ಲಿಂಗಸೂಗೂರು : ಶರಣ ಶ್ರೀ ಶಂಕರ ದಾಸಿಮಯ್ಯನವರ ಜಯಂತೋತ್ಸವ ಆಚರಣೆ
ಲಿಂಗಸೂಗೂರು:ಸತ್ಯಮಿಥ್ಯ ( ಆಗಸ್ಟ್ -05).
ನಗರದಲ್ಲಿಂದು ನವಲೆ ಜಡೆಯ ಶಂಕರಲಿಂಗ ದೇವಸ್ಥಾನದಲ್ಲಿ ಶರಣ ಶಂಕರ ದಾಸಿಮಯ್ಯನವರ ಜಯಂತೋತ್ಸವ ಆಚರಿಸಲಾಯಿತು.
ಬಸವಾದಿ ಶರಣರ ಸಮಕಾಲಿನವರಾಗಿದ್ದರು ವಚನಗಳಿಂದ ಮತ್ತು ಸಾಂಸ್ಕೃತಿಕ ಧಾರ್ಮಿಕವಾಗಿ ಉತ್ತಮವಾದ ಸಮಾಜದ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ವಸಂತ್ ಕುಮಾರ್ ಬಣಗಾರ್ ಹೇಳಿದರು.
ಸುಕ್ಷೇತ್ರ ಶ್ರೀನವಲೆ ಶಂಕರಲಿಂಗ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯು ಶ್ರಾವಣ ಮಾಸದ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಶ್ರೀಜಡೆಯ ಶಂಕರಲಿಂಗ ದೇವಸ್ಥಾನದಲ್ಲಿ ಪ್ರತಿಯೊಂದು ಕಾರ್ಯಕ್ರಮವು ಹೆಚ್ಚಿನ ರೀತಿಯಿಂದ ನಡೆಯಬೇಕು ಸಾಂಸ್ಕೃತಿಕ ಸಾಹಿತ್ಯಿಕ, ಧಾರ್ಮಿಕ ಕಾರ್ಯಕ್ರಮಗಳು ಜರುಗಿದರೆ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದು ಶಂಕರಲಿಂಗೇಶ್ವರ ದೇವರ ಕೃಪೆಗೆ ಪಾತ್ರರಾಗಬೇಕೆಂದರು ಮತ್ತು ನೂಲಿಗೆ ಬಣ್ಣ ಹಾಕುವವರು ಬಣಗಾರ ಸೂಜಿ ಕಾಯಕದಿಂದ ಪ್ರಸಿದ್ಧಿಯಾದವರು ಎಂದು ಆನಂದ್ ಬಾರಿಗಿಡದ ಅಭಿಪ್ರಾಯ ವ್ಯಕ್ತಪಡಿಸಿದರು.
ಶ್ರಾವಣ ಮಾಸದ ಮೊದಲ ಸೋಮವಾರದಂದು ಬೆಳಗ್ಗೆ 8:00ಗೆ ಅಭಿಷೇಕ ನೆರವೇರಿಸಲಾಯಿತು. ಬಂದ ಭಕ್ತರಿಗೆ ಅನ್ನ ದಾಸೋಹ ವ್ಯವಸ್ಥೆ ಮಾಡಲಾಯಿತು ಈ ಸಂದರ್ಭದಲ್ಲಿ. ಶೇಖರ್ ನಾಗಲಿಕರ್. ಕಿರಣ ಕಂದಗಲ್. ಮಲ್ಲಿಕಾರ್ಜುನ ಮಜ್ಜಿಗೆ ಸಂತೋಷ್ ಸರಫ್ ಅಕ್ಕ ಮಹಾ ದೇವಿ ಗಣಮುಖಿ ಸೂಗಪ್ಪ ಕಲಿಕೇರಿ ಶ್ರೀಧರ್ ಮಸ್ಕಿ ರವಿಶಂಕರ್ ಕಂದಗಲ್ ಶಶಿರೇಖಾ ಶಕುಂತಲಾ ಸರಫ್, ರಮೇಶ್ ಮೇಣಜಿಗಿ,ಜಗದೀಶ ಸರಫ್, ಸಾಗರ್, ಬಸವ, ಸೃಷ್ಟಿ ಮತ್ತಿತರರು ಭಾಗವಹಿಸಿದ್ದರು.
ವರದಿ : ರಮೇಶ ನಾಯಕ್.