ ಹೊಂದಿದ್ದಾನೆ.ಇದನ್ನು ಶ್ರೀರಾಮಚಂದ್ರರೇ ಕೊಂಡಾಡಿದ್ದಾರೆ. ಪವನಸುತ ತನ್ನ ಬಲಶಾಲಿ ಯಾರ ಮುಂದೆಯೂ ಅನಗತ್ಯ ಪ್ರಯೋಗ ಮಾಡಲಿಲ್ಲ. ಹನುಮ ಬಲದಿಂದ ಅದಂಥ ಕೆಲಸಗಳು ಅಗಾಧ. ರಾಮನಿಗೆ ಪುನರುಜ್ಜೀವನದ ಯಶಸ್ಸು ತಂದು ಕೊಟ್ಟಿದ್ದಾನೆ. ಗೀತಾಮಾತೆಯನ್ನು ಸಂಕಷ್ಟದಿಂದ ಪಾರು ಮಾಡಿದ್ದಾನೆ.ಜೊತೆಗೆ ಲಕ್ಷ್ಮಣನ್ನು ಉಳಿಸಿಕೊಂಡು ರಾಮನಿಗೆ ನೆಮ್ಮದಿ ಪ್ರಾಪ್ತಿ ಮಾಡಿದ್ದಾನೆ.ರಾವಣನ ಮುಂದೆ ಎದೆಯೊಡ್ಡಿ ದಿಟ್ಟತೆ ತೋರಿದ್ದಾನೆ. ಹೀಗೆ ಸದಾ ಆಭಯ ಹಸ್ತ ಚಾಚಿರುವ ದಿಟ್ಟ ಮಹಾನ ಸಾಹಸವಂತ “ಬಾಹು ವೀರಣ್ಣ ಹನುಮನ” ಬುಜಬಲದ ಶಕ್ತಿ, ಸಾಮಥ್ರ್ಯ ನಿಜಕ್ಕೂ ವಣಿ೯ಸಲಾಸಾಧ್ಯ ಎಂದು ಹಾರಿಕಾ ಬಣ್ಣಿಸಿದರು.

ಮೂರು ಲೋಕ ಬೆಳಗಿಸಿರುವ ಹನುಮನ “ಸುಪ್ತ ಜ್ಞಾನ ಸಾಗರದ” ಮಹಿಮೆಯಲ್ಲಿ ಅಪಾರ ವೈವಿಧ್ಯವಿದೆ. ರಾಮನ ಮೇಲೆ ಭಕ್ತಿಪ್ರೇಮ ಭಾವ ಇರಿಸಿದ ಹನುಮ ಯಾವುದೇ ಸಮಯದಲ್ಲಿ ವಿಭಿನ್ನ ಅವತಾರ ತಾಳುವ ಸಾಮಥ್ರ್ಯ ಶಕ್ತಿಯ ಬಲಾಢ್ಯತೆ ಕೌಶಲ್ಯವಿತ್ತು.ರಾಮನೆ ನಾಯಕನಾಗಿರುವ ರಾಮಾಯಣ ಕಥಾ ಹಂದರದಲ್ಲಿ ಹನುಮನೇ ನಾಯಕನಾಗಿ ಕಾಣುತ್ತಾನೆ. ಸುಂದರೆಂಬ ಪದಕ್ಕೆ ವಿಶಿಷ್ಟತೆಯಿದೆ.ಕಿಷ್ಕಿಂಧೆಕಾಂಡ-ಸುಂದರಕಾಂಡದಲ್ಲಿ ವಾಲ್ಮೀಕಿ ಈ ಬಗ್ಗೆ ಸುಂದರವಾಗಿ ನಿರೂಪಿಸಿದ್ದಾರೆ. ಹನುಮ ಸೂಕ್ಷ್ಮವಾಗಿ ಅಹಿಮಾ,ಗರಿಮಾದೊಂದಿಗೆ ಗೋಚರಿಸುವ ಮೂಲಕ ಭೀಮ ರೂಪ ತಾಳಿ ವಿರಾಟ್ ಕೂಡಾ ಅಗಿದ್ದಾನೆ. ಅವೆಲ್ಲವೂ ಧರ್ಮ ರಕ್ಷಣೆಗಾಗಿ ಎಂಬುದು ವಿಶೇಷ ಎಂದರು.

ಹನುಮ ಅಪ್ಪಟ ಕನ್ನಡಿಗ…ರಾಮ ಕಾಲ್ಪನಿಕ ಪುರುಷ ಅಲ್ಲ ಐತಿಹಾಸಿಕ ಪುರುಷ !!! ಹನುಮಂತ ದೇವ ಅಪ್ಪಟ ಕನ್ನಡದ ಕುವರ,ಬಲವಾನ ಕನ್ನಡಿಗ. ಅತನ ಜನ್ಯದಿಂದಲೇ ಇಡೀ ರಾಮಾಯಣ ರಕ್ಷಣೆವಾಗಿದೆ. ಅಸಾಮಾನ್ಯ ರಘು ಕುಲವಂಶ ಉಳಿಸಿದರು.ಇಲ್ಲದಿದ್ದರೆ ರಘುಕುಲ ಮರೆವಾಗುತ್ತಿತ್ತು. ರಾಮ ಕಾಲ್ಪನಿಕ ಪುರುಷರಲ್ಲ ಅವರೊಬ್ಬರು ಸಂಯಮತೆ ಭಾವ, ನೀತಿಯುಳ್ಳ ಐತಿಹಾಸಿಕ ಪುರುಷ ಎಂದು ಹಾರಿಕಾ ಮಂಜುನಾಥ ಅಭಿಪ್ರಾಯಿಸಿದರು.

ಇಂದಿನ ದಿನಗಳಲ್ಲಿ ಹಿಂದುಗಳು ಜಾಗೃತಗೊಂಡು ಹಿಂದು ಧರ್ಮದ ಜಾಗೃತಿ ಮೂಡಿಸಲು ಮುಂದಾಗಬೇಕು.ಆ ನಿಟ್ಟಿನಲ್ಲಿ ಹನುಮನ ಜಾಗೃತಿಯೊಂದಿಗೆ ಧರ್ಮಕ್ಕೆ ಜಯವನ್ನು ತಂದುಕೊಡಲು ಶ್ರಮಿಸಬೇಕು. ಮಲಗಿರುವ ಸಮಾಜವನ್ನು ಬಡಿದ್ದೇಬಿಸುವ ಕೆಲಸವಾಗಬೇಕು.ಜಗತ್ತಿಗೆ ಹಿಂದು ಸಮಾಜದ ಅದಮ್ಯ ಚೇತನ, ಶಕ್ತಿ ತೋರಿಸಲು ಸಂಕಲ್ಪ ಗೈಯಬೇಕು. ಹಿಂದುಗಳು ಮಲಗಿದರೆ ಕುಂಭಕರ್ಣ, ಎದ್ದರೆ ವೀರಭದ್ರ ಎಂಬುದನ್ನು ಜಗಕ್ಕೆ ಸಾಬೀತು ಪಡಿಸುವ ದೃಢತೆಯನ್ನು ಸಾರಬೇಕು. ದೇಶ ಮತ್ತು ಧರ್ಮ ಯಾವಾಗ ವಿನಾಶದ ಅಂಚಿನಲ್ಲಿ ಸಿಲುಕತ್ತದೆಯೋ ಅಗೆಲ್ಲ ದೇಶ-ಧರ್ಮ ರಕ್ಷಣೆಗೆ ಶಿಷ್ಟರನ್ನು ರಕ್ಷಿಸಿ ದುಷ್ಟರನ್ನು ಸಂಹರಿಸಲು ಯುಗ ಯುಗಕ್ಕೂ ಭಗವಂತ ಅವತರಿಸುತ್ತಾನೆ ಎಂದು ಕೃಷ್ಟ ಪರಮಾತ್ಮ ನುಡಿದಿದ್ದಾರೆ. ಅಂಥ ಧರ್ಮ ಈಗ ಅವತರಿಸಲಿ ಎಂದರು.

ಇಂದಿನ ಯುವ ಮಕ್ಕಳಿಗೆ ನಮ್ಮ ಸಂಸ್ಕೃತಿ, ಹಬ್ಬ ಹರಿದಿನಗಳ ಆಚರಣೆ ಬಗ್ಗೆ ಅರಿವು ಮೂಡಿಸಬೇಕು.ಈ ಬಗ್ಗೆ ಮಹತ್ವ ಹೇಳಿಕೊಡುವುದು ಅಗತ್ಯವಿದೆ. ಹನುಮ ದೇವರನ್ನು ನೆನೆಯುವದರಿಂದ ಬುದ್ಧಿ, ಬಲ,ಯಶಸ್ಸು, ಧೈರ್ಯ,ನಿರ್ಭಯತ್ವ,ಆರೋಗತ್ವ, ವಾಕ್ ಪಟುತ್ವ ಬರುತ್ತದೆ. ಆ ದಿಸೆಯಲ್ಲಿ ಪಾಲಕ,ಪೋಷಕರು ಮಕ್ಕಳಿಗೆ ಸರಿಯಾದ ದಾರಿ ತೋರಿಸಬೇಕು.ಧರ್ಮ ಉಳಿದರೆ ನಮ್ಮತನದ ಸಂಸ್ಕೃತಿ ಉಳಿಯುತ್ತದೆ. ಹಿಂದು ಧರ್ಮ ಅತ್ಯಂತ ಉತ್ಕ್ರಷ್ಠ ಶ್ರೇಷ್ಠ ಧರ್ಮವಾಗಿದೆ. ಆದರೆ ಇಂದಿನ ಶಿಕ್ಷಣ ಪದ್ಧತಿಯಿಂದ ಧರ್ಮ ಜಾಗೃತಿ ಮೂಡಿಸಬೇಕಾಗಿರುವಂಥ ಪರಿಸ್ಥಿತಿ ಈಗ ಎದುರಾಗಿದೆ ಎಂದರು.

ಕಪೀಲ್ ಸೀಬಲ್ ನಂಥವರು,ಬುದ್ಧಿ ಜೀವಿಗಳು ಎಂದು ಹೇಳಿಕೊಳ್ಳುವವರು ಶ್ರೀರಾಮನ ಜನ್ಮದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದನ್ನು ಸಮಾಜ ಗಮನಿಸಿದೆ.ಆದ್ದರಿಂದಲೇ ಅಂಥಹ ವಿಕೃತಿಗಳಿಗೆ ಉತ್ತರಿಸಲು ಧರ್ಮದ ಗಟ್ಟಿತನ ಜಾಗೃತಿಯಾಗಬೇಕಿದೆ. ಅಯೋಧ್ಯೆಯಲ್ಲಿ ಭವ್ಯೋತಿ ಶ್ರೀರಾಮ ಮಂದಿರ ತಲೆಯತ್ತಿದೆ. ಕಾಶಿ ವಿಶ್ವನಾಥ, ಮಥುರಾ ಶ್ರೀ ಕೃಷ್ಣ ಮಂದಿರಗಳು ನಿಮಾ೯ಣ ಬಾಕಿಯಿದೆ.ಮುಂದಿನ ದಿನಗಳಲ್ಲಿ ಅವುಗಳು ನಿಮಾ೯ಣಗೊಂಡು ಮಿನುಗಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಹನುಮಾನ ಚಾಲೀಸಾ ಹಾಗೂ ಮಹಷಿ೯ ವಾಲ್ಮೀಕಿ ರಾಮಾಯಣದಲ್ಲಿ ಹನುಮಂತ ದೇವರ ಪರಾಕ್ರಮ,ದೈವ ಭಕ್ತಿ, ದಾಸ್ಯ ಮಹಿಮೆಯನ್ನು ತಿಳಿಸುತ್ತಾ, ಹನುಮ ಜಪ, ರಾಮ ಜಪದೊಂದಿಗೆ ವಿಶೇಷ ಪೂಜಾದಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುವ ಮೂಲಕ ಸಮಾಜ ಜಾಗೃತಿಗೊಳಿಸಬೇಕು, ಹನುಮಂತ ದೇವರು ಜನಿಸಿದ್ದು ನಮ್ಮ ಕರುನಾಡಿನಲ್ಲಿ. ಗಂಗಾವತಿಯ ಅಂಜನಾದ್ರಿ ಬೆಟ್ಟದಲ್ಲಿ ಹನುಮನ ಅವತಾರವಾಗಿದೆ. ಮುಂದಿನ ಪೀಳಿಗೆಗೆ ನಾಡು,ನುಡಿ,ಧರ್ಮಗಳ ಆಚರಣೆ ಮಹತ್ವ ತಿಳಿಸುವ

ಕೆಲಸವಾಗಬೇಕಿದೆ. ಇದರಿಂದ ಇನ್ನಷ್ಟು ಸದೃಢ, ಬಲಿಷ್ಠ ಸಮಾಜ ಉದಯಿಸುತ್ತದೆ. ಧರ್ಮದ ಬಗ್ಗೆ,ಹಿಂದುಗಳ ಬಗ್ಗೆ ಮಾತನಾಡುವರಿಗೆ ಸರಿಯಾಗಿ ಉತ್ತರಿಸಲು ಮಕ್ಕಳಿಗೆ ಸಾಧ್ಯವಿದೆ. ಸಮಾಜ ಹಾಗೂ ಸಂಸ್ಕೃತಿ ರಕ್ಷಣೆ ಪ್ರತಿಯೊಬ್ಬರ ಹೊಣೆಯಾಗಿದೆ ಎಂದರು.

ಶಾಂತಚಿತ್ತರಾಗಿ ಉಪನ್ಯಾಸ ಆಲಿಸಿದ ಜನ ! ಹಾರಿಕಾಳ ಉಪನ್ಯಾಸ ಆರಂಭವಾಗುತ್ತಿದ್ದಂತೆ ಅಪಾರ ಜನಸಂಖ್ಯೆಯಲ್ಲಿ ಸೇರಿದ ಹನುಮ ದೇವರ ಅಂಗಳ ಮೆಲ್ಲಗೆ ನಿಶಬ್ದವಾಯಿತು. ಸುಮಾರು ಒಂದೂವರೆ ಗಂಟೆಗಳ ಕಾಲ ನಿರಂತರ ಅಬ್ಬರದ ವಾಗ್ಝರಿ ಮೂಲಕ ಹಾರಿಕಾ ಉಪನ್ಯಾಸದಲ್ಲಿ ನುಡಿಮುತ್ತುಗಳ ಭರ್ಜರಿ ಸಿಂಚನ ಹರಿಸಿದರು. ಸಹಸ್ರಾರು ಸಂಖ್ಯೆಯಲ್ಲಿದ್ದ ಜನಸ್ತೋಮ ಕ್ಕಿಂಚಿತ್ತು ಪಿಟುಕು ಅಲುಗಾಡದೆ ಹಾರಿಕಾ ಸಿಡಿಸಿದ ಆಧ್ಯಾತ್ಮಿಕ ಮಾತಿನ ಭರಾಟೆ ಜೋಶ್ ಏಕಚಿತ್ತದಿಂದ ಕಣ್ತುಂಬಿಸಿಕೊಂಡು ಆಲಿಸಿದ್ದು ವಿಶೇಷವಾಗಿ ಕಂಡು ಬಂತು.ಭಕ್ತಿಭಾವ ಅನವರಣಿಸಿತು.

ಇದೇ ಸಂದರ್ಭದಲ್ಲಿ ಬಬಲಾದಿಮಠದ ಪೂಜ್ಯರಾದ ಸಂಗಮೇಶ ಬಬಲಾದಿಮಠ, ಹನುಮ ದೇವರ ಆರ್ಚಕ ಹನುಮಂತ ಪೂಜಾರಿ, ಕಾರ್ಯಕ್ರಮ ಸಂಘಟಕರಾದ ಬಸು ನ್ಯಾಮಗೌಡ, ಗಂಗಪ್ಪ ದಾನಗೌಡ, ಶಿವು ಮಠೋಳಿ, ಭರತೇಶ ಕಡಕೋಳ, ಪ್ರಕಾಶ ದಾನಗೌಡ, ಸುರೇಶ ದಾನಗೌಡˌ ಸದಾಶಿವ ಹಂಚಿನಾಳ, ಹನಮಂತ ಅಂಬಿ, ಪರಪ್ಪ ಗಡೇಣಿ, ಸಂಜು ಸಂತಿ, ಬಾಳು ತೇಲಿ ಸೇರಿದಂತೆ ಗ್ರಾಮದ ಪ್ರಮುಖರು, ಗ್ರಾಮಸ್ಥರು ಇನ್ನಿತರರಿದ್ದರು. ಶಿಕ್ಷಕರಾದ ಎಸ್.ಟಿ.ಸಂತಿ,ಎಸ್.ಆರ್.ಪವಾರ ನಿರೂಪಿಸಿದರು. ಸುರೇಶ ಹಂಚಿನಾಳ ವಂದಿಸಿದರು.

ವರದಿ : ಸಚಿನ್ ಜಾದವ್.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!